ETV Bharat / bharat

ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ಐವರ ಸಾವು.. ನೋಯ್ಡಾ ಲಿಫ್ಟ್​ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ಲಖನೌದಲ್ಲಿ ನಡೆದಿದೆ.

author img

By ETV Bharat Karnataka Team

Published : Sep 16, 2023, 11:42 AM IST

Updated : Sep 16, 2023, 12:32 PM IST

ಮನೆಯ ಮೇಲ್ಛಾವಣೆ ಕುಸಿದು ಒಂದೇ ಕುಟುಂಬದ ಐವರು ಸಾವು

ಲಖನೌ (ಉತ್ತರಪ್ರದೇಶ): ಉತ್ತರಪ್ರದೇಶದ ಲಖನೌ ಜಿಲ್ಲೆಯಲ್ಲಿ ಮನೆಯೊಂದರ ಛಾವಣಿ ಕುಸಿದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಇಲ್ಲಿಯ ಆನಂದನಗರದ ಓಲ್ಡ್​​ ರೈಲ್ವೆ ಕಾಲೋನಿ ಪ್ರದೇಶದಲ್ಲಿ ಇಂದು ಬೇಳಗಿನ ಜಾವ ಮನೆಯ ಛಾವಣೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರೋಜಿನಿ ದೇವಿ (35), ಸತೀಶ್ ಚಂದ್ರ (40), ಹರ್ಷಿತಾ (10), ಹರ್ಷಿತ್ (13) ಮತ್ತು ಅಂಶ್ (5) ಮೃತರು ಎಂದು ಗುರುತಿಸಲಾಗಿದೆ. ಎನ್​​ಡಿಆರ್​ಎಫ್​ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿ ಐವರನ್ನು ಹೊರತೆಗೆದಿದ್ದಾರೆ.

ಘಟನೆ ಬಗ್ಗೆ ಲಖನೌ ಪೂರ್ವ ವಿಭಾಗದ ಡಿಸಿಪಿ ಹೃದೇಶ್​ ಕುಮಾರ್​ ಮಾಧ್ಯಮದೊಂದಿಗೆ ಮಾತನಾಡಿ, ಓಲ್ಡ್​ ರೈಲ್ವೆ ಕಾಲನಿಯಲ್ಲಿ ಬೆಳಗಿನ ಜಾವ 4 - 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಈ ಬಗ್ಗೆ ತಿಳಿದ ಕೂಡಲೇ ಪೊಲೀಸರು ಮತ್ತು ಎನ್​ಡಿಆರ್​ಎಫ್​ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಐವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಡಿಸಿಪಿ ಹೇಳಿದರು.

  • #WATCH | Lucknow, UP | Five people died after the roof of a house collapsed in the Old Railway Colony of Anand Nagar area. SDRF and Police have reached the spot to carry out rescue operations. pic.twitter.com/9V6CjFihTk

    — ANI UP/Uttarakhand (@ANINewsUP) September 16, 2023 " class="align-text-top noRightClick twitterSection" data=" ">

ಲಿಫ್ಟ್​ ಕುಸಿತ ಪ್ರಕರಣ: ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಿನ್ನೆ ನಿರ್ಮಾಣ ಹಂತದಲ್ಲಿನ ಕಟ್ಟಡದ ಲಿಫ್ಟ್​ ಕುಸಿದು 4 ಜನ ಕಾರ್ಮಿಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೇ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಶುಕ್ರವಾರ ಲಿಫ್ಟ್​ ಕುಸಿದು ಬಿದ್ದಿತ್ತು. ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ನಾಲ್ವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಸೆಕ್ಟರ್ 150 ಭಗತ್ ಸಿಂಗ್ ಪಾರ್ಕ್ ಬಳಿ ಎಎಸ್ ಗ್ರೂಪ್‌ನ ಸ್ಪಾರ್ಕ್ ನ್ಯೂ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ. ನಿರ್ಮಾಣವಾಗುತ್ತಿದ್ದ ಈ ಕಟ್ಟಡದಲ್ಲಿ ಸ್ಪಾರ್ಟನ್ ಕಂಪನಿಯಿಂದ ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಥೈಸೆನ್ ಕಂಪನಿಯ ಶಾಶ್ವತ ಲಿಫ್ಟ್ ಅನ್ನು ಸ್ಥಾಪಿಸಿದ ನಂತರ, ತಾತ್ಕಾಲಿಕ ಲಿಫ್ಟ್ ಅನ್ನು ತೆಗೆದುಹಾಕಲಾಗುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಕಾರ್ಮಿಕರು ನೆಲ ಮಹಡಿಯಿಂದ 14ನೇ ಮಹಡಿಗೆ ಲಿಫ್ಟ್​ನಲ್ಲಿ ಹೋಗುತ್ತಿದ್ದರು ಈ ವೇಳೆ ಲಿಫ್ಟ್​ ಕುಸಿದುಬಿದ್ದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮನೆಮುಂದೆ ಮಲಗಿದ್ದ ದಂಪತಿ ಹತ್ಯೆ ಮಾಡಿದ ದುಷ್ಕರ್ಮಿ.. ರೊಚ್ಚಿಗೆದ್ದ ಗ್ರಾಮಸ್ಥರಿಂದ ಆರೋಪಿಯ ಹತ್ಯೆ

Last Updated : Sep 16, 2023, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.