ಸೋನಿಪತ್ (ಹರಿಯಾಣ): ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಇಲ್ಲಿನ ಕುಂಡ್ಲಿ ಗಡಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಹಲವು ಟೆಂಟ್ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇಲ್ಲಿನ ಜಿ.ಟಿ.ರಸ್ತೆಯ ರಾಸೋಯ್ ಡಾಬಾ ಮುಂಭಾಗ ಅನಾಹುತ ಸಂಭವಿಸಿತು.
ಟೆಂಟ್ಗಳಿಗೆ ಬೆಂಕಿ ತಗುಲಿದ್ದರಿಂದಾಗಿ ರೈತರು ಸಂಗ್ರಹಿಸಿಟ್ಟಿದ್ದ ಹಲವು ವಸ್ತುಗಳಿಗೆ ಆಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ರೈತರ ಚಳವಳಿಯನ್ನು ಅಂತ್ಯಗೊಳಿಸಲು ಸರ್ಕಾರ ಷಡ್ಯಂತ್ರ ರೂಪಿಸುತ್ತಿದೆ. ಈ ಘಟನೆಯೂ ಸಹ ಸರ್ಕಾರದ ಪಿತೂರಿ ಎಂದು ರೈತ ಮುಖಂಡ ಜಂಗ್ವೀರ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ. ಇದು ರೈತರ ಒಗ್ಗಟ್ಟು ಒಡೆಯುವುದಿಲ್ಲ ಎಂದರು.
ಇದನ್ನೂ ಓದಿ: ಪಂಜಾಬ್ನಲ್ಲಿ ಟಿಫಿನ್ ಬಾಂಬ್ ಪತ್ತೆ ಪ್ರಕರಣ: ಮೂವರು ಅರೆಸ್ಟ್