ETV Bharat / bharat

ಮರಕ್ಕೆ ಕಾರು ಡಿಕ್ಕಿ: 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಉತ್ತರಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 5ಜನ ಸಾವನ್ನಪ್ಪಿದ್ದಾರೆ.

ಮರಕ್ಕೆ ಕಾರು ಡಿಕ್ಕಿ
ಮರಕ್ಕೆ ಕಾರು ಡಿಕ್ಕಿ
author img

By ETV Bharat Karnataka Team

Published : Oct 31, 2023, 10:12 AM IST

ಹರ್ದೋಯಿ (ಉತ್ತರಪ್ರದೇಶ): ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಹರ್ದೋಹಿ ಜಿಲ್ಲೆಯ ಬಿಲಹೌರ್ - ಕತ್ರಾ ಹೆದ್ದಾರಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಹರ್ದೋಯಿ ಎಸ್ಪಿ ದುರ್ಗೇಶ್ ಕುಮಾರ್ ಸಿಂಗ್ ಮಾತನಾಡಿ, ನಿನ್ನೆ ರಾತ್ರಿ ಸುಮಾರಿಗೆ ಘಟನೆ ನಡೆದಿದೆ. ಮೃತರೆಲ್ಲರೂ ಪಚ್‌ದೇವ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಕಾಂತ್ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಸ್ಥಳೀಯರು ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸ್ಥಳದಲ್ಲಿ ಕಾರಿನಲ್ಲಿ ಪತ್ತೆಯಾದ ಮೊಬೈಲ್ ಫೋನ್​ನ ಸಹಾಯದಿಂದ ಮೃತರನ್ನು ಗುರುತಿಸಲಾಗಿದೆ. ಮುಖೇಶ್, ಅವರ 4 ವರ್ಷದ ಮಗ ಬಲ್ಲು, ಹೊಶಿಯಾರ್, ರಾಜಾರಾಮ್ ಮತ್ತು ಮನೋಜ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಿಂಗ್​ ತಿಳಿಸಿದ್ದಾರೆ.

ಎರಡೂ ಟ್ರಕ್​ಗಳ ನಡುವೆ ಡಿಕ್ಕಿ: ರಾಜಸ್ಥಾನದ ಸಿರೋಹಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸಜೀವದಹನವಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಡಿಕ್ಕಿಯ ರಭಸಕ್ಕೆ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಡ್ರೈವರ್​ ಮತ್ತು ಕ್ಲೀನರ್​ ಸಜೀವದಹನ ವಾಗಿದ್ದರು. ಮೃತರನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿತ್ತು.

ಬಸ್​ ಟಾಟಾ ಸುಮೋಕಾರು ಅಪಘಾತ: ತಮಿಳುನಾಡಿನ ಅಣ್ಣಾಮಲೈಯರ್​ ದೇವಾಲಯಕ್ಕೆ ಬೇಟಿ ನೀಡಿ ದರ್ಶನ ಮುಗಿಸಿ ತಮ್ಮ ಮನೆಗೆ ವಾಪಸ್​ ಆಗುತ್ತಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ (ಅ.24ರಂದು) ನಡೆದಿತ್ತು. ಮೃತರೆಲ್ಲರೂ ಅಸ್ಸೋಂ ಮೂಲದವರು ಎಂದು ಗುರುತಿಸಲಾಗಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಣ್ಣಾಮಲೈಯರ್​ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂತಿರುಗುವಾಗ ಅಪಘಾತದ ಸಂಭವಿಸಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ 4 ಮಂದಿ ಮತ್ತು ಬಸ್​ನಲ್ಲಿದ್ದ 10 ಮಂದಿ ಸೇರಿ ಒಟ್ಟು 14 ಮಂದಿ ಗಾಯಗೊಂಡಿದ್ದರು.

ಲಾರಿ ಕಾರು ನಡುವೆ ಡಿಕ್ಕಿ: ಕಳೆದ ಅಕ್ಟೋಬರ್​ 15ರಂದು ಇಲ್ಲಿನ ಚೆಂಗಾಮ್​ ಬಳಿಯ ಪಕ್ಕಿರಿಪಾಲಯಂ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿ ಮಕ್ಕಳು ಸೇರಿ ಏಳು ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಡಿಕ್ಕಿ.. ಡ್ರೈವರ್​, ಕ್ಲೀನರ್ ಸಜೀವದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.