ಹೈದರಾಬಾದ್: ಮಹಾರಾಷ್ಟ್ರದ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆವರಣದಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸೀರಂ ಇನ್‌ಸ್ಟಿಟ್ಯೂಟ್ ಘಟಕಕ್ಕೆ ಅಪಾರ ಹಾನಿಯಾಗಿದ್ದು, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಈ ಹಿಂದೆಯೂ ಹಲವಾರು ಔಷಧ ತಯಾರಿಕಾ ಘಟಕಗಳಲ್ಲಿ ಅನಾಹುತಗಳು ಸಂಭವಿಸಿವೆ. ಭಾರತದ ಫಾರ್ಮಾ ಕಂಪನಿಗಳಲ್ಲಿನ ಬೆಂಕಿ ಅಪಘಾತಗಳ ಒಂದು ನೋಟ ಇಲ್ಲಿದೆ.
ದಿನಾಂಕ | ಕಂಪೆನಿ | ಸ್ಥಳ | ಮೃತ/ಗಾಯಾಳು ಸಂಖ್ಯೆ |
12 - 12 - 2020 | ವಿಂಧ್ಯಾ ಆರ್ಗಾನಿಕ್ಸ್ ಲಿಮಿಟೆಡ್ | ಹೈದರಾಬಾದ್ | 10 ಜನಕ್ಕೆ ಗಾಯ |
11 - 10 - 2020 | ಲಭ್ಯವಿಲ್ಲ | ಹೈದರಾಬಾದ್ | 1 ಸಾವು |
14 - 07 - 2020 | ರಾಮ್ಕಿ ಸಿಇಪಿಟಿ ದ್ರಾವಕ ಕಂಪನಿ, ಜೆಎನ್ ಫಾರ್ಮಾಸಿಟಿ | ವಿಶಾಖಪಟ್ಟಣಂ,ಆಂಧ್ರಪ್ರದೇಶ | 6 ಜನರಿಗೆ ಸುಟ್ಟ ಗಾಯ |
26 - 04 - 2020 | ಸುವೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ | ಹೈದರಾಬಾದ್ | ಯಾವುದೇ ಪ್ರಾಣಹಾನಿ ಇಲ್ಲ |
11 - 08 - 2019 | ಅರಬಿಂದೋ ಫಾರ್ಮಾ | ಶ್ರೀಕಾಕುಲಂ, ಆಂಧ್ರಪ್ರದೇಶ | 2 ಮೃತ, 1 ಗಾಯ |
24 - 02 - 2018 | ಸ್ಯೂಟಿಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ | ಜೀಡಿಮೆಟ್ಲಾ | 7 ಮಂದಿ ಗಾಯ, 3 ಜನ ಗಂಭೀರ |
2 - 05 - 2017 | ಅಜಿಕೊ ಬಯೋಫೋರ್, ಜೆಎನ್ ಫಾರ್ಮಾ ಸಿಟಿ | ವಿಶಾಖಪಟ್ಟಣಂ,ಆಂಧ್ರಪ್ರದೇಶ | 2 ಮಂದಿ ಮೃತ, 3 ಮಂದಿ ಗಾಯ |
28 - 12 - 2016 | ಸನ್ ಫಾರ್ಮಾ | ಅಹ್ಮದ್‌ನಗರ, ಮಹಾರಾಷ್ಟ್ರ | 2 ಮಂದಿ ಸಾವು, 2 ಮಂದಿ ಗಾಯ |
11 - 12 - 2015 | ಅಂಕಲೇಶ್ವರ ಜಿಐಡಿಸಿ | ಅಂಕಲೇಶ್ವರ, ಗುಜರಾತ್ | 3 ಮಂದಿ ಸಾವು, 2 ಮಂದಿ ಗಾಯ |
28 - 09 - 2015 | ಸೈನರ್ ಲೈಫ್ ಸೈನ್ಸಸ್ ಪ್ರೈ. ಲಿಮಿಟೆಡ್, ಜೆಎನ್ ಫಾರ್ಮಾ ಸಿಟಿ | ವಿಶಾಖಪಟ್ಟಣಂ,ಆಂಧ್ರಪ್ರದೇಶ | 2 ಮಂದಿ ಸಾವು,5 ಮಂದಿ ಗಾಯ |
20 - 01 - 2013 | ಡಾ. ರೆಡ್ಡಿ | ಮೆಡಕ್ | 2 ಮಂದಿ ಸಾವು |
5 - 01- 2013 | ಹೆಟೆರೊ ಡ್ರಗ್ಸ್ | ವೈಜಾಗ್ | 2 ಮಂದಿ ಸಾವು |