ಮಾನ್ಸಾ(ಪಂಜಾಬ್) : ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ನಿನ್ನೆ ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ತಂದೆ ಬಲ್ಕೌರ್ ಸಿಂಗ್ ಹೇಳಿಕೆಯ ಮೇರೆಗೆ ಪೊಲೀಸರು ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಮೂಸೆವಾಲಾ ಅವರು ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿಕೋರರು ಸಿಧು ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಸದ್ಯಕ್ಕೆ ದುರ್ಷರ್ಮಿಗಳು ಗಾಯಕನ ಕಾರನ್ನು ಹಿಂಬಾಲಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 1860ರ ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ 302, 307, 341, 148, 149, 427, 120-ಬಿ ಮತ್ತು 25 ಮತ್ತು 27ರ ಅಡಿ ಕೇಸ್ ದಾಖಲಿಸಿದ್ದಾರೆ.
![ಎಫ್‌ಐಆರ್ ಪ್ರತಿ](https://etvbharatimages.akamaized.net/etvbharat/prod-images/whatsapp-image-2022-05-30-at-92722-am-1_3005newsroom_1653883212_700.jpeg)
ಕಳೆದ ತಿಂಗಳು ಗಾಯಕ ಸಿಧು ಮೂಸ್‌ವಾಲಾ ತಮ್ಮ 'ಸ್ಕೇಪ್ಗೋಟ್'(ಬಲಿಪಶು) ಹಾಡಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹಾಡಿದ್ದಾರೆ ಎಂದು ಭಾರಿ ವಿವಾದ ಉಂಟಾಗಿತ್ತು. ಅಲ್ಲದೆ, ಹಾಡಿನಲ್ಲಿ ಗಾಯಕ ಮೂಸಾವಾಲಾ ಎಎಪಿ ಕಾರ್ಯಕರ್ತರನ್ನು ದೇಶದ್ರೋಹಿ ಎಂದೂ ಕರೆದಿದ್ದರು.
ಇದನ್ನೂ ಓದಿ: ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ