ETV Bharat / bharat

ಇಂದು ಭಾರತದ ಧ್ವಜ ದಿನ: ಸಶಸ್ತ್ರ ಪಡೆಗಳ ಯೋಧರ ಸೇವೆ, ಶೌರ್ಯ, ತ್ಯಾಗಕ್ಕೆ ಗೌರವಾರ್ಪಣೆ - ಯೋಧರ ತ್ಯಾಗ

The Armed Forces Flag Day: ಈ ದಿನ ದೇಶಾದ್ಯಂತ ರಾಷ್ಟ್ರಧ್ವಜ ಸೇರಿ ಮೂರೂ ಸೇನೆಗಳನ್ನು ಪ್ರತಿನಿಧಿಸುವ ಧ್ವಜಗಳನ್ನು ಸಾಮಾನ್ಯ ನಾಗರಿಕರಿಗೆ ಮಾರಾಟ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.

FLAG DAY OF INDIA
ಸಶಸ್ತ್ರ ಪಡೆಗಳ ಧ್ವಜ ದಿನ
author img

By ETV Bharat Karnataka Team

Published : Dec 7, 2023, 1:10 PM IST

ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಯೋಧರ ತ್ಯಾಗ, ಶೌರ್ಯ ಹಾಗೂ ಸಮರ್ಪಣೆ ಗೌರವಿಸುವ ಹಾಗೂ ವೀರ ಯೋಧರ ತ್ಯಾಗದ ಸ್ಮರಣಾರ್ಥವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್​ 7 ರಂದು ಅಂದರೆ ಇಂದು ಭಾರತದ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸಶಸ್ತ್ರ ಪಡೆಗಳ ಧ್ವಜ ದಿನ ಎಂದೂ ಆಚರಿಸಲ್ಪಡುವ ಈ ದಿನ ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಜೊತೆಗೆ ಮೂರೂ ಸೇನೆಗಳನ್ನು ಪ್ರತಿನಿಧಿಸುವ ಧ್ವಜ, ಬ್ಯಾಡ್ಜ್​, ಸ್ಟಿಕ್ಕರ್​ ಹಾಗೂ ಇತರ ವಸ್ತುಗಳ ಮಾರಾಟ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.

ದೇಶದ ಒಳಗೆ ಪ್ರತಿಯೊಬ್ಬ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸಲು, ಚಳಿ, ಗಾಳಿ, ಮಳೆ, ಬಿಸಿಲೆನ್ನದೇ ದೇಶದ ಗಡಿ, ವಾಯುನೆಲೆ, ನೌಕಾನೆಲೆಯಲ್ಲಿ ಅದೆಷ್ಟೋ ಸೈನಿಕರು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ರಕ್ಷಣೆಗಾಗಿ ಅದೆಷ್ಟೋ ಯೋಧರು ತ್ಯಾಗ, ಬಲಿದಾನವನ್ನು ಮಾಡಿದ್ದಾರೆ. ಹೀಗೆ ದೇಶಕ್ಕಾಗಿ ಭೂಸೇನೆ, ನೌಕಾಪಡೆ, ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಹುತಾತ್ಮರಾಗಿರುವ ಯೋಧರ ಸ್ಮರಣಾರ್ಥ ಈ ಸಶಸ್ತ್ರ ಧ್ವಜ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ಭಾರತೀಯ ಸೈನಿಕರು, ನೌಕಾಪಡೆ ಹಾಗೂ ವಾಯುಸೇನೆ ಯೋಧರ ಗೌರವಾರ್ಥವಾಗಿ ಈ ದಿನವನ್ನು ಹಲವು ವರ್ಷಗಳಿಂದ ಭಾರತದ ಧ್ವಜ ದಿನ ಅಥವಾ ಸಶಸ್ತ್ರ ಪಡೆಗಳ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಶಸ್ತ್ರ ಪಡೆಗಳ ನಿಜ ಜೀವನದ ಸೂಪರ್​ ಹೀರೋಗಳನ್ನು ವಾರ್ಷಿಕವಾಗಿ ಡೆಸೆಂಬರ್​ 7 ರಂದು ಗೌರವಿಸಲಾಗುತ್ತದೆ.

ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆಯನ್ನು ಪ್ರತಿನಿಧಿಸುವ ಕಡು ನೀಲಿ, ತಿಳಿ ನೀಲಿ ಹಾಗೂ ಕೆಂಪು ಬಣ್ಣಗಳ ಸಣ್ಣ ಧ್ವಜಗಳನ್ನು ಈ ದಿನ ದೇಶದಾದ್ಯಂತ ವಿತರಿಸಲಾಗುತ್ತದೆ. ಧ್ವಜ ದಿನದಂದು ಸಂಗ್ರಹಿಸಿದ ಹಣವನ್ನು ಭಾರತದ ಮೂರೂ ಸೇನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಕಲ್ಯಾಣದ ಜೊತೆಗೆ, ಯುದ್ಧದಲ್ಲಿ ಗಾಯಗೊಂಡವರ ಪುನರ್ವಸತಿಗಾಗಿ, ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೈನಿಕರು, ಹುತಾತ್ಮ ಯೋಧರು ಹಾಗೂ ಸೇನಾ ಸಿಬ್ಬಂದಿಯ ಕುಟುಂಬಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ.

ಸಶಸ್ತ್ರ ಪಡೆಗಳ ಧ್ವಜ ದಿನದ ಇತಿಹಾಸ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ದೇಶದ ರಕ್ಷಣಾ ಸಿಬ್ಬಂದಿಯ ಯೋಗಕ್ಷೇಮ ನಿರ್ವಹಣೆಗಾಗಿ ಆಗಿನ ಸರ್ಕಾರ, 1949ರ ಆಗಸ್ಟ್​ 28ರಂದು ಆಗಿನ ಭಾರತದ ರಕ್ಷಣಾ ಸಚಿವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ಪ್ರತಿವರ್ಷ ಡಿಸೆಂಬರ್​ 7 ರಂದು ವಾರ್ಷಿಕ ಧ್ವಜ ದಿನ ಆಚರಿಸಲು ನಿರ್ಣಯ ಕೈಗೊಂಡಿತು. ಸಾಮಾನ್ಯ ಜನರಿಗೆ ಸಣ್ಣ ಧ್ವಜಗಳನ್ನು ವಿತರಿಸುವುದು ಹಾಗೂ ಪ್ರತಿಯಾಗಿ ದೇಣಿಗೆಯನ್ನು ಸಂಗ್ರಹಿಸುವುದು ಈ ಆಚರಣೆಯ ಹಿಂದಿನ ಆಲೋಚನೆಯಾಗಿತ್ತು.

ಧ್ವಜ ದಿನದಂದು ಭಾರತೀಯ ಸಶಸ್ತ್ರ ಪಡೆಗಳ ಎಲ್ಲ ಮೂರು ಶಾಖೆಗಳಾದ ಭಾರತೀಯ ಸೇನೆ, ವಾಯುಪಡೆ, ಮತ್ತು ನೌಕಾಪಡೆಯಿಂದ ಸಾರ್ವಜನಿಕರಿಗೆ ವಿವಿಧ ಪ್ರದರ್ಶನಗಳು, ಕಾರ್ನೀವಲ್​ಗಳು, ನಾಟಕಗಳು ಹಾಗೂ ಇತರ ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.