ಪೂರ್ವ ಗೋದಾವರಿ (ಆಂಧ್ರ ಪ್ರದೇಶ): ಇಲ್ಲಿನ ಕೊಯೂರು ಮಾರಿಪಾಕಾ ಗ್ರಾಮದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ. ಸುಮಾರು ಅರ್ಧ ಗಂಟೆಯವರೆಗೂ ಎರಡೂ ಕಡೆಗಳಿಂದ ಗುಂಡಿನ ವಿನಿಮಯ ನಡೆದಿದೆ.
ಪೊಲೀಸರ ತೀವ್ರ ದಾಳಿಯ ಬಳಿಕ ಸ್ಥಳದಿಂದ ಮಾವೋವಾದಿಗಳು ಪರಾರಿಯಾಗಿದ್ದು, ಸ್ಥಳದಲ್ಲಿ ಭಾರೀ ಪ್ರಮಾಣದ ಮದ್ದು ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.