ETV Bharat / bharat

ರಾಜಸ್ಥಾನದ ಸರಿಸ್ಕಾ ಅರಣ್ಯಕ್ಕೆ ಬೆಂಕಿ.. ರಾತ್ರಿಯಿಂದ ಮುಂಜಾನೆವರಗೆ ಬೆಂಕಿ ನಂದಿಸುವ ಕಾರ್ಯ

ರಾಜಸ್ಥಾನದ ಸರಿಸ್ಕಾ ಅರಣ್ಯದಲ್ಲಿ ಹಠಾತ್ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸರಿಸ್ಕಾ ಅರಣ್ಯದ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ಅರಣ್ಯ ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ.

fire-at-rajastan-sariska-forest
ರಾಜಸ್ಥಾನದ ಸರಿಸ್ಕಾ ಅರಣ್ಯಕ್ಕೆ ಬೆಂಕಿ
author img

By

Published : Mar 28, 2022, 11:11 AM IST

ಅಲ್ವರ್, ರಾಜಸ್ಥಾನ: ಅಲ್ವರ್ ಜಿಲ್ಲೆಯ ಸರಿಸ್ಕಾ ಅರಣ್ಯದಲ್ಲಿ ಹಠಾತ್ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಅಲ್ವರ್ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸುವ ಕಾರ್ಯ ರಾತ್ರಿಯಿಡೀ ನಡೆದಿದೆ. ಸರಿಸ್ಕಾ ಅರಣ್ಯದ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ಅರಣ್ಯ ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸರಿಸ್ಕಾದ ಡಿಎಫ್‌ಒ ಸುದರ್ಶನ್ ಶರ್ಮಾ, ಅಲ್ವಾರ್‌ನ ಸಿಸಿಎಫ್ ಆರ್‌ಎನ್ ಮೀನಾ, ಅರಣ್ಯ ಇಲಾಖೆಯ ರೇಂಜರ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಸರಿಸ್ಕಾ ಅರಣ್ಯದಲ್ಲಿ ಮರಗಳು ಒಣಗಿರುವ ಕಾರಣದಿಂದ ಬಹುಬೇಗ ಬೆಂಕಿ ವ್ಯಾಪಿಸಿದೆ. ರಾತ್ರಿ ಆರಂಭವಾದ ಬೆಂಕಿ ನಂದಿಸುವ ಕಾರ್ಯ ಬೆಳಗಿನ ಜಾವ ಐದು ಗಂಟೆಯವರೆಗೆ ನಡೆದಿದ್ದು, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಸುಮಾರು 500 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಸರಿಸ್ಕಾ ಅರಣ್ಯಕ್ಕೆ ಬೆಂಕಿ

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ಅವಘಡ ಸಂಭವಿಸಿದ ಪ್ರದೇಶದಲ್ಲಿ ಎರಡು ಹುಲಿಗಳ ಓಡಾಟವಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ, ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕರಿಚಿರತೆ ಮತ್ತು ಇತರ ಕಾಡು ಪ್ರಾಣಿಗಳು ವಾಸಿಸುತ್ತವೆ. ಇವುಗಳ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಸರಿಸ್ಕಾ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿರಲಿಲ್ಲ ಎಂದು ಉಲ್ಲೇಖಾರ್ಹವಾಗಿದೆ.

ಇದನ್ನೂ ಓದಿ: ಹಣ ದ್ವಿಗುಣ ಮಾಡಿ ಕೊಡುವುದಾಗಿ ಉದ್ಯಮಿಗೆ 30 ಲಕ್ಷ ರೂ. ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.