ETV Bharat / bharat

'ನೀಯಂ ನಧಿ' ಚಿತ್ರೀಕರಣಕ್ಕೆ ಅಡ್ಡಿಪಡಿಸಿದ ಆರೋಪ: ಬಿಜೆಪಿ ಕಾರ್ಯಕರ್ತರ ಬಂಧನ

'ನೀಯಂ ನಧಿ' ಚಿತ್ರದ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಐವರು ಬಿಜೆಪಿ ಕಾರ್ಯಕರ್ತರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

Neeyam Nadhi
ನೀಯಂ ನಧಿ
author img

By

Published : Apr 13, 2021, 11:45 AM IST

ಪಾಲಕ್ಕಾಡ್: 'ನೀಯಂ ನಧಿ' ಚಿತ್ರದ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ ಮತ್ತು ಕಡಂಪಾಜಿಪುರಂನ ವ್ಯಾಯಿಲ್ಯಂಕು ದೇವಸ್ಥಾನದಲ್ಲಿ ಶೂಟಿಂಗ್ ಉಪಕರಣಗಳನ್ನು ನಾಶಪಡಿಸಿದ ಪ್ರಕರಣ ಸಂಬಂಧ ಐವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಕಡಂಪಾಜಿಪುರಂನ ಶ್ರೀಜಿತ್, ಸುಬ್ರಮಣಿಯನ್, ಬಾಬು, ಸಚ್ಚಿದಾನಂದನ್ ಮತ್ತು ಶಬರೀಶ್ ಬಂಧಿತರು. ಇವರ ವಿರುದ್ಧ ಸಿನಿಮಾದ ಚಿತ್ರಕಥೆಗಾರ ಸಲ್ಮಾನ್ ಫಾರಿಸ್ ನೀಡಿದ ದೂರಿನ ಆಧಾರದ ಮೇಲೆ ಕೇಸು ದಾಖಲಿಸಲಾಗಿದೆ.

ಹಿಂದೂ - ಮುಸ್ಲಿಂ ಸಂಬಂಧವನ್ನು ಚಿತ್ರಿಸುವ ದೃಶ್ಯಗಳನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದಾರೆ ಎಂದು ಫಾರಿಸ್ ಹೇಳಿದ್ದಾರೆ. ಇನ್ನು ಚಿತ್ರೀಕರಣ ಸಂದರ್ಭದಲ್ಲಿ ದೇವಾಲಯದ ಅಧಿಕಾರಿಗಳಿಂದ ಅನುಮತಿ ಪಡೆದಿದ್ದೆವು. ಆದರೆ, ಶೂಟಿಂಗ್ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಆಗಮಿಸಿ ಶೂಟಿಂಗ್‌ಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರೀಕರಣದ ಉಪಕರಣಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.