ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ ಪರಿಷ್ಕೃತ ಅಂದಾಜಿನಂತೆ 2020-21ರಲ್ಲಿ ಭಾರತದ ಹಣಕಾಸಿನ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇ 9.5ಕ್ಕೆ ಏರಲಿದೆ ಎಂಬುದು ತಜ್ಞರ ವಾದವಾಗಿದೆ.
ಈ ಬಜೆಟ್ ಅಂದಾಜುಗಳಲ್ಲಿ ಜಿಡಿಪಿಯ ಶೇ 3.5ಕ್ಕಿಂತ ಹೆಚ್ಚಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಸರ್ಕಾರದ ಆದಾಯದಲ್ಲಿ ಕುಸಿತವು ಕೊರತೆ ಮತ್ತು ಮಾರುಕಟ್ಟೆ ಸಾಲದಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. '2021-22ರ ಹಣಕಾಸಿನ ಕೊರತೆಯು ಜಿಡಿಪಿಯ ಶೇ 6.8ರಷ್ಟು ಇರಲಿದೆ. 2020-21ರ ಜಿಡಿಪಿಯ ಶೇ 9.5ರಷ್ಟು ಎಂದು ಅಂದಾಜಿಸಲಾಗಿತ್ತು.
ಈ ವರ್ಷ ಕೊರತೆಯನ್ನು ನೀಗಿಸಲು ಸರ್ಕಾರ ಇನ್ನೂ 80,000 ಕೋಟಿ ರೂ. ಸಾಲ ಎತ್ತಲಿದೆ. ಮುಂದಿನ ವರ್ಷದ ಒಟ್ಟು ಮಾರುಕಟ್ಟೆ ಸಾಲ 12 ಲಕ್ಷ ಕೋಟಿ ರೂ.ನಷ್ಟಾಗಲಿದೆ. ಹಣಕಾಸಿನ ಬಲವರ್ಧನೆಗೆ ಹೊಸ ಮಾರ್ಗಸೂಚಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.