ETV Bharat / bharat

ಸಾವಿನಲ್ಲೂ ಸಾರ್ಥಕತೆ ಮೆರೆದ ಐದು ವರ್ಷದ ಬಾಲಕಿ: ಇಬ್ಬರ ಬಾಳಿಗೆ ಬೆಳಕಾದ ಕೇತಿ - ನೇತ್ರ ದಾನ

ವ್ಯಕ್ತಿ ಸಾವನ್ನಪ್ಪಿದ ಆರು ಗಂಟೆಯೊಳಗೆ ಕಣ್ಣುಗಳನ್ನು ದಾನ ಮಾಡಬಹುದು.

ಸಾವಿನಲ್ಲೂ ಸಾರ್ಥಕತೆ ಮೆರೆದ ಐದು ವರ್ಷದ ಬಾಲಕಿ; ಇಬ್ಬರ ಬಾಳಿಗೆ ಬೆಳಕಾದ ಕೇಟಿ
five-year-old-girl-sudden-demise-parents-donated-her-eyes
author img

By

Published : Dec 16, 2022, 3:15 PM IST

ಆಗ್ರಾ: ಅಕಾಲಿಕ ಸಾವನ್ನಪ್ಪಿದ ಐದು ವರ್ಷದ ಬಾಲಕಿಯ ಕಣ್ಣುಗಳನ್ನು ದಾನ ಮಾಡಲು ಆಕೆಯ ಪೋಷಕರು ಮುಂದಾಗಿದ್ದಾರೆ. ಬೇರೊಬ್ಬರ ಜೀವನದಲ್ಲಿ ಬೆಳಕು ಮೂಡಿಸುವ ಮೂಲಕ ಪುಟ್ಟ ಮಗಳನ್ನು ಕಾಣಲು ಮುಂದಾಗಿದ್ದಾರೆ. ಕುಟುಂಬದ ಆಸೆಯಂತೆ ಎಸ್​ಎನ್​ ಮೆಡಿಕಲ್​ ಕಾಲೇಜಿನ ಐ ಬ್ಯಾಂಕ್​ನಿಂದ ಐದು ವರ್ಷದ ಮಗುವಿನ ಕಣ್ಣುಗಳನ್ನು ಪಡೆಯಲಾಗಿದೆ.

ಐದು ವರ್ಷದ ಮಗುವಿನ ಕಣ್ಣುಗಳನ್ನು ದಾನ ಮಾಡಿರುವುದು ಆಗ್ರಾದಲ್ಲಿ ಇದೀಗ ಎಲ್ಲರ ಮೆಚ್ಚುಗೆ ಪಡೆದಿದೆ. ಉತ್ತರ ವಿಜಯನಗರ ಕಾಲೋನಿಯ ಸಿಎ ಆಗಿರುವ ವಿಜಯ್​ ಅಗರ್​ವಾಲ್​ ಐದು ವರ್ಷದ ಮಗಳು ಕೇತಿ ನೇತ್ರಗಳನ್ನು ದಾನ ಮಾಡಿದ್ದಾರೆ. ಗುರುವಾರ ಬೆಳಗ್ಗೆ 8.30ಕ್ಕೆ ಕೇತಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾಳೆ. ಪುಟ್ಟ ಮಗು ಕಳೆದುಕೊಂಡ ದುಃಖದಲ್ಲೂ ವಿವೇಕ್​ ಕುಟುಂಬ ಇನ್ನೊಬ್ಬರಿಗೆ ಬೆಳಕಾಗಲು ನಿರ್ಧರಿಸಿ, ಎಸ್​ಎನ್​ ಮೆಡಿಕಲ್​ ಕಾಲೇಜ್​ ಐ ಬ್ಯಾಂಕ್​ನ ಡಾ. ಶೆಫಲಿ ಮಜುಂದಾರ್​ ಅವರನ್ನು ಸಂಪರ್ಕಿಸಿದ್ದಾರೆ.

ಇಬ್ಬರಿಗೆ ಬೆಳಕಾಗಲಿರುವ ಕೇತಿ: ಮಗು ಕೇತಿ ಕಣ್ಣುಗಳಿಂದ ಕಾರ್ನಿಯಾವನ್ನು ಪಡೆದಿದ್ದು, ಅಂಧರಾಗಿರುವ ಇಬ್ಬರು ವಯಸ್ಕರಿಗೆ ಅಳವಡಿಸಲಾಗುವುದು. ಇದರಿಂದ ಅವರು ಜಗತ್ತನ್ನು ನೋಡಲಿದ್ದಾರೆ ಎಂದು ಡಾ. ಶೆಫಲಿ ಮಜುಂದಾರ್​ ತಿಳಿಸಿದ್ದಾರೆ. ವ್ಯಕ್ತಿ ಸಾವನ್ನಪ್ಪಿದ ಆರು ಗಂಟೆಯೊಳಗೆ ಕಣ್ಣುಗಳನ್ನು ದಾನ ಮಾಡಬಹುದು.

ಇದನ್ನೂ ಓದಿ: ನಾಲ್ಕು ಕಾಲಿರುವ ಹೆಣ್ಣು ಶಿಶುವಿಗೆ ಮಹಿಳೆ ಜನ್ಮ.. ಮಗು ಸಂಪೂರ್ಣ ಆರೋಗ್ಯಕರ ವೈದ್ಯರು ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.