ETV Bharat / bharat

ಉಗ್ರರ ಅಂತ್ಯಸಂಸ್ಕಾರದ ವೇಳೆ ಮನಬಂದಂತೆ ಗುಂಡಿನ ದಾಳಿ, ಐವರ ಸಾವು

author img

By

Published : Oct 13, 2021, 11:40 AM IST

ಇತ್ತೀಚೆಗಷ್ಟೇ ಹತ್ಯೆಯಾಗಿದ್ದ ಇಬ್ಬರು ಉಗ್ರರ ಅಂತ್ಯಸಂಸ್ಕಾರದ ವೇಳೆ ಜನಸಮೂಹದ ಮೇಲೆ ದಾಳಿ ನಡೆಸಿರುವ ಉಗ್ರರು ಐವರನ್ನು ಕೊಂದು ಹಾಕಿದ್ದಾರೆ.

Five killed by militants in Manipur's Kangpokpi
ಉಗ್ರರ ಅಂತ್ಯಸಂಸ್ಕಾರದ ವೇಳೆ ಜನಸಮೂಹದ ಮೇಲೆ ಉಗ್ರರ ದಾಳಿ: ಐವರ ಸಾವು

ಕಾಂಗ್ಪೋಕ್ಪಿ (ಮಣಿಪುರ): ಜನಸಮೂಹದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಐವರನ್ನು ಹತ್ಯೆ ಮಾಡಿದ್ದಾರೆ ಎಂದು ಮಣಿಪುರದ ಪೊಲೀಸ್ ಮಹಾನಿರೀಕ್ಷಕ ಲುನ್ಸೆಹ್ ಕಿಪ್ಗೆನ್ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.

ಕಾಂಗ್ಪೋಕ್ಪಿ ಜಿಲ್ಲೆಯ ಬಿ.ಗಮ್ನೋಮ್ ಗ್ರಾಮದಲ್ಲಿ ಘಟನೆ ನಡೆದಿದೆ. ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದ ಇಬ್ಬರು ಉಗ್ರರ ಅಂತ್ಯಸಂಸ್ಕಾರದ ವೇಳೆ ಕುಕಿ ಭಯೋತ್ಪಾದಕ ಸಂಘಟನೆಯ ಸದಸ್ಯರು ಅಲ್ಲಿ ನೆರೆದಿದ್ದ ಜನರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದರು.

ಈ ವೇಳೆ ಬಿ.ಗಮ್ನೋಮ್ ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ಪಲಾಯನ ಮಾಡಿದ್ದಾರೆ. ಭದ್ರತಾ ಪಡೆಗಳು ತಮ್ಮ ಸಂಘಟನೆಯ ಸದಸ್ಯರನ್ನು ಕೊಂದ ಕಾರಣಕ್ಕೆ ಈ ರೀತಿಯ ಪ್ರತೀಕಾರವನ್ನು ಕುಕಿ ಭಯೋತ್ಪಾದಕ ಸಂಘಟನೆ ತೀರಿಸಿಕೊಂಡಿದೆ ಎಂದು ತಿಳಿದುಬಂದಿದೆ.

ದಾಳಿಯ ನಂತರ ಇಂಫಾಲ್ ಪೂರ್ವ ಪೊಲೀಸ್ ಕಮಾಂಡೋ ತಂಡ, ವಿಶೇಷ ಕಮಾಂಡೋಗಳು, ಥೌಬಲ್ ಪೊಲೀಸ್ ಕಮಾಂಡೋ ಮತ್ತು 16 ಅಸ್ಸಾಂ ರೈಫಲ್ಸ್ ತಂಡಗಳು ಭಯೋತ್ಪಾದಕರಿಗಾಗಿ ಶೋಧ ಕಾರ್ಯ ಆರಂಭಿಸಿವೆ.

ಈ ಮೊದಲು ಅಕ್ಟೋಬರ್ 9ರಂದು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು ಹಿಂಗೋಜಾಂಗ್ ಗ್ರಾಮದಲ್ಲಿ ನಾಲ್ವರನ್ನು ಕೊಂದಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ವಲಸೆ ಹೋದ ಮುಸಲ್ಮಾನರಿಗೆ ಅಲ್ಲಿ ಅಷ್ಟೊಂದು ಗೌರವ ಸಿಗುತ್ತಿಲ್ಲ: ಭಾಗವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.