ETV Bharat / bharat

ಅಸ್ಸೋಂನಲ್ಲಿ ವಿಕೋಪಕ್ಕೆ ತಿರುಗಿದ ಪ್ರವಾಹ.. 45 ಸಾವಿರ ಮಂದಿ ನಿರಾಶ್ರಿತ, ಸಂಕಷ್ಟದಲ್ಲಿ ಲಕ್ಷಾಂತರ ಪ್ರಾಣಿಪಕ್ಷಿಗಳು! - ನಲ್ಬರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ

ಅಸ್ಸೋಂನ ನಲ್ಬರಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಬಂದಿದೆ. ಪರಿಣಾಮ 45 ಸಾವಿರ ಮಂದಿ ಮನೆ- ಮಠ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಅಸ್ಸೋಂನಲ್ಲಿ ವಿಕೋಪಕ್ಕೆ ತಿರುಗಿದ ಪ್ರವಾಹ.. 45 ಸಾವಿರ ಮಂದಿ ನಿರಾಶ್ರಿತ, ಸಂಕಷ್ಟದಲ್ಲಿ ಲಕ್ಷಾಂತರ ಪ್ರಾಣಿಪಕ್ಷಿಗಳು!

author img

By

Published : Jun 22, 2023, 10:34 AM IST

ನಲ್ಬರಿ (ಅಸ್ಸೋಂ): ಇಲ್ಲಿನ ನಲ್ಬರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜಿಲ್ಲೆಯ 6 ಕಂದಾಯ ವೃತ್ತಗಳಲ್ಲಿ ಸುಮಾರು 45,000 ಜನರು ಮತ್ತು 108 ಹಳ್ಳಿಗಳು ಜಲಾವೃತಗೊಂಡಿವೆ. ಮೊಯಿರಾರಂಗ, ಬಟಗಿಲ ಗ್ರಾಮದ ಸುಮಾರು 200 ಕುಟುಂಬಗಳು ಈ ಪ್ರವಾಹದಿಂದ ಸಂತ್ರಸ್ತರಾಗಿದ್ದು, ಬಹುತೇಕ ಕುಟುಂಬಗಳು ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಂಡು ರಸ್ತೆ, ಒಡ್ಡುಗಳಲ್ಲಿ ಆಶ್ರಯ ಪಡೆದಿವೆ.

  • #WATCH | Flood situation in Assam's Nalbari remains grim as water level rises following incessant rainfall; visuals from Moiraranga village of Nalbari pic.twitter.com/vFVQvFSikV

    — ANI (@ANI) June 22, 2023 " class="align-text-top noRightClick twitterSection" data=" ">

ಅಸ್ಸೋಂ ಮತ್ತು ನೆರೆಯ ದೇಶ ಭೂತಾನ್‌ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪಗ್ಲಾಡಿಯಾ ನದಿಯ ನೀರಿನ ಮಟ್ಟವು ಅಪಾಯ ಅಂಚನ್ನು ತಲುಪಿದ್ದು, ಕಳೆದ 24 ಗಂಟೆಗಳಲ್ಲಿ ಹೊಸ ಪ್ರದೇಶಗಳನ್ನು ಆವೇಶದಿಂದ ಧ್ವಂಸ ಮಾಡುತ್ತಾ ಸಾಗಿದೆ.

ಜಿಲ್ಲೆಯ ಘೋಗ್ರಾಪರ್, ತಿಹು, ಬರ್ಭಾಗ್ ಮತ್ತು ಧಮ್‌ಧಾಮ ಪ್ರದೇಶದ ಸುಮಾರು 90 ಗ್ರಾಮಗಳು ಪ್ರವಾಹದ ನೀರಿನಿಂದ ಮುಳುಗಿವೆ. ಸಾವಿರಾರು ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ರಸ್ತೆಗಳು, ಎತ್ತರದ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಆಶ್ರಯ ಪಡೆದುಕೊಂಡಿದ್ದಾರೆ. ಪ್ರವಾಹದ ನೀರು ತಮ್ಮ ಮನೆಗೆ ನುಗ್ಗಿದ್ದರಿಂದ ಹತ್ತಿರದಲ್ಲೇ ಇದ್ದ ಎತ್ತರದ ಪ್ರದೇಶಕ್ಕೆ ಸ್ಥಳಾಂತರವಾಗಿದ್ದೇವೆ ಎಂದು ಇಲ್ಲಿನ ಸ್ಥಳೀಯ ನಿವಾಸಿ ಮನೋಜ್ ರಾಜ್‌ಬೊಂಗ್​ಶಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

“ಪ್ರವಾಹದ ನೀರು ಮನೆಗೆ ಪ್ರವೇಶಿಸಿದ ನಂತರ ನನ್ನ ಕುಟುಂಬವು ಈಗ ಒಡ್ಡುಗಳಲ್ಲಿ ವಾಸಿಸುತ್ತಿದೆ. ಪ್ರವಾಹದ ನೀರು ಮನೆಗೆ ನುಗ್ಗಿದ ನಂತರ ನಮ್ಮ ಮನೆಯಲ್ಲಿದ್ದ ಎಲ್ಲ ವಸ್ತುಗಳಿಗೆ ಹಾನಿಯಾಗಿದೆ. ಇದರಿಂದ ನಾವು ಈಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ" ಎಂದು ಮನೋಜ್ ರಾಜ್‌ಬೊಂಗ್‌ಶಿ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 2 ಸೇತುವೆಗಳು, 15ಕ್ಕೂ ರಸ್ತೆಗಳು, ಮೋರಿಗಳು ಒಡೆದು ಹೋಗಿವೆ. ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ವರದಿಗಳ ಪ್ರಕಾರ, ಅಸ್ಸೋಂ ಹಾಗೂ ಅದರ ನೆರೆಯ ರಾಜ್ಯಗಳು ಮತ್ತು ನೆರೆಯ ದೇಶ ಭೂತಾನ್‌ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಹಲವಾರು ನದಿಗಳ ನೀರಿನ ಮಟ್ಟವು ಏರಿಕೆಯಾಗಿದ್ದು, ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.

"ನಾಲ್ಬರಿ ಜಿಲ್ಲೆಯಲ್ಲಿ 44,707 ಜನರು ಸಂತ್ರಸ್ತರಾಗಿದ್ದಾರೆ. ಬಕ್ಸಾದಲ್ಲಿ 26,571 ಜನರು, ಲಖಿಂಪುರದಲ್ಲಿ 25096 ಜನರು, ತಮುಲ್ಪುರದಲ್ಲಿ 15610 ಜನರು, ಬಾರ್ಪೇಟಾ ಜಿಲ್ಲೆಯಲ್ಲಿ 3840 ಜನರು ಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. 1.07 ಲಕ್ಷಕ್ಕೂ ಹೆಚ್ಚು ಸಾಕುಪ್ರಾಣಿಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿವೆ.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಬುಧವಾರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ 1280 ಜನರನ್ನು ಸ್ಥಳಾಂತರಿಸಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನು ಓದಿ: ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ.. ಇಂದು ಮುಂದುವರೆಯುವ ಸಾಧ್ಯತೆ: ಶಾಲೆಗಳಿಗೆ ರಜೆ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.