ಹೈದರಾಬಾದ್: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಕೋವಿಡ್ ಮಹಾಮಾರಿ ನಡುವೆ ಪಶ್ಚಿಮ ಬಂಗಾಳದ 292, ತಮಿಳುನಾಡಿನ 234 ಕ್ಷೇತ್ರ, ಕೇರಳದ 140, ಅಸ್ಸೋಂನ 126 ಹಾಗೂ ಪುದುಚೇರಿಯ 30 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಕೊರೊನಾ ಸಂಕಷ್ಟದಲ್ಲೂ ಚುನಾವಣೆ ನಡೆದಿದ್ದ ಕಾರಣ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲು ಕಂಡಿದ್ದರೆ, ಅಸ್ಸೋಂ ಹಾಗೂ ಪುದುಚೇರಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಜೈಲಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಗೆದ್ದ ರೈತ ಮುಖಂಡ.. ಅಸ್ಸೋಂನಲ್ಲಿ ಹೊಸ ದಾಖಲೆ
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ
ಕೇಂದ್ರ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಅವರ ಪಕ್ಷ ಭರ್ಜರಿ ಜಯ ಸಾಧಿಸಿದೆ. 294 ಕ್ಷೇತ್ರಗಳ ಪೈಕಿ 292 ಸ್ಥಾನಗಳಿಗೆ ಮತದಾನವಾಗಿದ್ದು, ಟಿಎಂಸಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
292 ಕ್ಷೇತ್ರಗಳ ಫಲಿತಾಂಶ
ಟಿಎಂಸಿ 212ರಲ್ಲಿ ಗೆಲುವು, 3 ಸ್ಥಾನದಲ್ಲಿ ಮುನ್ನಡೆ
ಬಿಜೆಪಿ 73 ಸ್ಥಾನ ಗೆಲುವು, 2ರಲ್ಲಿ ಮುನ್ನಡೆ
ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು
ಇತರೆ 1 ಕ್ಷೇತ್ರದಲ್ಲಿ ಗೆಲುವು
- ಕೇರಳದಲ್ಲಿ ಗೆದ್ದ ಪಿಣರಾಯಿ ವಿಜಯನ್
140 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲಿದ್ದು, 99 ಸ್ಥಾನಗಳಲ್ಲಿ ಎಲ್ಡಿಎಫ್ ಗೆಲುವು ದಾಖಲಿಸಿದೆ. ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ ಜಯ ಸಾಧಿಸುವಲ್ಲಿ ಸೋತಿದೆ.
ಕೇರಳ 144 ಕ್ಷೇತ್ರದ ಫಲಿತಾಂಶ
ಎಲ್ಡಿಎಫ್ 99 ಸ್ಥಾನದಲ್ಲಿ ಜಯ
ಯುಡಿಎಫ್ 41 ಸ್ಥಾನದಲ್ಲಿ ಗೆಲುವು
ಬಿಜೆಪಿ 0 ಸ್ಥಾನ
- ತಮಿಳುನಾಡಿನಲ್ಲಿ ಸ್ಟಾಲಿನ್ಗೆ ಶುಕ್ರದೆಸೆ
ತಮಿಳುನಾಡಿನ 234 ಸ್ಥಾನಗಳ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಭರ್ಜರಿ ಗೆಲುವು ಕಂಡಿದ್ದು, 10 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಮೂಲಕ ಆಡಳಿತರೂಢ ಎಐಎಡಿಎಂಕೆಗೆ ಮುಖಭಂಗವಾಗಿದೆ.
ತಮಿಳುನಾಡಿನ 234 ಕ್ಷೇತ್ರ
ಡಿಎಂಕೆ 125 ಸ್ಥಾನಗಳಲ್ಲಿ ಗೆಲುವು, 33ರಲ್ಲಿ ಮುನ್ನಡೆ
ಎಐಎಡಿಎಂಕೆ 51 ಸ್ಥಾನಗಳಲ್ಲಿ ಗೆಲುವು 25ರಲ್ಲಿ ಮುನ್ನಡೆ
ಬಿಜೆಪಿ 2 ಸ್ಥಾನದಲ್ಲಿ ಜಯಭೇರಿ
- ಅಸ್ಸೋಂ ಗೆದ್ದ ಬಿಜೆಪಿ
ಅಸ್ಸೋಂನಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲಿದ್ದು, ಮುಖ್ಯಮಂತ್ರಿ ದರ್ಬಾನಂದ ಸೋನಾವಾಲಾ 2ನೇ ಬಾರಿಗೆ ಸಿಎಂ ಗದ್ದುಗೆ ಏರಲಿದ್ದಾರೆ. ಎನ್‌ಡಿಎ ಪಕ್ಷಕ್ಕೆ ಕಾಂಗ್ರೆಸ್ ತಿರುಗೇಟು ನೀಡಲು ಸಾಧ್ಯವಾಗಿಲ್ಲ.
ಅಸ್ಸೋಂ 126 ಕ್ಷೇತ್ರ
ಬಿಜೆಪಿ ಮೈತ್ರಿ 74 ಕ್ಷೇತ್ರಗಳಲ್ಲಿ ಜಯ, 1 ಸ್ಥಾನದಲ್ಲಿ ಮುನ್ನಡೆ
ಕಾಂಗ್ರೆಸ್ ಮೈತ್ರಿ 47 ಸ್ಥಾನದಲ್ಲಿ ಗೆಲುವು, 3 ಕ್ಷೇತ್ರಗಳಲ್ಲಿ ಮುನ್ನಡೆ
ಇತರೆ 1 ಸ್ಥಾನದಲ್ಲಿ ಗೆಲುವು
- ಪುದುಚೇರಿಯಲ್ಲಿ ಅರಳಿದ ಕಮಲ
ಪುದುಚೆರಿಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸೋತು ನಿರಾಸೆಗೊಳಗಾಗಿದೆ. ಈ ಹಿಂದೆ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ ಸರ್ಕಾರವನ್ನ ಕೆಡವಿಹಾಕಿತ್ತು.
ಪುದುಚೇರಿ 30 ಕ್ಷೇತ್ರ
ಬಿಜೆಪಿ ಮೈತ್ರಿ 15 ಸ್ಥಾನದಲ್ಲಿ ಜಯ
ಕಾಂಗ್ರೆಸ್ ಮೈತ್ರಿ 7ಕ್ಷೇತ್ರದಲ್ಲಿ ಜಯ
ಇತರೆ 4 ಸ್ಥಾನದಲ್ಲಿ ಜಯ, 1 ಕ್ಷೇತ್ರದಲ್ಲಿ ಮುನ್ನಡೆ