ETV Bharat / bharat

ಮಾಲೆಗಾಂವ್ ಥಿಯೇಟರ್​ನಲ್ಲಿ ಬೆಂಕಿ ಅವಘಡ ಸೃಷ್ಟಿಸಿದ ಅಭಿಮಾನಿಗಳು: ದೂರು ದಾಖಲು - ಮಾಲೆಗಾಂವ್ ಥಿಯೇಟರ್​ನಲ್ಲಿ ಬೆಂಕಿ ಅವಘಡ ಸೃಷ್ಟಿಸಿದ ಅಭಿಮಾನಿಗಳು

ರಾಕೇಶ್ ರೋಶನ್ ಅವರ “ಕರಣ್ ಅರ್ಜುನ್” ಪ್ರದರ್ಶನದ ಸಮಯದಲ್ಲಿ, ಶಾರುಖ್ ಖಾನ್ ಮತ್ತು ಸಲ್ಮಾನ್ ಎಂಟ್ರಿ ಸೀನ್​ ಸಮಯದಲ್ಲಿ ಜನರ ಗುಂಪು ಪಟಾಕಿಗಳನ್ನು ಸಿಡಿಸಿಲು ಪ್ರಾರಂಭಿಸಿತು.ಈ ವೇಳೆ, ಬೆಂಕಿಯ ಕಿಡಿ ಆಸನಗಳಿಗೆ ಸಿಡಿದು, ಥಿಯೇಟರ್​ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು.

ಮಾಲೆಗಾಂವ್ ಥಿಯೇಟರ್​ನಲ್ಲಿ ಬೆಂಕಿ ಅವಘಡ ಸೃಷ್ಟಿಸಿದ ಅಭಿಮಾನಿಗಳು

author img

By

Published : Feb 24, 2021, 1:45 PM IST

ಮಾಲೆಗಾಂವ್ (ನಾಸಿಕ್) : ಬಾಲಿವುಡ್​ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಚಲನಚಿತ್ರಗಳಿಗಾಗಿ ನಟರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇವರ ಸಿನಿಮಾ ರಿಲೀಸ್​ ಆದಾಗ ಸಂಭ್ರಮಾಚರಣೆ ಸಹ ಜೋರಾಗೆ ಇರುತ್ತದೆ. ಆದರೆ ಮಾಲೆಗಾಂವ್​ನಲ್ಲಿ ಅಭಿಮಾನಿಗಳ ಸಂಭ್ರಮ ಅವಘಡಕ್ಕೆ ಕಾರಣವಾಗಿದೆ.

ರಾಕೇಶ್ ರೋಶನ್ ಅವರ “ಕರಣ್ ಅರ್ಜುನ್” ಪ್ರದರ್ಶನದ ಸಮಯದಲ್ಲಿ, ಶಾರುಖ್ ಖಾನ್ ಮತ್ತು ಸಲ್ಮಾನ್ ಎಂಟ್ರಿ ಸೀನ್​ ಸಮಯದಲ್ಲಿ ಜನರ ಗುಂಪು ಪಟಾಕಿಗಳನ್ನು ಸಿಡಿಸಿಲು ಪ್ರಾರಂಭಿಸಿತು. ಈ ವೇಳೆ ಬೆಂಕಿಯ ಕಿಡಿ ಆಸನಗಳಿಗೆ ಸಿಡಿದು, ಥಿಯೇಟರ್​ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು. ಈ ವೇಳೆ, ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಫೆ.12 ರಂದು ಜರುಗಿದ್ದು, ಮಾಲೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಅಪರಿಚಿತ ಜನರ ವಿರುದ್ಧ ಥಿಯೇಟರ್ ಆಡಳಿತ ಮಂಡಳಿ​ ದೂರು ದಾಖಲಿಸಿದೆ. ಕೊರೊನಾ ಲಾಕ್​ಡೌನ್​ ಬಳಿಕ ಸಿನಿಮಾ ಚಿತ್ರಮಂದಿರಗಳು ಬಾಗಿಲು ತೆರೆದಿದ್ದು, ಹಳೆಯ ಚಿತ್ರಗಳನ್ನು ಮಾಲೆಗಾಂವ್‌ನ ಸೆಂಟ್ರಲ್ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ ಪ್ರಕರಣದಲ್ಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ 24, 112, 117 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.