ETV Bharat / bharat

ಆರ್ಥಿಕ ಸಂಕಷ್ಟ: ಹೆಂಡ್ತಿ, ಮೂವರು ಮಕ್ಕಳಿಗೆ ವಿಷ ನೀಡಿ ಪರಾರಿಯಾದ ಪಾಪಿ ಗಂಡ - ಇಡೀ ಕುಟುಂಬಕ್ಕೆ ವಿಷ ನೀಡಿದ ವ್ಯಕ್ತಿ

ಕೊರೊನಾ ಸೋಂಕಿನಿಂದ ಹೊರಬರಲು ಉತ್ತರ ಪ್ರದೇಶದಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಅನೇಕ ಬಡ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.

merut latest news
merut latest news
author img

By

Published : May 10, 2021, 8:36 PM IST

ಮೀರತ್​(ಉತ್ತರ ಪ್ರದೇಶ): ದೇಶದಲ್ಲಿ ಕೊರೊನಾ ಸೋಂಕಿನಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಇದರ ಮಧ್ಯೆ ಉತ್ತರ ಪ್ರದೇಶದ ಮೀರತ್​ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಇಡೀ ಕುಟುಂಬಕ್ಕೆ ವಿಷ ನೀಡಿರುವ ವ್ಯಕ್ತಿಯೋರ್ವ ತಂದನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಉತ್ತರ ಪ್ರದೇಶದ ಪಶ್ಚಿಮ ಮೀರತ್​ನಲ್ಲಿ ಈ ಘಟನೆ ನಡೆದಿದೆ. ಹೆಂಡತಿ ಹಾಗೂ ಮೂವರು ಮಕ್ಕಳಿಗೆ ವಿಷ ನೀಡಿರುವ ಭೂಪ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯಿಂದ ಹೆಂಡತಿ ಹಾಗೂ ಓರ್ವ ಮಗಳು ಸಾವನ್ನಪ್ಪಿದ್ದು, ಇಬ್ಬರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!

ಉತ್ತರ ಪ್ರದೇಶದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿರುವ ಕಾರಣ, ಕೆಲಸ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಆತ ತೊಂದರೆಗೊಳಗಾಗಿದ್ದನು ಎಂದು ತಿಳಿದು ಬಂದಿದೆ.

ಅಕ್ರಂ ಕಟ್ಟಿಗೆ ಕಡಿಯುವ ಕೆಲಸ ಮಾಡುತ್ತಿದ್ದನು. ಲಾಕ್​ಡೌನ್ ಕಾರಣ ಕೆಲಸ ಕಳೆದುಕೊಂಡಿದ್ದರಿಂದ ಕುಟುಂಬ ನಡೆಸುವುದು ಕಠಿಣವಾಗಿತ್ತು. ಇದೇ ವಿಷಯಕ್ಕಾಗಿ ಗಂಡ - ಹೆಂಡತಿ ನಡುವೆ ಮೇಲಿಂದ ಮೇಲೆ ಜಗಳ ಸಹ ನಡೆಯುತ್ತಿತ್ತು. ಇದೇ ವಿಷಯಕ್ಕೆ ಕೋಪಗೊಂಡ ಆತ ಹೆಂಡತಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ನೀಡಿ ಪರಾರಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.