ETV Bharat / bharat

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: 5 ಅಪ್ರಾಪ್ತರು ಸೇರಿ ಆರು ಜನರ ಬಂಧನ - ಐವರು ಅಪ್ರಾಪ್ತರು ಸೇರಿದಂತೆ ಆರು ಜನ ಆರೋಪಿಗಳ ಬಂಧನ

ಬಾಲಕಿಯೊಬ್ಬಳು ಕಳೆದ ಶುಕ್ರವಾರ ರಾತ್ರಿ ಸಣ್ಣ ಸಿಲಿಂಡರ್​ಗೆ ಗ್ಯಾಸ್ ತುಂಬಿಸಲು ಹೋದಾಗ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Five minors among 6 held for gangrape of minor girl
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : May 26, 2022, 9:55 PM IST

ನವದೆಹಲಿ: ಪಶ್ಚಿಮ ವಿಹಾರದ ಪಶ್ಚಿಮ ಪ್ರದೇಶದಲ್ಲಿ ಮೇ. 20 ರಂದು 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಐವರು ಅಪ್ರಾಪ್ತರು ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ದೆಹಲಿಯನ್ನು ತೊರೆಯಲು ಸಿದ್ಧತೆ ನಡೆಸಿದ್ದ ಮೂವರನ್ನೂ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಐಪಿಸಿಯ ಸೆಕ್ಷನ್ 354, 354B, 341, 376DA, ಮತ್ತು 6/17/21 ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿ, ಶುಕ್ರವಾರ ರಾತ್ರಿ ಸಣ್ಣ ಸಿಲಿಂಡರ್​​ಗೆ ಗ್ಯಾಸ್ ತುಂಬಿಸಲು ಆ ಪ್ರದೇಶದ ರೈಲ್ವೆ ಗೇಟ್‌ನಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದಳು. ಆಗ ಆರೋಪಿಗಳಲ್ಲಿ ಒಬ್ಬನು ಬಾಲಕಿಯನ್ನು ರೈಲ್ವೆ ಹಳಿ ಬದಿಗೆ ಕರೆದೊಯ್ದಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

ಇದನ್ನೂ ಓದಿ: ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಹೊತ್ತಿ ಉರಿದ ಮನೆ.. ಸಜೀವ ಸಮಾಧಿಯಾದ ಮಗು!

ಬಾಲಕಿಯನ್ನು ಅಲ್ಲಿಗೆ ಕರೆದೊಯ್ಯುವ ಮೊದಲೇ, ಕೆಲವು ಇತರ ಹುಡುಗರು ಆಗಲೇ ಬಂದಿದ್ದರು. ಅವರು ಹುಡುಗಿಯನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ನಂತರ, ಸಂತ್ರಸ್ತೆ ಕಷ್ಟಪಟ್ಟು ಮನೆಗೆ ಬಂದು ಈ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ.

ನಂತರ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರ ಪ್ರಕಾರ, ಐವರು ಆರೋಪಿಗಳು ಅಪ್ರಾಪ್ತರು ಮತ್ತು ಆರನೇಯವನು 21 ವರ್ಷ ವಯಸ್ಸಿನವನು. ಆರೋಪಿಗಳು ಸಂತ್ರಸ್ತೆಯ ವಿಡಿಯೋ ಮಾಡಿದ್ದ ಮೊಬೈಲ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.