ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದರು. ಪಂಚಪ್ರಾಣಗಳ ಪ್ರತಿಪಾದನೆ ಮಾಡಿದರು.
ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜಗತ್ತಿನಾದ್ಯಂತ ನಮ್ಮ ಭಾರತದ ಧ್ವಜ ಹಾರಾಡುತ್ತಿದೆ. ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ. ಇಡೀ ದೇಶ ಇಂದು ಹೊಸ ಸಂಕಲ್ಪ ಮಾಡಬೇಕು. ಇಡೀ ದೇಶ ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ದೇಶದ ಮೂಲೆ ಮೂಲೆಯಿಂದ ಹೋರಾಟ ನಡೆದಿತ್ತು ಎಂದು ಹೇಳಿದರು.
-
#WATCH Live: Prime Minister Narendra Modi addresses the nation from the ramparts of the Red Fort on #IndependenceDay (Source: DD National)
— ANI (@ANI) August 15, 2022 " class="align-text-top noRightClick twitterSection" data="
https://t.co/7b8DAjlkxC
">#WATCH Live: Prime Minister Narendra Modi addresses the nation from the ramparts of the Red Fort on #IndependenceDay (Source: DD National)
— ANI (@ANI) August 15, 2022
https://t.co/7b8DAjlkxC#WATCH Live: Prime Minister Narendra Modi addresses the nation from the ramparts of the Red Fort on #IndependenceDay (Source: DD National)
— ANI (@ANI) August 15, 2022
https://t.co/7b8DAjlkxC
ನಾರಾಯಣ ಗುರು ನೆನೆದ ಮೋದಿ: ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ನಾರಿ ಶಕ್ತಿ ಏನೆಂಬದು ಸಹ ಸಾಬೀತಾಗಿತ್ತು. ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ರವೀಂದ್ರನಾಥ್ ಠಾಗೂರ್ ಸೇರಿದಂತೆ ದೇಶದ ವಾಸಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಹೋರಾಡಿದ್ದರು. ಅವರಿಗೆಲ್ಲರೂ ನಮ್ಮ ದೊಡ್ಡ ನಮನ. ಅವರೆಲ್ಲರೂ ದೇಶದ ಚೇತನವಾಗಿದ್ದಾರೆ ಎಂದರು.
ನಾರಿ ಶಕ್ತಿಯ ಭಾರತ: ಭಾರತದ ಮೇಲಿನ ಪ್ರೀತಿಗಾಗಿ ತ್ಯಾಗ, ಬಲಿದಾನ ಮತ್ತು ದೇಶಕ್ಕಾಗಿ ಜೀವ ಕೊಟ್ಟವರನ್ನೂ ನಾವು ಎಂದಿಗೂ ಮರೆಯಬಾರದು. ಹೋರಾಟದ ಹಾದಿಯಲ್ಲಿ ಪ್ರಾಣ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ನಾಗರಿಕರು ನಮನ ಸಲ್ಲಿಸಬೇಕು. ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ, ಬೇಗುನ್ ಹಜರತ್ ಮಹಲ್ ಸೇರಿದಂತೆ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತದ ಪ್ರಜೆಯೂ ಹೆಮ್ಮೆ ಪಡುತ್ತಾರೆ.
ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿ ವೀರರಿಗೆ ಈ ರಾಷ್ಟ್ರ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಹೋರಾಟವನ್ನು ನೆನಪಿಸಿಕೊಂಡರು.
-
#WATCH | Independence Day celebrations begin at the Red Fort in Delhi. pic.twitter.com/MXmdS3xiRe
— ANI (@ANI) August 15, 2022 " class="align-text-top noRightClick twitterSection" data="
">#WATCH | Independence Day celebrations begin at the Red Fort in Delhi. pic.twitter.com/MXmdS3xiRe
— ANI (@ANI) August 15, 2022#WATCH | Independence Day celebrations begin at the Red Fort in Delhi. pic.twitter.com/MXmdS3xiRe
— ANI (@ANI) August 15, 2022
ಇದು ಎಲ್ಲ ನಾಗರಿಕರನ್ನು ಸ್ಮರಿಸುವ ದಿನ: ಆಜಾದಿ ಮಹೋತ್ಸವದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರೀಯ ವೀರರನ್ನು ಸ್ಮರಿಸಿದ್ದೇವೆ. ಆಗಸ್ಟ್ 14 ರಂದು ನಾವು ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ಸ್ಮರಿಸುವ ದಿನ.
ಬ್ರಿಟಿಷರು ನಿರ್ಗಮಿಸಿದ್ರೆ ದೇಶವು ಅಭೂತಪೂರ್ವ ಬಿಕ್ಕಟ್ಟುಗಳನ್ನು ಎದುರಿಸಲಿದೆ ಎಂಬ ಆತಂಕವನ್ನು ಭಾರತದ ಸ್ವಾತಂತ್ರ್ಯದ ಬಗ್ಗೆ ಸೃಷ್ಟಿಸಲಾಗಿದ್ದರೂ, ಭಾರತಕ್ಕೆ ಅಂತರ್ಗತ ಶಕ್ತಿ ಇದೆ ಎಂದು ಆಗ ಜಗತ್ತಿಗೆ ತಿಳಿದಿರಲಿಲ್ಲ. ರಾಷ್ಟ್ರವು ಪ್ರಜಾಪ್ರಭುತ್ವದ ತಾಯಿಯನ್ನು ಉಳಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
-
#WATCH PM Narendra Modi hoists the National Flag at Red Fort on the 76th Independence Day pic.twitter.com/VmOUDyf7Ho
— ANI (@ANI) August 15, 2022 " class="align-text-top noRightClick twitterSection" data="
">#WATCH PM Narendra Modi hoists the National Flag at Red Fort on the 76th Independence Day pic.twitter.com/VmOUDyf7Ho
— ANI (@ANI) August 15, 2022#WATCH PM Narendra Modi hoists the National Flag at Red Fort on the 76th Independence Day pic.twitter.com/VmOUDyf7Ho
— ANI (@ANI) August 15, 2022
ಎಲ್ಲರಿಗೂ ಕೋವಿಡ್ ಲಸಿಕೆ ಕೊಟ್ಟ ಹೆಮ್ಮೆ ಇದೆ: ಕೋವಿಡ್ ಲಸಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಜಗತ್ತು ಗೊಂದಲದಲ್ಲಿದೆ. ಆದ್ರೆ ಭಾರತವು 200 ಕೋಟಿ ಡೋಸ್‌ಗಳನ್ನು ನೀಡುವ ಸಾಧನೆ ಮಾಡಿದೆ. ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವು ಮಹತ್ವಾಕಾಂಕ್ಷೆಯ ಸಮಾಜವಾಗಿದ್ದು, ಅಲ್ಲಿ ಬದಲಾವಣೆಗಳು ಸಾಮೂಹಿಕ ಮನೋಭಾವದಿಂದ ನಡೆಸಲ್ಪಡುತ್ತವೆ. ಭಾರತದ ಜನರು ಸಕರಾತ್ಮಕ ಬದಲಾವಣೆಗಳನ್ನು ಬಯಸುತ್ತಾರೆ ಮತ್ತು ಅದಕ್ಕೆ ಕೊಡುಗೆ ನೀಡಲು ಇಚ್ಛಿಸುತ್ತಾರೆ. ಪ್ರತಿ ಸರ್ಕಾರವು ಈ ಮಹತ್ವಾಕಾಂಕ್ಷೆಯ ಸಮಾಜವನ್ನು ಪರಿಹರಿಸಬೇಕಾಗಿದೆ ಎಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
100 ವರ್ಷಗಳ ಸ್ವಾತಂತ್ರ್ಯಕ್ಕಾಗಿ 'ಪಂಚ ಪ್ರಾಣ' ಇಟ್ಟ ಪ್ರಧಾನಿ ನರೇಂದ್ರ ಮೋದಿ: ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವಾಗ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬ ಪ್ರತಿಜ್ಞೆಯನ್ನು ಈಗಿನಿಂದಲೇ ತೆಗೆದುಕೊಳ್ಳುವಂತೆ ಯುವ ಜನತೆಗೆ ಪ್ರಧಾನಿ ಮೋದಿ ಮನವಿ ಮಾಡಿದರು.
ಭಾರತಕ್ಕೆ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳುವ ಶಕ್ತಿ ಬರಬೇಕು ಹಾಗೂ ಅಭಿವೃದ್ಧಿ ಹೊಂದಿದ ಭಾರತವಾಗಿ ನಿರ್ಮಾಣಗೊಳ್ಳಬೇಕು ಇದು ಮೊದಲ ಆದ್ಯತೆ ಎಂದು ಪ್ರಧಾನಿ ಇದೇ ವೇಳೇ ಘೋಷಣೆ ಮಾಡಿದರು.
-
India at 75: PM Modi pays tribute to Mahatma Gandhi at Rajghat
— ANI Digital (@ani_digital) August 15, 2022 " class="align-text-top noRightClick twitterSection" data="
Read @ANI Story | https://t.co/02Z5RsYpPm#IndiaAt75 #PMModi #MahatmaGandhi #Rajghat pic.twitter.com/sotM6ojhLH
">India at 75: PM Modi pays tribute to Mahatma Gandhi at Rajghat
— ANI Digital (@ani_digital) August 15, 2022
Read @ANI Story | https://t.co/02Z5RsYpPm#IndiaAt75 #PMModi #MahatmaGandhi #Rajghat pic.twitter.com/sotM6ojhLHIndia at 75: PM Modi pays tribute to Mahatma Gandhi at Rajghat
— ANI Digital (@ani_digital) August 15, 2022
Read @ANI Story | https://t.co/02Z5RsYpPm#IndiaAt75 #PMModi #MahatmaGandhi #Rajghat pic.twitter.com/sotM6ojhLH
ಇನ್ನು ಗುಲಾಮಗಿರಿಯ ಕುರುಹುಗಳಿಂದ ಮುಕ್ತಿ ಹೊಂದಬೇಕು ಹಾಗೂ ಎಲ್ಲರೂ ತಲೆ ಎತ್ತಿ ಬದುಕಬೇಕು ಎಂದು ಪ್ರತಿಪಾದಿಸಿದರು. ಇನ್ನು ದೇಶದ ಪರಂಪರೆ ಕಾಪಾಡಿಕೊಂಡು ಹೋಗುವುದು ಹಾಗೂ ನಮ್ಮ ಪರಂಪರೆಗೆ ಬೆಲೆ ಕೊಡುವುದು ಎಲ್ಲ ಜವಾಬ್ದಾರಿ ಎಂಬುದನ್ನು ಅಮೃತ ಮಹೋತ್ಸವದ ವೇಳೆ ಪ್ರಧಾನಿ ಎಲ್ಲ ನಾಗರಿಕರಿಗೆ ನೆನಪಿಸಿಕೊಟ್ಟರು.
ಏಕತೆಯಿಂದ ಕೂಡಿ ಬಾಳುವುದು ನಮ್ಮೆಲ್ಲರ ಆದ್ಯತೆ ಇದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿರುತ್ತದೆ ಎಂದು ಇದೇ ವೇಳೆ ಅವರು ಘೋಷಣೆ ಮಾಡಿದರು. ಪೂರ್ವಜರ ಕನಸನ್ನು ನಾವು ನನಸು ಮಾಡಬೇಕು. ಅದಕ್ಕಾಗಿ ನಾವು ಈ ಐದು ತತ್ವಗಳು ಪಾಲಿಸಬೇಕು ಎಂದು ಮೋದಿ ಕರೆ ನೀಡಿದರು.
ನನ್ನ ನೋವು ದೇಶವಾಸಿಗಳ ಎದುರು ಹೇಳದಿದ್ದರೆ ಇನ್ನೆಲ್ಲಿ ಹೇಳಲಿ: ನನಗೆ ನೋವಿದೆ. ಈ ನೋವನ್ನು ದೇಶವಾಸಿಗಳ ಮುಂದೆ ಹೇಳದಿದ್ದರೆ ಎಲ್ಲಿ ಹೇಳಲಿ?.. ಮಹಿಳೆಯರನ್ನು ಅವಮಾನಿಸುವ ಎಲ್ಲಾ ನಡವಳಿಕೆಯಿಂದ ನಮ್ಮನ್ನು ನಾವು ಮುಕ್ತಗೊಳಿಸಲು ನಿರ್ಧರಿಸಬಹುದೇ? ಮಹಿಳಾ ಗೌರವವು ಭಾರತದ ಕನಸುಗಳನ್ನು ನನಸಾಗಿಸುವ ಪ್ರಮುಖ ಅಂಶವಾಗಿದೆ. ನಾವು ಮಹಿಳೆಯರನ್ನು ಅಗೌರವಗೊಳಿಸುತ್ತೇವೆ. ಪ್ರಕೃತಿಯಿಂದ, ಸಂಸ್ಕೃತಿಯಿಂದ, ದೈನಂದಿನ ಜೀವನದಲ್ಲಿ ಮಹಿಳೆಯರನ್ನು ಅವಮಾನಿಸುವ ಎಲ್ಲವನ್ನೂ ತೊಡೆದುಹಾಕಲು ನಾವು ಪ್ರತಿಜ್ಞೆ ತೆಗೆದುಕೊಳ್ಳಬಹುದೇ ಎಂದು ಪ್ರಧಾನಿ ಮೋದಿ ನಾಗರಿಕರನ್ನು ಪ್ರಶ್ನಿಸಿದರು.
-
Every India is filled with pride when they remember the strength of the women of India- be it Rani Laxmibai, Jhalkari Bai, Chennamma, Begum Hazrat Mahal: PM Modi at Red Fort pic.twitter.com/HiVSfDbxZZ
— ANI (@ANI) August 15, 2022 " class="align-text-top noRightClick twitterSection" data="
">Every India is filled with pride when they remember the strength of the women of India- be it Rani Laxmibai, Jhalkari Bai, Chennamma, Begum Hazrat Mahal: PM Modi at Red Fort pic.twitter.com/HiVSfDbxZZ
— ANI (@ANI) August 15, 2022Every India is filled with pride when they remember the strength of the women of India- be it Rani Laxmibai, Jhalkari Bai, Chennamma, Begum Hazrat Mahal: PM Modi at Red Fort pic.twitter.com/HiVSfDbxZZ
— ANI (@ANI) August 15, 2022
ರಾಷ್ಟ್ರದ ಕನಸುಗಳನ್ನು ನನಸಾಗಿಸುವಲ್ಲಿ ಮಹಿಳೆಯರ ಹೆಮ್ಮೆ ದೊಡ್ಡ ಬಂಡವಾಳವಾಗಲಿದೆ. ನಾನು ಇದನ್ನು ನೋಡುತ್ತಿದ್ದೇನೆ ಎಂದು ಹೇಳಿದ ಪ್ರಧಾನಿ ಮೋದಿ ಅವರು, ಭಾರತದ 'ನಾರಿ ಶಕ್ತಿ'ಯನ್ನು ಶ್ಲಾಘಿಸಿದ್ದಾರೆ. ಕೆಲಸ ಮತ್ತು ಜೀವನದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮೋದಿಯವರು ಹೆಚ್ಚಿಸಿದ್ದಾರೆ.
ಆತ್ಮನಿರ್ಭರ್ಗೆ ಕರೆ ನೀಡಿದ ಮೋದಿ: ರಾಷ್ಟ್ರವು 'ಆತ್ಮನಿರ್ಭರ್' ಆಗಲು, ಜಗತ್ತಿನಲ್ಲಿ ಛಾಪು ಮೂಡಿಸಲು ಸಹಾಯ ಮಾಡುವಂತೆ ಭಾರತೀಯರು ಮತ್ತು ಖಾಸಗಿ ವಲಯದ ವ್ಯವಹಾರಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ನಾವು ಸ್ವದೇಶಿ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಸ್ಟಾರ್ಟ್‌ಅಪ್‌ಗಳು ಯುವಜನರಿಗೆ ಹೊಸ ವೇದಿಕೆಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳುವ ಮೂಲಕ ಭಾರತದಲ್ಲಿನ ತಂತ್ರಜ್ಞಾನ ಕ್ಷೇತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಭ್ರಷ್ಟಾಚಾರ ತೊಲಗಿಸಲು ಮತ್ತೆ ಕರೆ ನೀಡಿದ ಪ್ರಧಾನಿ: ಭಾರತವು ಅಭಿವೃದ್ಧಿ ಹೊಂದಲು ಸಹಕಾರಿ ಸ್ಪರ್ಧಾತ್ಮಕ ಫೆಡರಲಿಸಂ ಅಗತ್ಯವಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಸಮಾನತೆಯನ್ನು ಗಮನಿಸಿದ ಪ್ರಧಾನಿ ಮೋದಿ ಭ್ರಷ್ಟಾಚಾರ ಮತ್ತು ಪರಿವಾರದ ವಿರುದ್ಧ ಹೋರಾಡಲು ಭಾರತಕ್ಕೆ ಕರೆ ಕೊಟ್ಟರು.
ರಾಜಕೀಯದಲ್ಲಿ ಪರಿವಾರದ ದುರದೃಷ್ಟಕರ ಅಭ್ಯಾಸವು ಇತರ ವಿಭಾಗಗಳಿಗೂ ಹರಡಿದೆ. ಇದರಿಂದಾಗಿ ಪ್ರತಿಭೆಗಳು ಬಳಲುತ್ತಿದ್ದಾರೆ. 'ಟೀಮ್ ಇಂಡಿಯಾ'ದ ಸ್ಪೂರ್ತಿಯು ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಅವರು 'ಜೈ ಹಿಂದ್' ಮತ್ತು 'ವಂದೇ ಮಾತರಂ' ಘೋಷಣೆಗಳನ್ನು ಕೂಗಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಮುಗಿಸಿದ ಕೂಡಲೇ ಕೆಂಪು ಕೋಟೆಯಿಂದ ತ್ರಿವರ್ಣ ಬಲೂನ್‌ಗಳನ್ನು ಬಿಡುಗಡೆ ಮಾಡಲಾಯಿತು. ಇದಕ್ಕೂ ಮೊದಲು ಪ್ರಧಾನಿ ಮೋದಿ ರಾಜಘಾಟ್ಗೆ ತೆರಳಿ ಮಹತ್ಮಾಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಅಲ್ಲಿಂದ ಅವರು ಕೆಂಪು ಕೋಟೆ ತಲುಪಿದರು. ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ತುಕಡಿಗಳು ಪ್ರಧಾನಿಗೆ ಶಿಷ್ಟಾಚಾರದಂತೆ ಗೌರವ ವಂದನೆ ಸಲ್ಲಿಸಿದವು.
ಓದಿ: ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ.. ಶುಭಾಶಯ ಕೋರಿದ ಬೈಡನ್