ETV Bharat / bharat

ಎಮ್ಮೆಯ ಮೃತದೇಹದ ಮೇಲೆ ಚಲಿಸಿದ ಆಟೋ.. ಐವರ ದುರ್ಮರಣ

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಗಾಯಾಳುಗಳನ್ನು ಮಾರ್ಕಾಪುರಂನ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ..

ಅಪಘಾತ
ಅಪಘಾತ
author img

By

Published : Aug 30, 2021, 4:52 PM IST

ಪ್ರಕಾಶಂ (ಆಂಧ್ರಪ್ರದೇಶ) : ಆಟೋವೊಂದು ಎಮ್ಮೆಯ ಮೃತದೇಹದ ಮೇಲೆ ಸಂಚರಿಸಿ ಬ್ಯಾಲೆನ್ಸ್​ ತಪ್ಪಿದ್ದು, ಎದುರಿಗೆ ಬಂದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯ ತುರ್ಲಪಾಡು ಮಂಡಲದ ರೋಲುಗುಂಟಪದುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಮೃತರನ್ನು ದರ್ಶಿ ಗ್ರಾಮದ ಪೊಟ್ಲಪತಿ ಸಾರಮ್ಮ, ಗೊಂಗಟಿ ಮಾರ್ತಮ್ಮ, ಇಟ್ಟಡಿ ಲಿಂಗಮ್ಮ, ಕೋಟಮ್ಮ ಮತ್ತು ಆಟೋ ಚಾಲಕ ವೆಂಕಟೇಶ್ವರರೆಡ್ಡಿ ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದಾಗ ಬೃಹತ್​ ವಾಹನವೊಂದು ಡಿಕ್ಕಿ ಹೊಡೆದು ಎಮ್ಮೆ ಸ್ಥಳದಲ್ಲೇ ಮೃತಪಟ್ಟಿತ್ತು.

ಅದನ್ನು ಗಮನಿಸದ ಚಾಲಕ ಎಮ್ಮೆಯ ಮೃತದೇಹದ ಮೇಲೆಯೇ ಆಟೋ ಚಲಾಯಿಸಿದ್ದಾನೆ. ಬ್ಯಾಲೆನ್ಸ್ ತಪ್ಪಿದ ಆಟೋ, ಎದುರಿಗೆ ಬರುತ್ತಿದ್ದ ಮತ್ತೊಂದು ಟಿಪ್ಪರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳದಲ್ಲೇ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆಟೋದಲ್ಲಿ ಒಟ್ಟು​ 14 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಎರಡು ವರ್ಷದ ಪ್ರೀತಿಗೆ ಎಳ್ಳುನೀರು : ಬೇರೆ ಮದುವೆಯಾಗಲು ಮುಂದಾದ ಮಹಿಳೆ ಕೊಂದ ಪ್ರೇಮಿ

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಗಾಯಾಳುಗಳನ್ನು ಮಾರ್ಕಾಪುರಂನ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.