ETV Bharat / bharat

ಲಾಕ್‌ಡೌನ್‌ನಲ್ಲಿ ಕೋಟಿ ವ್ಯವಹಾರ ಮಾಡಿದ ಫಿಟ್​ನೆಸ್​ ದಂಪತಿ! - ಡಿಜಿಟಲ್ ಬೈಸಿಕಲ್‌

ಮದುವೆಯಾಗಿ 3 ತಿಂಗಳ ನಂತರ ಲಾಕ್‌ಡೌನ್ ಆದ ಕಾರಣ ತಮ್ಮ ಫಿಟ್​ನೆಸ್​ಗಾಗಿ ಜಿಮ್​ಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದೇ ರೀತಿ ಸಮಸ್ಯೆ ತಮ್ಮಂತೆ ಉಳಿದವರು ಎದುರಿಸುತ್ತಿರಬಹುದು. ಹಾಗಾಗಿ ನಾವು ಯಾಕೆ ಮನೆಯಲ್ಲೇ ಜಿಮ್​ ಸ್ಥಾಪಿಸಬಾರದೆಂದು ಈ ಉದ್ಯಮಕ್ಕೆ ದಂಪತಿಗಳು ಹೊರಡುತ್ತಾರೆ.

Fitness couple who made crores business in lockdown
ಲಾಕ್‌ಡೌನ್‌ನಲ್ಲಿ ಕೋಟಿ ವ್ಯವಹಾರ ಮಾಡಿದ ಫಿಟ್​ನೆಸ್​ ದಂಪತಿಗಳು
author img

By

Published : Dec 2, 2022, 4:23 PM IST

ಹೈದರಾಬಾದ್​: ಲಾಕ್‌ಡೌನ್‌ನಿಂದಾಗಿ ಒಂದು ವರ್ಷದೊಳಗೆ 37 ಕೋಟಿ ರೂ. ವ್ಯವಹಾರ ಮಾಡಿದ ಫ್ಲೆಕ್ಸ್‌ನೆಟ್​ನ ಸ್ಥಾಪಕ ದಂಪತಿಗಳು. ದಂಪತಿಗಳಾದ ರಿಯಾ ನಿಹಾಲ್ ಸಿಂಗ್​ ಮತ್ತು ರೌನಕ್ ಸಿಂಗ್ ಮದುವೆಯಾದ ಮೂರೇ ತಿಂಗಳಿಗೆ 2020 ರಲ್ಲಿ ಲಾಕ್​ಡೌನ್​ ಆಗಿತ್ತು. ಹೀಗಾಗಿ ಮನೆಯಲ್ಲಿಯೇ ಜೊತೆಯಾಗಿ ಜಿಮ್ ಸ್ಥಾಪಿಸಿ ಈಗ ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದಾರೆ.

ಕೋವಿಡ್​ ಸಾಂಕ್ರಾಮಿಕ ದಾಳಿಯ ಸಂದರ್ಭದಲ್ಲಿ ಎಲ್ಲರಲ್ಲೂ ಆರೋಗ್ಯ ಪ್ರಜ್ನೆ ಮೂಡಿತ್ತು. ಅದಕ್ಕಾಗಿ ಪ್ರತಿಯೊಬ್ಬರು ಯೋಗ ,ಜಿಮ್​ನ್ನು ತಮ್ಮ ದೇಹದ ಫಿಟ್​ನೆಸ್​ಗಾಗಿ ಮಾಡತೊಡಗಿದರು. ಆದರೆ, ಇದೇ ಕೊರೊನದ ಪರಿಣಾಮ ಎಲ್ಲೆಡೆ ಲಾಕ್​ ಡೌನ್​ ಕೂಡ ಹೇರಲ್ಪಟ್ಟಿತು. ಇದರಿಂದ ಜಿಮ್​ಗೆ ಹೋಗಲು ಸಮಸ್ಯೆ ಎದುರುಸಿದ ರಿಯಾ ನಿಹಾಲ್​ ಸಿಂಗ್​ ಅದೇ ಸಮಸ್ಯೆಗೆ ಪರಿಹಾರ ಹುಡುಕುವ ಒಂದು ಕಲ್ಪನೆ ಅವಳನ್ನು ಉದ್ಯಮಿನ್ನಾಗಿ ಮಾಡಿದೆ.

ಮನೆಯಲ್ಲೇ ಯಾಕೆ ಜಿಮ್​ ತಯಾರಿಸಬಾರದು?: ಮದುವೆಯಾಗಿ 3 ತಿಂಗಳ ನಂತರ ಲಾಕ್‌ಡೌನ್ ಆದ ಕಾರಣ ತಮ್ಮ ಫಿಟ್​ನೆಸ್​ಗಾಗಿ ಜಿಮ್​ಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದೇ ರೀತಿ ಸಮಸ್ಯೆ ತಮ್ಮಂತೆ ಉಳಿದವರು ಎದುರಿಸುತ್ತಿರಬಹುದು. ಹಾಗಾಗಿ ನಾವು ಯಾಕೆ ಮನೆಯಲ್ಲೇ ಜಿಮ್​ ಸ್ಥಾಪಿಸಬಾರದೆಂದು ಈ ಉದ್ಯಮಕ್ಕೆ ದಂಪತಿಗಳು ಹೊರಡುತ್ತಾರೆ.

ಮೊದಲು ಜಿಮ್​ ಉಪಕರಣ ಹುಡುಕುತ್ತಾರೆ ಆಗ ಭಾರತದಲ್ಲಿ ಹೊರ ದೇಶಗಳಂತೆ ಸ್ಮಾರ್ಟ್ ಎಕ್ಸರ್ ಸೈಜ್ ಉಪಕರಣಗಳು ಸಿಗುವುದಿಲ್ಲ ಎಂದು ಮನಗೊಳ್ಳುತ್ತಾರೆ. ಹೀಗಾಗಿ ನಾವೇ ಜಿಮ್​ ಉಪಕರಣಗಳನ್ನು ನೀಡಬೇಕೆಂದು ನಿರ್ಧರಿಸುತ್ತಾರೆ. ಇದಕ್ಕಾಗಿ ಉಪಕರಣಗಳ ಲಭ್ಯತೆ, ತಯಾರಿಕೆ, ಇಲ್ಲಿಗೆ ತರುವುದಕ್ಕಾಗಿ ವಿವಿಧ ಯೋಜನೆಗಳ ಜೊತೆ ವಿವಿಧ ದೇಶಗಳ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ.

ಇದಾಗಿ, ಅವರು ಮೇ 2021 ರಲ್ಲಿ 'ಫ್ಲೆಕ್ಸ್‌ನೆಟ್' ಅನ್ನು ಪ್ರಾರಂಭಿಸುತ್ತಾರೆ. ಇದು ಗುರ್ಗಾಂವ್‌ನಲ್ಲಿ ಐದು ಜನರೊಂದಿಗೆ ಪ್ರಾರಂಭವಾಗುತ್ತದೆ. ಮೊದಲಿಗೆ ಎಲ್ಲ ಉತ್ಪನ್ನಗಳನ್ನು ಒಂದೇ ಬಾರಿಗೆ ಸೇರಿಸಿ ವ್ಯಾಪಾರ ಮಾಡುವ ಬದಲು, ಪ್ರತಿಯೊಂದನ್ನು ಪರಿಚಯಿಸುವುದು ಉತ್ತಮ ಎಂದು ಯೋಚಿಸಿ ಅದರಂತೆ ವ್ಯವಹಾರ ನಡೆಸುತ್ತಾರೆ.

ಇಲ್ಲಿಯವರೆಗೆ ದಂಪತಿ ಯೋಗ ಮ್ಯಾಟ್‌ಗಳಿಂದ ಹಿಡಿದು ಡಿಜಿಟಲ್ ಬೈಸಿಕಲ್‌ಗಳವರೆಗೆ ಅನೇಕ ಸಾಧನಗಳು ಲಭ್ಯವಾಗುವಂತೆ ಮಾಡಿದ್ದಾರೆ. ಅದರೊಂದಿಗೆ ಅನುಭವ ಕೇಂದ್ರವನ್ನೂ ಸ್ಥಾಪಿಸಿದ್ದಾರೆ. ಆಸಕ್ತರು ನಮ್ಮ ಜಿಮ್​ ಉತ್ಪನ್ನಗಳನ್ನು ಇಲ್ಲಿ ಪ್ರಯತ್ನಿಸಬಹುದೆಂದು ದಂಪತಿಗಳು ಹೇಳಿದ್ದಾರೆ.

ಯುವಕರೇ ಗುರಿ!: ನಾವು ಯುವಕರನ್ನೇ ಗುರಿಯಾಗಿಸಿಕೊಂಡಿದ್ದೇವೆ. ಯಾಕೆಂದರೆ ಯುವ ಪೀಳಿಗೆಗೆ ಏನು ಬೇಕು ಎಂದು ನಮಗಲ್ಲದೇ ಬೇರೆ ಯಾರಿಗೆ ಗೊತ್ತು? ನಾವು ಉಳಿದವರ ತರ ಆಲೋಚನೆಯೊಂದಿಗೆ ಬಂದಾಗ ಇತರರಿಗೂ ಏನು ಬೇಕು ಎಂಬುದು ತಿಳಿಯುತ್ತದೆ. ಈ ಮೂಲಕ ನಾವು ಒಂದು ಹೆಜ್ಜೆ ಮುಂದಿಡುತ್ತಿದ್ದೇವೆ. ಇದೇ ನಮ್ಮನ್ನು ಇಂದು ಯಶಸ್ವಿಯಾಗಿಸಿ ಒಂದು ವರ್ಷದಲ್ಲಿ 37 ಕೋಟಿ ರೂಪಾಯಿ ವ್ಯವಹಾರಕ್ಕೆ ಕಾರಣ ಎನ್ನತ್ತಾರೆ ರಿಯಾ.

ಇದರೊಂದಿಗೆ ಈ ದಂಪತಿಗಳು ಆನ್​ಲೈನ್​ ಮಾರಾಟವನ್ನು ಪ್ರಾರಂಭಿಸುವುದರ ಜೊತೆಗೆ ಫಿಟ್​ನೆಸ್​ ಮತ್ತು ಹೊಸ ಜಿಮ್​ ಉಪಕರಣಗಳ ಕುರಿತು ಆ್ಯಪ್​ ರೂಪದಲ್ಲಿ ವರ್ಚುಯಲ್ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಅಲ್ಲದೇ ತಮ್ಮ ಗ್ರಾಹಕರು ತಮ್ಮ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸೌಲಭ್ಯಗಳು ಸಹ ಲಭ್ಯವಿದೆ.

ಇದೇ ಕಾರಣದಿಂದ ಹೆಚ್ಚು ಹೆಚ್ಚು ಜನರು ತಮ್ಮ ಉತ್ಪನ್ನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ತಮ್ಮ ವ್ಯವಹಾರ ರೂ.100 ಕೋಟಿಗೆ ತಲುಪಲಿದೆ. ಯೋಜಿತ ರೀತಿಯಲ್ಲಿ ಕೆಲಸ ಮಾಡಿ ಗ್ರಾಹಕರನ್ನು ಅರ್ಥ ಮಾಡಿಕೊಂಡರೆ ಯಾರು ಬೇಕಾದರೂ ಯಶಸ್ವಿಯಾಗಬಹುದು ಎಂದು ರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಜಾಣತನದಿಂದ ಆರೋಗ್ಯ ವಿಮೆ ಆಯ್ಕೆ ಮಾಡಿ: ಖರ್ಚುಗಳಿಂದ ರಕ್ಷಿಸಿಕೊಳ್ಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.