ಶಿಮ್ಲಾ: ಹಿಮಾಚಲ ಪ್ರದೇಶದ ಲಾಹೋಲ್-ಸ್ಪಿತಿ ಎಂಬಲ್ಲಿ ಭಾರಿ ಮಳೆಯಿಂದ ಎದುರಾಗಿರುವ ಹಠಾತ್ ಪ್ರವಾಹದ ಮಧ್ಯೆ 150 ಜನ ಸಿಲುಕಿಕೊಂಡಿದ್ದಾರೆ ಎಂದು ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಸೋಮವಾರ ತಿಳಿಸಿದೆ.
ಆಡಳಿತ, ಪೊಲೀಸ್ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಲಾಹೌಲ್-ಸ್ಪಿಟಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ತಿಳಿಸಿದೆ. ಹಠಾತ್ ಪ್ರವಾಹದಿಂದಾಗಿ ಲಾಹೌಲ್ ಉಪ ವಿಭಾಗದ ಸುಮ್ಡೋ-ಕಾಜಾ-ಗ್ರಾಂಫೂ (ಎಸ್‌ಕೆಜಿ) ರಸ್ತೆಯು ಬ್ಲಾಕ್ ಆಗಿದ್ದರಿಂದ, ರವಿವಾರ ರಾತ್ರಿ 11.15 ರ ಸುಮಾರಿಗೆ ಚತ್ರು ಮತ್ತು ದೋರ್ನಿ ಮೋರ್ಹ್ ಬಳಿ 150 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ಡಿಇಒಸಿ ಹೇಳಿದೆ.
ಕೇಲಾಂಗ್ ಉಪವಿಭಾಗದ ತಹಶೀಲ್ದಾರ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಯೋಧರು ಮತ್ತು ಪೊಲೀಸರು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನು ಓದಿ:ನದಿ ನೀರಿನ ಸೆಳೆತದಲ್ಲಿಯೇ ನಡೆದು ದಡ ಸೇರಿದ ವಿದ್ಯಾರ್ಥಿಗಳು: ವಿಡಿಯೋ