ETV Bharat / bharat

ಪ್ರಧಾನಿಯ ಆಧ್ಯಾತ್ಮಿಕ ಗುರು ಎಂದು ಹೇಳಿಕೊಳ್ಳುತ್ತಿದ್ದ ಸ್ವಾಮೀಜಿ ವಿರುದ್ಧ ಎಫ್​ಐಆರ್​

author img

By

Published : Apr 11, 2022, 11:07 AM IST

ಒಂದು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪುಲ್ಕಿತ್ ಮಹಾರಾಜ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ.

Nipun Aggarwal SP City Ghaziabad  Alleged Pulkit Maharaj  ghaziabad news update  Prime Minister Spiritual Guru  ಪುಲ್ಕಿತ್ ಮಹಾರಾಜ್ ವಿರುದ್ಧ ಪೊಲೀಸರು ಕ್ರಮ  ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪುಲ್ಕಿತ್​ ಪ್ರಧಾನಿ ಮೋದಿಯ ಆಧ್ಯಾತ್ಮಿಕ ಗುರು  ಗಾಜಿಯಾಬಾದ್​ ಅಪರಾಧ ಸುದ್ದಿ
ಪುಲ್ಕಿತ್ ಮಹಾರಾಜ್ ವಿಡಿಯೋ ವೈರಲ್​

ನವದೆಹಲಿ/ಗಾಜಿಯಾಬಾದ್: ಈ ಹಿಂದೆ ಪ್ರಧಾನಿ ಮೋದಿಯ ಆಧ್ಯಾತ್ಮಿಕ ಗುರು ಎಂದು ಹೇಳಿ ಜನರನ್ನು ವಂಚಿಸಿ ಜೈಲಿಗೆ ಹೋಗಿದ್ದ ಪುಲ್ಕಿತ್ ಮಹಾರಾಜ್ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಗುರೂಜಿ ಒಂದು ಸಮುದಾಯದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಅವರ ವಿರುದ್ಧ ಎಫ್​ ಐ ಆರ್​ ದಾಖಲಾಗಿದೆ.

ಪುಲ್ಕಿತ್ ಮಹಾರಾಜ್ ವಿಡಿಯೋ ವೈರಲ್​

ಗಾಜಿಯಾಬಾದ್‌ನ ಸಾಹಿಬಾಬಾದ್​ನ ಶಾಲಿಮಾರ್ ಗಾರ್ಡನ್ ನಗರದಲ್ಲಿ ಪುಲ್ಕಿತ್ ಮಹಾರಾಜ್ ಮನೆಯಿದೆ. ಪುಲ್ಕಿತ್​ ಮಹಾರಾಜ್​ ಮಾತನಾಡಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಸಖತ್​ ವೈರಲ್​ ಆಗ್ತಿದೆ. ವಿಡಿಯೋದಲ್ಲಿ ಮಹಾರಾಜ್ ಸಮುದಾಯವೊಂದಕ್ಕೆ ಆಕ್ಷೇಪಾರ್ಹ ಮಾತುಗಳನ್ನಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋದ ಬಗ್ಗೆ ಪೊಲೀಸರು ಗಮನಹರಿಸಬೇಕು ಎಂದು ಕೆಲವರು ಮನವಿ ಮಾಡಿದ್ದಾರೆ.

ಓದಿ: ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಿ, ಬೆಂಕಿ ಹಚ್ಚಿದ ಕಿಡಿಗೇಡಿಗಳು..

ಟ್ವಿಟರ್‌ನಲ್ಲಿ ಬಂದ ಈ ದೂರಿನ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಎಸ್ಪಿ ನಿಪುನ್ ಅಗರ್ವಾಲ್ ಈ ಬಗ್ಗೆ ತಿಳಿಸಿದ್ದಾರೆ. ಪುಲ್ಕಿತ್ ತಮ್ಮನ್ನು ಪ್ರಧಾನಿಯ ಆಧ್ಯಾತ್ಮಿಕ ಗುರು ಎಂದು ಕರೆದುಕೊಳ್ಳುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಈಗಾಗಲೇ ಮೋಸ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಈ ಬಗ್ಗೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.