ಲಖನೌ: ಈಗ ಪ್ರಸಾರವಾಗುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಹಾಗೂ ವೆಬ್ ಸಿರೀಸ್ಗಳಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗುತ್ತಿದೆ. ಈಗ ತಾಂಡವ್ ವೆಬ್ ಸಿರೀಸ್ನಲ್ಲೂ ದೇವತೆಗಳನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಈಗ ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅಮೆಜಾನ್ ಪ್ರೈಮ್‌ನ ಭಾರತದ ಸಿಇಒ ಅಪರ್ಣಾ ಪುರೋಹಿತ್, ಹಾಗೂ ವೆಬ್ ಸರಣಿಯ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ, ಬರಹಗಾರ ಗೌರವ್ ಸೋಲಂಕಿ ಮತ್ತು ಇತರರ ವಿರುದ್ಧ ಹಜರತ್‌ಗಂಜ್ ಕೊಟ್ವಾಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಓದಿ : 'ತಾಂಡವ್'ನಲ್ಲಿ ಹಿಂದೂ ದೇವತೆಗಳಿಗೆ ಅವಮಾನ: ವೆಬ್ಸಿರೀಸ್ ಬ್ಯಾನ್ಗೆ ಪತ್ರ ಬರೆದ ಸಂಸದ
ತಾಂಡವ್ ಹಿಂದಿ ಭಾಷೆಯ ವೆಬ್ ಸಿರೀಸ್ ಆಗಿದ್ದು, ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗುತ್ತಿದೆ. ಈ ವೆಬ್ ಸಿರೀಸ್ನಲ್ಲಿ ಬಾಲಿವುಡ್ ತಾರೆಯರಾದ ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯಾ ಮತ್ತಿತರರು ಕಾಣಿಸಿಕೊಂಡಿದ್ದಾರೆ.