ETV Bharat / bharat

ಜನ್ಮದಿನದ ಸಂಭ್ರಮದಲ್ಲಿ ವಿಹಾರಕ್ಕೆ ತೆರಳಿದ್ದ ಐವರು ಮಕ್ಕಳು.. ನದಿಯಲ್ಲಿ ಮುಳುಗಿ ಸಾವು - Children drown in river in Madhya Pradesh

ವಿಹಾರಕ್ಕೆಂದು ತೆರಳಿ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಸೆಳೆತಕ್ಕೆ ಸಿಲುಕಿ ಐವರು ಬಾಲಕರು ಮುಳುಗಿ ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

five-children-drown-in-river-sdrf-team-rescue
ಐವರು ಮಕ್ಕಳು ನದಿಯಲ್ಲಿ ಮುಳುಗಿ ಸಾವು
author img

By

Published : Oct 18, 2022, 9:06 AM IST

ಕೊಯ್ಲು, ಮಧ್ಯಪ್ರದೇಶ: ಇಲ್ಲಿನ ಕಟ್ನಿ ನದಿ ಬಳಿ ವಿಹಾರಕ್ಕೆ ಬಂದು ಸ್ನಾನಕ್ಕೆಂದು ನೀರಿಗಿಳಿದ ಐವರು ಬಾಲಕರು ಕೊಚ್ಚಿ ಹೋದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ಸೋಮವಾರ ನಡೆದಿದೆ. ಇದರಲ್ಲಿ ಮೂವರ ಶವಗಳನ್ನು ಪತ್ತೆ ಮಾಡಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತಪಟ್ಟ ಎಲ್ಲರು 13 ರಿಂದ 15 ವರ್ಷ ವಯೋಮಾನದವರಾಗಿದ್ದಾರೆ.

ನೀರಲ್ಲಿ ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡ ಮಕ್ಕಳಲ್ಲಿ ಓರ್ವ ಜನ್ಮದಿನದ ಸಂಭ್ರಮದಲ್ಲಿದ್ದ. ಆತ ತನ್ನ ಸ್ನೇಹಿತರೊಂದಿಗೆ ಕಟ್ನಿ ನದಿಗೆ ವಿಹಾರಕ್ಕೆಂದು ಬಂದಿದ್ದು, ಎಲ್ಲರೂ ನೀರಿಗೆ ಇಳಿದಿದ್ದಾರೆ. ಈ ವೇಳೆ ಸೆಳೆತಕ್ಕೆ ಸಿಲುಕಿ ಎಲ್ಲರೂ ನದಿಪಾಲಾಗಿದ್ದಾರೆ.

ಸಂಜೆಯಾದರೂ ವಿಹಾರಕ್ಕೆಂದು ಹೋದ ಮಕ್ಕಳು ವಾಪಸ್​ ಆಗದಿದ್ದಾಗ ಪೋಷಕರು ಆತಂಕಕ್ಕೀಡಾಗಿದ್ದರು. ಬಳಿಕ ನದಿ ಪಾತ್ರಕ್ಕೆ ಬಂದು ಗಮನಿಸಿದಾಗ ಮಕ್ಕಳ ಬಟ್ಟೆಗಳು ದಡದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಬಾಲಕರು ನೀರಿಗೆ ಕೊಚ್ಚಿ ಹೋಗಿರುವುದು ಗೊತ್ತಾಗಿದೆ.

ಪೋಷಕರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಆಡಳಿತಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಗೃಹರಕ್ಷಕ ದಳ, ಎನ್​ಡಿಆರ್​ಎಫ್​, ಈಜುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ 10 ಗಂಟೆಗಳ ತರುವಾಯ ಮೂವರು ಮಕ್ಕಳ ಶವಗಳನ್ನು ಪತ್ತೆ ಮಾಡಿದ್ದಾರೆ. ಇನ್ನಿಬ್ಬರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಮಕ್ಕಳ ಸಾವಿಗೆ ಸಿಎಂ ಸಂತಾಪ: ನದಿಯಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪಿದ ಸುದ್ದಿ ತಿಳಿದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಕ್ಕಳ ಪತ್ತೆಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಓದಿ: ಕಿತ್ತಾಡಿ ಜೈಲಿಗೇ ಬೆಂಕಿ ಹಾಕಿದ ಕೈದಿಗಳು..8 ಮಂದಿ ಅಪರಾಧಿಗಳು ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.