ವಿಶಾಖಪಟ್ಟಣಂ (ಆಂಧ್ರಪ್ರದೇಶ) : ಐವರು ಮಾವೋವಾದಿ ನಕ್ಸಲರು ಪೊಲೀಸರ ಮುಂದೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಚಿಂತಪಲ್ಲಿ ಉಪವಿಭಾಗದಲ್ಲಿ ನಡೆದಿದೆ.
ಈ ತಿಂಗಳಲ್ಲಿ ಸುಮಾರು 13 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಎಎಸ್ಪಿ ವಿದ್ಯಾಸಾಗರ್ ಸ್ಪಷ್ಟನೆ ನೀಡಿದ್ದು, ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಕಾರಣದಿಂದ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈಗ ನಕ್ಸಲರು ಜನರೊಂದಿಗೆ ಬೆರೆಯುತ್ತಿದ್ದು, ವಿಶಾಖಪಟ್ಟಣಂ ಪೊಲೀಸರ ಕಾರ್ಯಚಟುವಟಿಕೆಗಳಿಗೆ ಆಕರ್ಷಿತರಾಗಿದ್ದಾರೆ ಎಂದು ವಿದ್ಯಾಸಾಗರ್ ಹೇಳಿದ್ದು, ಸುಮಾರು 25 ಮಂದಿಯೂ ಕೂಡ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದಿದ್ದಾರೆ.
ಕೊರುಕೊಂಡಾ ತಂಡದ ನಕ್ಸಲರೂ ಇದ್ದು, ಅವರೂ ಶರಣಾಗಲು ಮುಂದಾಗಿದ್ದಾರೆ ಎಂದು ಎಎಸ್ಪಿ ಹೇಳಿದ್ದು, ಶರಣಾದವರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.