ETV Bharat / bharat

ಮುಖೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕ ಹೊಂದಿದ್ದ ವಾಹನ.. ಬೆದರಿಕೆ ಪತ್ರದಲ್ಲಿ ಹೀಗಿದೆ.. - ದಕ್ಷಿಣ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ

ಕಾರಿನಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದೆ ಎಂದು ಮುಂಬೈ ಪೊಲೀಸ್ ಮೂಲ ಮಾಹಿತಿ ನೀಡಿದೆ. ಮೂಲದ ಪ್ರಕಾರ, ಹರಕುಮುರುಕು ಇಂಗ್ಲಿಷ್‌ ಕೈಬರಹದಲ್ಲಿ ಪತ್ರ ಬರೆಯಲಾಗಿದ್ದು, ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಬಗ್ಗೆ ಉಲ್ಲೇಖ ಮಾಡಲಾಗಿದೆ..

FIR registered after vehicle with explosives found near Mukesh Ambani's house
ಮುಖೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕಯುಕ್ತ ವಾಹನ
author img

By

Published : Feb 26, 2021, 8:02 AM IST

Updated : Feb 26, 2021, 12:40 PM IST

ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ದಕ್ಷಿಣ ಮುಂಬೈನಲ್ಲಿರುವ ನಿವಾಸದ ಬಳಿ ಸ್ಫೋಟಕ ವಸ್ತುಗಳನ್ನು ತುಂಬಿದ್ದ ವಾಹನವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿಯ ಬಹುಮಹಡಿ ನಿವಾಸವಾದ 'ಆಂಟಿಲಿಯಾ' ಬಳಿಯ ಕಾರ್ಮೈಕಲ್ ರಸ್ತೆಯಲ್ಲಿ ಜಿಲೆಟಿನ್ ತುಂಬಿದ್ದ ಮತ್ತು ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನವನ್ನು ನಿಲ್ಲಿಸಲಾಗಿತ್ತು.

ಅದು ಭಾರೀ ಭಯದ ವಾತಾವರಣ ಉಂಟು ಮಾಡಿತ್ತು. ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಗಮದೇವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ), 465 (ಖೋಟಾ ಶಿಕ್ಷೆ), 473 (ನಕಲಿ ಮುದ್ರೆ ತಯಾರಿಸುವುದು ಅಥವಾ ಹೊಂದಿರುವುದು), 506 (2) (ಕ್ರಿಮಿನಲ್ ಬೆದರಿಕೆ, ಬೆದರಿಕೆ ಉಂಟಾದರೆ) ಸಾವು ಅಥವಾ ತೀವ್ರವಾದ ನೋವು), 120 (ಬಿ) (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಖಲಿನಂಬರ್​ ಪ್ಲೇಟ್​ ಹಾಗೂ ಜಿಲೆಟಿನ್​ ಕಡ್ಡಿ
ನಖಲಿನಂಬರ್​ ಪ್ಲೇಟ್​ ಹಾಗೂ ಜಿಲೆಟಿನ್​ ಕಡ್ಡಿ

ಬೆದರಿಕೆ ಪತ್ರ : ಕಾರಿನಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದೆ ಎಂದು ಮುಂಬೈ ಪೊಲೀಸ್ ಮೂಲ ಮಾಹಿತಿ ನೀಡಿದೆ. ಮೂಲದ ಪ್ರಕಾರ, ಹರಕುಮುರುಕು ಇಂಗ್ಲಿಷ್‌ ಕೈಬರಹದಲ್ಲಿ ಪತ್ರ ಬರೆಯಲಾಗಿದ್ದು, ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಇದು ಕೇವಲ ಟ್ರೈಲರ್ ಅಷ್ಟೇ, ಮತ್ತೆ ಎಲ್ಲಾ ಸಿದ್ಧತೆಗಳೊಂದಿಗೆ ಆಗಮಿಸಿ ಇಡೀ ಕುಟುಂಬವನ್ನು ಹತ್ಯೆ ಮಾಡುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆಯಂತೆ. ಕಾರಿನೊಳಗೆ ಒಂದು ಪತ್ರವೂ ಕಂಡು ಬಂದಿದ್ದು, ವಕ್ತಾರರು ಆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

Last Updated : Feb 26, 2021, 12:40 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.