ನವದೆಹಲಿ: ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಹಲವು ಡಯಾಗ್ನೋಸ್ಟಿಕ್ ಲ್ಯಾಬ್ ಮತ್ತು ಪರೀಕ್ಷಾ ಕೊಠಡಿಗಳಿದ್ದ ಕಟ್ಟಡದಲ್ಲಿ ಅಪಾರ ಹಾನಿ ಉಂಟಾಗಿರುವ ಸಾಧ್ಯತೆಯನ್ನು ಪೊಲೀಸರು ಅಂದಾಜಿಸಿದ್ದಾರೆ.
ಅಗ್ನಿ ಅನಾಹುತ ತಿಳಿಯುತ್ತಿದ್ದಂತೆ ದೆಹಲಿ ಫೈರ್ ಸರ್ವೀಸ್ನ ನಿರ್ದೇಶಕ ಅತುಲ್ ಗರ್ಗ್ಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸುಮಾರು 20 ಅಗ್ನಿಶಾಮಕ ವಾಹನಗಳು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.

ಅನಾಹುತಕ್ಕೆ ತುತ್ತಾಗಿರುವ ಕಟ್ಟಡದ 9ನೇ ಅಂತಸ್ತಿನ ಸೆಟ್ (SET- Skills, e-Learning, Telemedicine) ಸೌಲಭ್ಯವನ್ನು ಒದಗಿಸುತ್ತಿದ್ದು, ಆಡಿಟೋರಿಯಂ (ಸಭಾಂಗಣ) ಕೂಡಾ ಹೊಂದಿದೆ.
ಇದನ್ನೂ ಓದಿ: ಬಿರಿಯಾನಿ ಚೆನ್ನಾಗಿಲ್ಲ ಎಂದಿದ್ದಕ್ಕೆ ಇಬ್ಬರಿಗೆ ಥಳಿಸಿದ ಹೋಟೆಲ್ ಸಿಬ್ಬಂದಿ
ಪೊಲೀಸರ ಮಾಹಿತಿಯ ನಂತರವಷ್ಟೇ ಹಾನಿ ಪ್ರಮಾಣದ ನಿಖರತೆ ಗೊತ್ತಾಗಲಿದೆ.