ಮುಂಬೈ(ಮಹಾರಾಷ್ಟ್ರ): ನಾಂದೇಡ್ ಜಿಲ್ಲೆಯ ಕಂದಹಾರ್ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ಮುಂಬೈನಿಂದ 630 ಕಿ.ಮೀ ದೂರದಲ್ಲಿರುವ ಕಂದಹಾರ್ ವ್ಯಾಪ್ತಿಯ ನವರಂಗ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಂದೇಡ್ ನಗರದ ಖುದ್ಬಾಯಿ ನಗರದ ಒಂದೇ ಕುಟುಂಬದ ಸದಸ್ಯರು ಕಂದಹಾರ್‌ನಲ್ಲಿರುವ ದರ್ಗಾ ನೋಡಲು ತೆರಳಿದ್ದರು. ಈ ವೇಳೆ ಐವರು ಮಕ್ಕಳು ಕೆರೆಯಲ್ಲಿ ಈಜಲು ತೆರಳಿದಾಗ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ. ಮೃತರೆಲ್ಲರೂ 15 ರಿಂದ 23 ವರ್ಷದೊಳಗಿನವರು. ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಕಂದಹಾರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಜೈಪುರದ ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸ್ ದಾಳಿ: ಕರ್ನಾಟಕದ ಅಧಿಕಾರಿಗಳು ಸೇರಿ 84 ಮಂದಿ ಅರೆಸ್ಟ್