ETV Bharat / bharat

41 ದಿನಗಳ ಶಬರಿಮಲೆ ಮೊದಲ ಯಾತ್ರೆ ಇಂದು ಕೊನೆ: ಡಿಸೆಂಬರ್​ 30ರಂದು ದೇಗುಲ ಮರು ಆರಂಭ - Sabarimala Pilgrimage

ವಾರ್ಷಿಕವಾಗಿ ನಡೆಯುವ ಶಬರಿಮಲೆ ಅಯ್ಯಪ್ಪಸ್ವಾಮಿ ಯಾತ್ರೆಯ ಮೊದಲ ಭಾಗ ಇಂದು ಮುಕ್ತಾಯವಾಗಲಿದೆ.

ಶಬರಿಮಲೆ ಮೊದಲ ಯಾತ್ರೆ ಇಂದು ಕೊನೆ
ಶಬರಿಮಲೆ ಮೊದಲ ಯಾತ್ರೆ ಇಂದು ಕೊನೆ
author img

By ETV Bharat Karnataka Team

Published : Dec 27, 2023, 1:45 PM IST

Updated : Dec 27, 2023, 4:32 PM IST

ಶಬರಿಮಲೆ ಮೊದಲ ಯಾತ್ರೆ

ಶಬರಿಮಲೆ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಬುಧವಾರ ಮಂಡಲ ಪೂಜೆ ನಡೆಸಿದ ಬಳಿಕ ಯಾತ್ರೆಯ ಮೊದಲ ಚರಣ ಮುಕ್ತಾಯವಾಗಲಿದ್ದು, ದೇವಸ್ಥಾನದ ಬಾಗಿಲನ್ನು ರಾತ್ರಿ 11 ಗಂಟೆಗೆ ಮುಚ್ಚಲಾಗುತ್ತದೆ. 41 ದಿನಗಳ ಪೂಜಾ ಕೈಂಕರ್ಯಗಳು ಇಂದಿಗೆ ಮುಗಿಯಲಿವೆ. ಮಕರಜ್ಯೋತಿಯ ಕಾರಣ ಡಿಸೆಂಬರ್​ 30 ರಿಂದ ದೇಗುಲವನ್ನು ಮತ್ತೆ ತೆಗೆಯಲಿದೆ.

ಇಂದು ನಡೆಯುವ ಮಂಡಲಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ದೇಗುಲದಲ್ಲಿ ತಂಕ ಅಂಕಿ (ಚಿನ್ನದ ವಸ್ತ್ರ) ಅಲಂಕೃತ ಅಯ್ಯಪ್ಪನ ದರ್ಶನಕ್ಕೆ ನಿನ್ನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು, ನೂಕುನುಗ್ಗಲು ಉಂಟಾಗಿತ್ತು. ದರ್ಶನಕ್ಕಾಗಿ ಅಪಾಚೆಮೇಡುವರೆಗೆ ಸರತಿ ಸಾಲು ಇದೆ. ಪವಿತ್ರ ಇರುಮುಡಿ ಮೂಟೆಯನ್ನು ತಲೆಯ ಮೇಲೆ ಹೊತ್ತುಕೊಂಡು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರಗಳನ್ನು ಪಠಿಸುತ್ತಿರುವ ಭಕ್ತರ ಉದ್ದನೆಯ ಸರತಿ ಸಾಲುಗಳು ಸನ್ನಿಧಾನಂ, ದೇಗುಲದ ಸಮುಚ್ಚಯದಲ್ಲೂ ಕಾಣಬಹುದು.

41 ದಿನಗಳ ಯಾತ್ರೆ ಕೊನೆ: ವಾರ್ಷಿಕವಾಗಿ ಎರಡು ತಿಂಗಳ ಕಾಲ ನಡೆದ ಅಯ್ಯಪ್ಪ ಸ್ವಾಮಿಯ ಯಾತ್ರೆಯ ಮೊದಲ ಚರಣದಲ್ಲಿ ಮಂಡಲ ಪೂಜೆಯು ವಿಶಿಷ್ಟವಾಗಿದೆ. ಈ ವೇಳೆ ಅಯ್ಯಪ್ಪನ ದರ್ಶನ ಪಡೆಯಲು ಭಕ್ತ ಸಾಗರವೇ ಕಾಯುತ್ತದೆ. ಇಂದಿಗೆ 41 ದಿನಗಳ ಸುದೀರ್ಘ ತೀರ್ಥಯಾತ್ರೆ ಕೊನೆಗೊಳ್ಳಲಿದೆ. ರಾತ್ರಿ 11 ಗಂಟೆಗೆ ದೇಗುಲದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ಪವಿತ್ರ ತಂಕ ಅಂಕಿ (ಚಿನ್ನದ ವಸ್ತ್ರ) ಧಾರಿತ ಅಯ್ಯಪ್ಪ ಸ್ವಾಮಿಯ ಮೆರವಣಿಗೆ ನಿನ್ನೆ ಸಂಜೆ ಇಲ್ಲಿನ ಬೆಟ್ಟದ ದೇಗುಲದಲ್ಲಿ ವಿಧ್ಯುಕ್ತವಾಗಿ ಜರುಗಿತು. ಅಯ್ಯಪ್ಪ ಸ್ವಾಮಿಯ ವಿಗ್ರಹದ ಮೇಲೆ ಚಿನ್ನದ ವಸ್ತ್ರವನ್ನು ಇಟ್ಟ ಬಳಿಕ ಮಂಡಲ ಪೂಜೆ ಆರಂಭಿಸಲಾಗುತ್ತದೆ. ಬುಧವಾರ ಬೆಳಗ್ಗೆ 10.30ರಿಂದ 11.30ರವರೆಗೆ ಪೂಜಾ ಕೈಂಕರ್ಯಗಳು ನೆರವೇರಿದವು.

ಮೂರು ದಿನಗಳ ಬಳಿಕ ಪುನಾರಂಭ: ಮಂಡಲಪೂಜೆಯ ಬಳಿಕ ಮುಚ್ಚಲಾಗುವ ದೇಗುಲವನ್ನು ಡಿಸೆಂಬರ್ 30 ರಂದು ಮಕರವಿಳಕ್ಕು (ಮಕರಜ್ಯೋತಿ) ಆಚರಣೆಗಾಗಿ ಪುನಃ ತೆರೆಯಲಾಗುತ್ತದೆ. ಜನವರಿ 15 ರಂದು ಮಕರಜ್ಯೋತಿಯು ಕಾಣಿಸಿಕೊಳ್ಳುತ್ತದೆ.

31 ಲಕ್ಷ ಭಕ್ತರ ಭೇಟಿ: ಈ ವರ್ಷ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಭಾರಿ ಭಕ್ತ ಸಮೂಹ ಭೇಟಿ ನೀಡಿದೆ. ಇದರಿಂದ ಜನದಟ್ಟಣೆ ಕಂಡು ಬರುತ್ತಿದೆ. ಡಿಸೆಂಬರ್​ 25ರ ವರೆಗೂ 31,43,163 ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅನ್ನದಾನ ಮಂಡಲಂ ಮೂಲಕ ಡಿಸೆಂಬರ್ 25 ರವರೆಗೆ 7,25,049 ಜನರಿಗೆ ಉಚಿತ ಪ್ರಸಾದವನ್ನು ಒದಗಿಸಿದೆ.

ಕಾಣಿಕೆ, ಪ್ರಸಾದ ಮಾರಾಟದಿಂದಾಗಿ ಈವರೆಗೆ 204 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ 63.89 ಕೋಟಿ ಕಾಣಿಕೆಯಿಂದ ಬಂದಿದ್ದರೆ, ಅರವಣ (ಪ್ರಸಾದ) ಮಾರಾಟದಿಂದ 96.32 ಕೋಟಿ, ಅಪ್ಪಂ ಮಾರಾಟದಿಂದ 12.38 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಶಬರಿಮಲೆ: 39 ದಿನಗಳಲ್ಲಿ ₹204 ಕೋಟಿ ಆದಾಯ, 31 ಲಕ್ಷ ಭಕ್ತರಿಂದ ಅಯ್ಯಪ್ಪ ಸ್ವಾಮಿಯ ದರ್ಶನ

Last Updated : Dec 27, 2023, 4:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.