ETV Bharat / bharat

ಭಾರಿ ಮಳೆಯಿಂದ ಠಾಣೆಯೊಳಗೆ ನುಗ್ಗಿದ ನೀರು: 4 ದಿನದಿಂದ ಒದ್ದೆ ಬಟ್ಟೆಯಲ್ಲೇ ಪೊಲೀಸರಿಂದ ಡ್ಯೂಟಿ - ಬಿಹಾರದಲ್ಲಿ ಪ್ರವಾಹ

ಬಿಹಾರದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

Flood water entered the police station
ಭಾರಿ ಮಳೆಯಿಂದ ಠಾಣೆಯೊಳಗೆ ನುಗ್ಗಿದ ನೀರು
author img

By

Published : Jul 4, 2021, 9:32 PM IST

ಬೆತಿಯಾ (ಬಿಹಾರ): ಪೊಲೀಸ್​ ಠಾಣೆಯೊಳಗೆ ಪ್ರವಾಹದ ನೀರು ನುಗ್ಗಿದ್ದು, ಅದನ್ನು ಲೆಕ್ಕಿಸದೆ ಬಿಹಾರದ ಬೆತಿಯಾ ಪೊಲೀಸ್​ ಠಾಣೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪರಿಸ್ಥಿತಿ ವಿವರಿಸುತ್ತಿರುವ ಈಟಿವಿ ಭಾರತ ಪ್ರತಿನಿಧಿ

ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳೆಲ್ಲ ತುಂಬಿ ಹೋಗಿವೆ. ಅದರಂತೆ ಬೆತಿಯಾ ಜಿಲ್ಲೆಯಲ್ಲಿನ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಬೆತಿಯಾ ಚನ್ಪತಿಯ ಮೂಲಕ ಹಾದುಹೋಗುವ ಸಿಕ್ರಹ್ನಾ ನದಿಯ ನೀರು ಗೋಪಾಲಪುರ ಪೊಲೀಸ್ ಠಾಣೆಯ ಎಲ್ಲೆಡೆ ತುಂಬಿ ಹೋಗಿದೆ. ಪರಿಣಾಮ, ಠಾಣೆಯೊಳಗೆ ನೀರು ನುಗ್ಗಿದೆ. ಇದರಿಂದಾಗಿ ಪೊಲೀಸ್​ ಸಿಬ್ಬಂದಿ ಠಾಣೆ ಛಾವಣಿಯ ಮೇಲೆ ಆಶ್ರಯ ಪಡೆದಿದ್ದಾರೆ.

Flood water entered the police station in Bettiah
ಮಳೆಯನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಸಿಬ್ಬಂದಿ

ಮಳೆಯ ಅಬ್ಬರದಿಂದ ಪೊಲೀಸ್​ ಠಾಣೆ ಆವರಣದಲ್ಲಿ 3-4 ಅಡಿ ನೀರು ಹರಿಯುತ್ತಿದೆ. ಠಾಣೆ ಆವರಣದಲ್ಲಿ ನೀರು ಪ್ರವೇಶಿಸುವುದರಿಂದ ಸಮಸ್ಯೆ ಹೆಚ್ಚಾಗಿದೆ. ಪರಿಸ್ಥಿತಿ ಏನೇ ಇರಲಿ, ಕರ್ತವ್ಯದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಸತತ 4 ದಿನಗಳ ಮಳೆಯಿಂದಾಗಿ ಸಮವಸ್ತ್ರವೂ ಸಹ ಒಣಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವು ಒದ್ದೆಯಾದ ಬಟ್ಟೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ಗೋಪಾಲಪುರ ಪೊಲೀಸ್​ ಠಾಣೆಯ ಎಸ್‌ಎಚ್‌ಒ ರಾಜ್ರೂಪ್ ರಾಯ್​​.

ಬೆತಿಯಾ ಜಿಲ್ಲೆಯಲ್ಲಿ ಮಳೆಯ ಅಬ್ಬರ

ಬೆತಿಯಾ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಹಳ್ಳಿಗಳಿಗೆ ನೀರು ಪ್ರವೇಶಿಸಿದೆ. ಗಂಡಕ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಚನ್ಪತಿಯ, ಲೌರಿಯಾ, ಮಜೋಲಿಯಾ, ಯೋಗಪಟ್ಟಿ ಬ್ಲಾಕ್‌ನ ಅನೇಕ ಗ್ರಾಮಗಳು ದ್ವೀಪಗಳಾಗಿ ಮಾರ್ಪಟ್ಟಿವೆ. ಅಣೆಕಟ್ಟಿನಿಂದ ಬಿಡುಗಡೆಯಾದ ನೀರು ನದಿಗಳ ಮೂಲಕ ಗ್ರಾಮಕ್ಕೆ ಪ್ರವೇಶಿಸಿದೆ. ಇದರಿಂದಾಗಿ ಅನೇಕ ಗ್ರಾಮಗಳು ಪ್ರವಾಹದಲ್ಲಿ ಸಿಲುಕಿವೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.