ತಿರುಪತಿ(ಆಂಧ್ರಪ್ರದೇಶ): ತಿರುಪತಿಯ ಪುಣ್ಯಕ್ಷೇತ್ರ ವೆಂಕಟೇಶ್ವರನ ದರ್ಶನಕ್ಕೆ ಹೊರಟಿದ್ದ ಕರ್ನಾಟಕದ ಭಕ್ತರೊಬ್ಬರ ಕಾರು ಸೋಮವಾರ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಇಂಜಿನ್ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಡೆದಿದೆ.
ತಿರುಪತಿ ಜಿಲ್ಲೆಯ ತಿರುಮಲ ಶಂಖುಮಿಟ್ಟಾ ಪ್ರದೇಶದಲ್ಲಿ ರಾತ್ರಿ ವೇಳೆ ಹೊರಟಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಾರಿನಲ್ಲಿದ್ದ ಎಲ್ಲರೂ ಇಳಿದು ಜೀವ ಉಳಿಸಿಕೊಂಡಿದ್ದಾರೆ. ತಕ್ಷಣ ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ, ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವೆಂಕಟೇಶ್ವರನ ದರ್ಶನಕ್ಕೆ ಹೊರಟಿದ್ದ ಕರ್ನಾಟಕದ ಭಕ್ತರು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಓದಿ: ಮಂಡ್ಯದಲ್ಲೊಂದು ಭಯಾನಕ ಘಟನೆ : ಮಗಳ ಶವದ ಜೊತೆ 4 ದಿನ ಕಳೆದ ತಾಯಿ!