ETV Bharat / bharat

ಬಾಯಲ್ಲಿ ನೀರೂರಿಸುವ ಗುಜರಾತ್​ ಗೋಲಾ: ಸ್ಟಾರ್ಟ್​ಪ್​ನಿಂದ ಟ್ರೆಂಡಿಂಗ್ ಕ್ರಿಯೇಟ್​ ಮಾಡಿದ ಐವರು ಗೆಳೆಯರು - ಗೋಲಾ ಮಾರಾಟ ಉದ್ಯಮ

ಬೇಸಿಗೆಯನ್ನೇ ಬಂಡವಾಳ ಮಾಡಿಕೊಂಡ ಐವರು ಯುವಕರು, ಹೊಸ ಉದ್ಯಮ ಪ್ರಾರಂಭಿಸಿ ಸದ್ಯ ಟ್ರೆಂಡಿಂಗ್​ನಲ್ಲಿದ್ದಾರೆ.

Gola and entrepreneur
ಬಾಯಲ್ಲಿ ನೀರೂರಿಸುವ ಗುಜರಾತ್​ ಗೋಲಾ ಹಾಗೂ ಯುವಕರು
author img

By

Published : May 30, 2023, 7:50 PM IST

ಬಾಯಲ್ಲಿ ನೀರೂರಿಸುವ ಗುಜರಾತ್​ ಗೋಲಾ

ಗುಜರಾತ್​: ಬಿಸಿ ಬಿಸಿ ಬೇಸಿಗೆಯಲ್ಲಿ ತಂಪಾಗಿ ಏನು ಸಿಕ್ಕರೂ ದೇಹ ಕೂಲ್​ ಅನಿಸುತ್ತೆ. ಈ ಬೇಸಿಗೆಯ ಬಿಸಿಲನ್ನೇ ಬಂಡವಾಳ ಮಾಡಿಕೊಂಡಿರುವ ಐದು ಯುವಕರ ತಂಡವೊಂದು, ಐಸ್​ ಗೋಲಾ ಮಾರಾಟ ಉದ್ಯಮವನ್ನು ಪ್ರಾರಂಭಿಸಿದೆ. ಇದು ಗುಜರಾತ್​ನ ಕೆಲವು ವಿಶೇಷ ಖಾದ್ಯಗಳಲ್ಲಿ ಒಂದು. ಗುಜರಾತ್​ನಲ್ಲಿ ಜನಪ್ರಿಯವಾಗಿರುವ ಈ ಖಾದ್ಯದ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಈ ಸಿಹಿಯಾದ, ತಂಪಾದ ಖಾದ್ಯದಿಂದಲೇ ಭುಜ್​ನ ಐದು ಜನ ಯುವಕರು ಆಹಾರ ಪ್ರಿಯರ ರುಚಿಯನ್ನು ತಣಿಸುತ್ತಿದ್ದಾರೆ.

ಬೇಸಿಗೆಗೆಂದೇ ಹೇಳಿ ಮಾಡಿಸಿದ ಐಸ್ ಮತ್ತು ಆಹಾರದ ಸುವಾಸನೆಯಿಂದ ಮಾಡಿದ ಖಾದ್ಯಕ್ಕೆ ಗುಜರಾತಿಯಲ್ಲಿ ಗೋಲಾ ಎಂದು ಕರೆಯಲಾಗುತ್ತದೆ. ಅರ್ಧ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಭಾಗದಲ್ಲಿ ಆಕರ್ಷಕವಾಗಿ ಈ ಗೋಲಾವನ್ನು ಪ್ರೆಸೆಂಟ್​ ಮಾಡಲಾಗುತ್ತದೆ. ಕಲ್ಲಂಗಡಿ ಹಣ್ಣಿನ ಅರ್ಧ ಭಾಗದ ಒಳಗೆ ಹಣ್ಣಿನ ಪೀಸ್​ಗಳು, ಐಸ್​ಕ್ರೀಂ, ಐಸ್​ ಬಾಲ್​ ಹಾಗೂ ಚೆರ್ರಿ, ಹಾಕಿ ಅಲಂಕಾರ ಮಾಡಿ ಸರ್ವ್​ ಮಾಡಲಾಗುತ್ತದೆ. ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರಿಸುವ ಈ ಖಾದ್ಯ ಸದ್ಯ ಗುಜರಾತಿನಲ್ಲಿ ಈ ಯುವಕರಿಂದಾಗಿ ಟ್ರೆಂಡಿಂಗ್​ನಲ್ಲಿದೆ. ಗುಜರಾತ್​ನಲ್ಲಿ ಮಾತ್ರವಲ್ಲ Instagram ನ ಟ್ರೆಂಡಿಂಗ್​ ರೀಲ್ಸ್​ನಲ್ಲೂ ಈ ಖಾದ್ಯದ ವಿಡಿಯೋಗಳು ಓಡುತ್ತಿವೆ. ಇದರಿಂದಾಗಿ ರಾತ್ರೋರಾತ್ರಿ ಈ ಐದು ಯುವಕರು ಸುದ್ದಿಯಾಗಿದ್ದಾರೆ.

ಸದ್ಯ ಈ ಯುವಕರು ಫುಡ್ ಫ್ಯೂಷನ್ ವೈವಿಧ್ಯದ ಮೂಲಕ ಖ್ಯಾತಿ ಗಳಿಸಿದ್ದಾರೆ. ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಕೇದಾರ್, ಉತ್ಸವ್, ಭಾವೇಶ್, ಫೆನಿಲ್ ಮತ್ತು ಅವಧೇಶ್ ಎಂಬ 5 ಯುವಕರು ಪ್ರಸಕ್ತ ಬೇಸಿಗೆಯಲ್ಲಿ 3-4 ದಿನಗಳಲ್ಲಿ ಐಸ್ ಕ್ರೀಂಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮ ಪ್ರಾರಂಭಿಸಲು ನಿರ್ಧರಿಸಿದರು.

ಭುಜ್‌ನಲ್ಲಿ ಎಲ್ಲಿಯೂ ಸಿಗದ ವಸ್ತು, ಭುಜ್‌ನ ಜನರನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ಯಾರೂ ಮಾಡದಂತಹ ಗೋಲಾಗಳನ್ನು ಮಾಡಲು ನಿರ್ಧರಿಸಿದರು. ಫ್ರಾಸ್ಟ್ ಅಂಡ್ ಫೈರ್ ಹೆಸರಿನ ಅಂಗಡಿ ಆರಂಭಿಸಿದರು. ಫ್ರೂಟ್‌ವಾಲಾ ಗೋಲಾ, ವಿಶೇಷ ಗೋಲಾ ಕೇವಲ 3-4 ದಿನಗಳಲ್ಲಿ ಪ್ರಸಿದ್ಧಿ ಪಡೆದಿದೆ.

ಭುಜ್​ನಲ್ಲಿ ಟ್ರೆಂಡಿಂಗ್​ನಲ್ಲಿರುವ ಈ ಗೋಲಾ ಸವಿಯಲು ತಡರಾತ್ರಿಯವರೆಗೂ ಜನ ಇಲ್ಲಿ ಬರುತ್ತಿದ್ದಾರೆ. ಅದರಲ್ಲೂ ಕಲ್ಲಂಗಡಿ ಹಣ್ಣಿನ ಗುಂಡಿಯಲ್ಲಿ ನೀಡುವ ಗೋಲಾಗಾಗಿ ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಪ್ರತಿದಿನ 15 ರಿಂದ 20 ಗ್ರಾಹಕರು ವಿದೇಶಿ ಹಣ್ಣಿನ ಚೆಂಡುಗಳ ಗೋಲ ತಿನ್ನಲು ಬರುತ್ತಾರೆ. ಇದಲ್ಲದೇ ಮಾವಾ ಮಲೈ ಗೋಲ ಮತ್ತು ಫ್ರೋಜನ್ ಚಾಕೊಲೇಟ್ ಗೋಲ ಕೂಡ ಜನರ ಅಚ್ಚುಮೆಚ್ಚಿನದಾಗಿದೆ.

ಈ ಬಗ್ಗೆ ಸ್ಟಾರ್ಟಪ್ ಮಾಲೀಕ ಕೇದಾರ್ ರಜಪೂತ್ ಮಾತನಾಡಿದ್ದು, ಕಲ್ಲಂಗಡಿ ಹಣ್ಣನ್ನು ಎರಡು ಭಾಗಗಳಾಗಿ ತುಂಡು ಮಾಡಿದ ನಂತರ ಒಳಗಿನ ಕೆಂಪು ಭಾಗವನ್ನು ತೆಗೆದು, ಅದರಲ್ಲಿ ಮೊದಲು ಐಸ್ ಅನ್ನು ಹಾಕಲಾಗುತ್ತದೆ. ವಿವಿಧ ರುಚಿಗಳ 3 ರಿಂದ 4 ನೈಸರ್ಗಿಕ ಆಹಾರ ಸಿರಪ್​ಗಳನ್ನು ಇದಕ್ಕೆ ಸೇರಿಸಲಾಗುತ್ತದೆ.

ಅದರ ಮೇಲೆ ಐಸ್ ಸುರಿದು ಅದರ ಮೇಲೆ ಕಲ್ಲಂಗಡಿ, ಮಾವು, ಚಿಕು, ದಾಳಿಂಬೆ ಮತ್ತು ಸಕ್ಕರೆ ಕ್ಯಾಂಡಿಯಂತಹ ಹಣ್ಣುಗಳ ತುಂಡುಗಳನ್ನು ಹಾಕಲಾಗುತ್ತದೆ. ಮತ್ತೆ 3 ರಿಂದ 4 ವಿವಿಧ ರುಚಿಗಳ ಸಿರಪ್ ಅನ್ನು ಅದರ ಮೇಲೆ ಸುರಿಯಲಾಗುತ್ತದೆ. ಅದರ ಮೇಲೆ ಕಚ್ಚಿ ಮಾವೋ ಹಾಕುತ್ತಾರೆ. ಪುಡಿಮಾಡಿದ ಬಾದಾಮಿ, ಪುಡಿಮಾಡಿದ ಟೋಪ್ರಾ (ತೆಂಗಿನಕಾಯಿ), ತುಟ್ಟಿ ಫ್ರುಟ್ಟಿ, ಜೆಲ್ಲಿ, ಚೆರ್ರಿ, ದ್ರಾಕ್ಷಿ, ಗೋಡಂಬಿ, ಅದರ ಮೇಲೆ ಹಾಕಲಾಗುತ್ತದೆ. 2 ರಿಂದ 3 ರುಚಿಯ ಸಕ್ಕರೆ ಪಾಕ ಮತ್ತು ಆಹಾರದ ಸುವಾಸನೆಯ ಬಣ್ಣವನ್ನು ಮೇಲೆ ಸೇರಿಸಲಾಗುತ್ತದೆ. ಕೆನೆ ಸೇರಿಸಿ ಸರ್ವ್​ ಮಾಡಲಾಗುತ್ತದೆ.

ಮತ್ತೊಬ್ಬ ಯುವಕ ಭಾವೇಶ್ ಭಟ್ ಮಾತನಾಡಿ, "ನಾವು ಬಾಲ್ಯದಿಂದಲೂ ಐವರು ಸ್ನೇಹಿತರಾಗಿದ್ದು, ಹೊಸ ಉದ್ಯಮವನ್ನು ಪ್ರಾರಂಭಿಸಿದ್ದೇವೆ. ಈ ವಿಚಿ ಫಲ್ ಗೋಲಾಕ್ಕೆ ಈಗ ಬೇಡಿಕೆ ಹೆಚ್ಚುತ್ತಿದೆ. ಒಂದು ಬೌಲ್​ ಗೋಲಾವನ್ನು 2 ರಿಂದ 3 ಜನರು ಆರಾಮವಾಗಿ ತಿನ್ನಬಹುದು. ಪ್ರಸ್ತುತ ದಿನಕ್ಕೆ 15 ರಿಂದ 20 ಗ್ರಾಹಕರು ಬರುತ್ತಾರೆ. ಜನರು ಬಹಳ ಕಡಿಮೆ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಕಡಿಮೆ ಜಮೀನಿನಲ್ಲಿ 21 ಬಗೆಯ ಮಾವು ಬೆಳೆದ ರೈತ: ಯಾರು ಈ ಮಾದರಿ ರೈತ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.