ಮುಂಬೈ(ಮಹಾರಾಷ್ಟ್ರ): ಎರಡು ವಿವಾಹವಾಗಿರುವ ಓರ್ವ ವ್ಯಕ್ತಿ ಮೃತಪಟ್ಟ ನಂತರ ಆತನಿಗೆ ಬರುವ ಪಿಂಚಣಿ ವಿಚಾರವಾಗಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಮೊದಲ ಪತ್ನಿಯು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲವಾದರೆ ಎರಡನೇ ಪತ್ನಿ ಮೃತಪಟ್ಟಿರುವ ಪತಿಯ ಪಿಂಚಣಿಗೆ ಅರ್ಹಳಲ್ಲ ಎಂದು ಹೇಳಿದೆ.
ಆದೇಶಕ್ಕೆ ಕಾರಣವಾದ ಪ್ರಕರಣ: ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಾದೇವ ತಾಟೆ ಎಂಬುವವರು ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಜೀವಂತವಿರುವಾಗಲೇ ವಿಚ್ಛೇದನ ಪಡೆಯದೇ ಶ್ಯಾಮಲಾ ತಾಟೆ ಅವರನ್ನು ಮಹಾದೇವ ತಾಟೆ ವಿವಾಹವಾಗಿದ್ದು, 1996ರಲ್ಲಿ ನಿಧನರಾದರು. ಅವರ ಮರಣದ ನಂತರ ಅವರ ಮೊದಲ ಪತ್ನಿ ಕಾನೂನು ಪ್ರಕಾರ ಪಿಂಚಣಿಗೆ ಅರ್ಹರಾಗಿದ್ದರು.
ಮೊದಲ ಪತ್ನಿಯೇ ಪಿಂಚಣಿ ಪಡೆಯುತ್ತಿದ್ದು, ಕೆಲವು ವರ್ಷಗಳ ನಂತರ ಕ್ಯಾನ್ಸರ್ನಿಂದ ಆಕೆಯೂ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಹದೇವ್ ತಾಟೆ ಅವರ ಎರಡನೇ ಪತ್ನಿ ಶ್ಯಾಮಲ್ ತಾಟೆ ಅವರು ಪಿಂಚಣಿ ಪಡೆಯುವ ಸಲುವಾಗಿ 2007ರಿಂದ 2014ರ ನಡುವೆ ರಾಜ್ಯ ಸರ್ಕಾರಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಆದ್ದರಿಂದ ಬಾಂಬೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಜೀವನಾಧಾರಕ್ಕಾಗಿ ಪಿಂಚಣಿ ನೀಡಬೇಕು ಎಂದು ಪೀಠಕ್ಕೆ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶಾರುಖ್ ಕಥಾವಾಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಸಲಾಯಿತು.
ಇದನ್ನೂ ಓದಿ: ಆದೇಶ ಉಲ್ಲಂಘಿಸಿದ ಬಿಬಿಎಂಪಿ : ಜೈಲಿಗೆ ಹೋಗಲು ಗಂಟು ಮೂಟೆ ಕಟ್ಟಿಕೊಂಡು ಬನ್ನಿ ಎಂದ ಹೈಕೋರ್ಟ
ಇಷ್ಟೇ ಅಲ್ಲದೇ, 2007ರಿಂದ 2014ರ ನಡುವೆ ಪಿಂಚಣಿಗಾಗಿ ರಾಜ್ಯ ಸರ್ಕಾರಕ್ಕೆ ನಾಲ್ಕು ಬಾರಿ ಶ್ಯಾಮಲಾ ಪತ್ರ ಬರೆದಿದ್ದಾರೆ. ಆದರೂ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಜೀವನಾಧಾರಕ್ಕಾಗಿ ಪಿಂಚಣಿ ನೀಡಬೇಕು ಎಂದು ಪೀಠಕ್ಕೆ ಮನವಿ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಈ ಕುರಿತ ವಿಚಾರಣೆಯ ನಂತರ ತೀರ್ಪು ನೀಡಿದ ಪೀಠ, ಹಿಂದೂ ವಿವಾಹ ಕಾಯಿದೆಯ ಪ್ರಕಾರ, ಪತಿ ಮೊದಲ ಪತ್ನಿಗೆ ಕಾನೂನುಬದ್ಧ ವಿಚ್ಛೇದನ ನೀಡದ ಹೊರತು, ಎರಡನೇ ಪತ್ನಿಗೆ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಶ್ಯಾಮಲಾ ಅವರ ಅರ್ಜಿಯನ್ನು ತಿರಸ್ಕರಿಸಿತು.