ETV Bharat / bharat

ನಕ್ಸಲರಿಂದ ಐಇಡಿ ಸ್ಫೋಟ: ಓರ್ವ ಸಿಆರ್​ಪಿಎಫ್​ ಸಿಬ್ಬಂದಿ ಹುತಾತ್ಮ, 7 ಜನರಿಗೆ ಗಾಯ - ಚತ್ತೀಸ್​ ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿ

ಚತ್ತೀಸ್​​ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ ಓರ್ವ ಸಿಆರ್​ಫಿಎಫ್​ ಸಿಬ್ಬಂದಿ ಹುತಾತ್ಮರಾಗಿದ್ದು, 7 ಜನ ಗಾಯಗೊಂಡಿದ್ದಾರೆ.

CRPF personnel injured in Naxal attack in Sukma of Chattisgarh
ಚತ್ತೀಸ್​ ಗಢದಲ್ಲಿ ನಕ್ಸಲರಿಂದ ಐಇಡಿ ಸ್ಪೋಟ
author img

By

Published : Nov 29, 2020, 8:11 AM IST

ಸುಕ್ಮಾ (ಚತ್ತೀಸ್​ಗಢ ) : ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯ 206 ಕೋಬ್ರಾ ಬೆಟಾಲಿಯನ್‌ನ ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದು, ಏಳು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸುಕ್ಮಾ ಜಿಲ್ಲೆಯ ಚಿಂತಾಫುಗಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಸಿಆರ್‌ಪಿಎಫ್‌ ಕೋಬ್ರಾ 206 ಬೆಟಾಲಿಯನ್‌ನ ಓರ್ವ ಸೆಕೆಂಡ್-ಇನ್-ಕಮಾಂಡ್ ಅಧಿಕಾರಿ (2 ಐಸಿ) ಮತ್ತು ಒಬ್ಬ ಸಹಾಯಕ ಕಮಾಂಡೆಂಟ್ ಸೇರಿದ್ದಾರೆ ಎಂದು ಸಿಆರ್‌ಪಿಎಫ್ ಮಾಹಿತಿ ನೀಡಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.