ETV Bharat / bharat

ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ..ಹೇಳಿಕೆ ನೀಡಿದ ಡಿಜಿಸಿಎ

ಚೆನ್ನೈನಿಂದ ತಿರುಚಿರಾಪಳ್ಳಿಗೆ ಹೊರಡಲು ಅಣಿಯಾಗಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದರಿಂದ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಡಿಸೆಂಬರ್​ನಲ್ಲಿ ನಡೆದಿದೆ.

ವಿಮಾನದ ತುರ್ತು ಬಾಗಿಲು ತೆರೆದ ಸಂಸದ ತೇಜಸ್ವಿ ಸೂರ್ಯ: ತಮಿಳುನಾಡು ಸಚಿವರ ಆರೋಪ
flight-passenger-opens-emergency-door-creates-havoc-in-indigo-plane
author img

By

Published : Jan 17, 2023, 5:36 PM IST

Updated : Jan 18, 2023, 10:28 AM IST

ಚೆನ್ನೈ: ಕಳೆದ ಡಿಸೆಂಬರ್‌ ತಿಂಗಳಲ್ಲಿ ಟೇಕ್ ​ಆಫ್​ ಆಗಲು ಅಣಿಯಾಗಿದ್ದ ಇಂಡಿಗೋ ವಿಮಾನದ ತುರ್ತು ಬಾಗಿಲನ್ನು ಪ್ರಯಾಣಿಕನೊಬ್ಬ ತೆರೆದ ಘಟನೆ ವರದಿಯಾಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದು, ತಪಾಸಣೆ ಬಳಿಕ ವಿಳಂಬವಾಗಿ ಹಾರಾಟ ನಡೆಸಬೇಕಾಯಿತು.

ಡಿಜಿಸಿಎದಿಂದ ಸ್ಪಷ್ಟನೆ: ಡಿಸೆಂಬರ್ 10 ರಂದು ಇಂಡಿಗೋ 6E ಫ್ಲೈಟ್ 6E 7339 ಚೆನ್ನೈನಿಂದ ತಿರುಚಿರಾಪಳ್ಳಿಗೆ ಪ್ರಯಾಣ ಬೆಳೆಸಲು ಸಜ್ಜಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆ ಬಳಿಕ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಯಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ವಿಮಾನ ಟೆಕ್​ಆಫ್​ ಆಗುವ ಮುನ್ನವೇ ಆಕಸ್ಮಿಕವಾಗಿ ಈ ಘಟನೆ ನಡೆದಿದ್ದು, ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು, ತುರ್ತು ಬಾಗಿಲು ಬಂದ್​ ಮಾಡುವ, ವಿಮಾನದ ಇತರ ಸುರಕ್ಷತಾ ಕ್ರಮಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಯಿತು ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಟ್ವೀಟ್
ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಟ್ವೀಟ್

ಇಂಡಿಗೋ ಏರ್​​ಲೈನ್ಸ್​​ನಿಂದಲೂ ಹೇಳಿಕೆ: ಮತ್ತೊಂದೆಡೆ, ಪ್ರಯಾಣಿಕರೊಬ್ಬರು ಆಕಸ್ಮಾತ್​ ಆಗಿ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದು, ಬಳಿಕ ಅವರು ಕ್ಷಮೆಕೋರಿದರು ಎಂದು ಇಂಡಿಗೋ ಏರ್​ಲೈನ್ಸ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ತಪಾಸಣೆಗಳನ್ನು ನಡೆಸಲಾಯಿತು. ಇದರಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಯಿತು ಎಂದು ಏರ್​​ಲೈನ್ಸ್​ ತಿಳಿಸಿದೆ. ಆದರೆ ಡಿಜಿಸಿಎ ಹಾಗೂ ಇಂಡಿಗೋ ಬಾಗಿಲು ತೆರೆದ ಪ್ರಯಾಣಿಕರ ಗುರುತನ್ನು ಬಹಿರಂಗಪಡಿಸಿಲ್ಲ.

ತಮಿಳುನಾಡು ಸಚಿವರ ಟ್ವೀಟ್​ನಲ್ಲಿ ಏನಿದೆ? : ಮತ್ತೊಂದೆಡೆ ಈ ಘಟನೆ ಬಗ್ಗೆ ಡಿಸೆಂಬರ್ 29 ರಂದು ಟ್ವೀಟ್ ಮಾಡಿದ್ದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ, ಫೋಟೋಶಾಪ್​ ಪಕ್ಷವೊಂದರ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಪಕ್ಷದ ಯುವ ನಾಯಕನ ಬೇಜವಾಬ್ದಾರಿಯಿಂದ ವಿಮಾನದ ತುರ್ತು ಬಾಗಿಲು ತೆರೆಯಲಾಗಿತ್ತು. ಆ ಬಳಿಕ ನಿಯಮಾನುಸಾರ ಪ್ರಯಾಣಿಕರನ್ನು ಇಳಿಸಿ ಪರಿಶೀಲನೆ ಮಾಡಲಾಯಿತು ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆಯಿಂದ ವಿಮಾನ 3 ಗಂಟೆ ತಡವಾಯಿತು. ಅಲ್ಲದೇ ಅವರು ಕ್ಷಮಾಪಣೆ ಪತ್ರ ಬರೆದು ಕ್ಷಮೆ ಕೋರಿದ್ದರು. ಈ ಸುದ್ದಿ ಏಕೆ ಮಾಧ್ಯಮಗಳಲ್ಲಿ ಏಕೆ ಇಲ್ಲ?‘‘ ಎಂದು ತಮಿಳಿನಲ್ಲಿ ಅವರು ಟ್ವೀಟ್‌ ಮಾಡಿ ಪ್ರಶ್ನಿಸಿದ್ದಾರೆ.

ಕ್ಷಮಾಪಣೆ ಬಳಿಕ ಪ್ರಯಾಣಕ್ಕೆ ಅವಕಾಶ: ಕ್ಷಮಾಪಣೆ ಪತ್ರದ ಬಳಿಕ ಬಾಗಿಲು ತೆರೆದ ಪ್ರಯಾಣಿಕನಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಯಿತು. ಅವರ ಸೀಟ್​ ಅನ್ನು ಬದಲಾಯಿಸಿ, ಬೇರೆ ಆಸನದ ವ್ಯವಸ್ಥೆ ಮಾಡಲಾಯಿತು ಎಂದು ವರದಿಯಾಗಿದೆ.

ಇದನ್ನೂ ಓದಿ: ಶುಗರ್ ಫ್ಯಾಕ್ಟರಿ ಚಿಮಣಿಯಿಂದ ನಿತ್ಯ ಹೊರಸೂಸುತ್ತಿದೆ ಬೂದಿ: ಎಂಟು ಹಳ್ಳಿಯ ಜನ ಹೈರಾಣು

Last Updated : Jan 18, 2023, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.