ಅಮರಾವತಿ (ಮಹಾರಾಷ್ಟ್ರ): ಯುವತಿಯೊಬ್ಬಳು ಓಡಿ ಹೋದ ವಿಷಯದ ಬಗ್ಗೆ ಅನ್ಯ ಧರ್ಮದ ಯುವಕನ ವಿರುದ್ಧ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ವಾಗ್ವಾದ ನಡೆಸಿದ್ದ ಮಹಾರಾಷ್ಟ್ರದ ಅಮರಾವತಿ ಪಕ್ಷೇತರ ಸಂಸದೆ ನವನೀತ್ ರಾಣಾ ವಿರುದ್ಧ ಕೇಸ್ ದಾಖಲಾಗಿದೆ.
ಇಲ್ಲಿನ ಹಮಲಪುರ ಪ್ರದೇಶದ ಯುವತಿ ಓಡಿ ಹೋದ ಬಗ್ಗೆ ಯುವಕನೋರ್ವವನ್ನು ಬಂಧಿಸಿಸಲಾಗಿತ್ತು. ಆದರೆ, ಓಡಿ ಹೋದ ಯುವತಿಗೂ ಆ ಯುವಕನಿಗೂ ಯಾವುದೇ ಸಂಬಂಧವಿರಲಿಲ್ಲ. ಮೇಲಾಗಿ ಓಡಿ ಹೋದ ಯುವತಿಯ ಧರ್ಮ ಮತ್ತು ಯುವಕನ ಧರ್ಮವೇ ಬೇರೆ ಬೇರೆಯಾಗಿತ್ತು. ಆದರೆ, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಲಾಗಿತ್ತು. ಇದೇ ವಿಷಯವಾಗಿ ರಾಜಾಪೇಟ್ ಪೊಲೀಸ್ ಠಾಣೆಗೆ ತೆರಳಿದ್ದ ಸಂಸದೆ ನವನೀತ್ ರಾಣಾ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಸದೆ ಒತ್ತಾಯಿಸಿದ್ದರು.
ಇದೀಗ ಯುವಕನ ಪೋಷಕರು ಓಡಿ ಹೋದ ಯುವತಿಗೂ ನಮ್ಮ ಮಗನಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮಗನ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಲಾಗಿದೆ ಎಂದು ರಾಜಾಪೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ದೂರಿನನ್ವಯ ಸಂಸದೆ ನವನೀತ್ ರಾಣಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿಗೆ ಸಂಕಷ್ಟ: ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ ಶಾಸಕ ಸಾರಾ ಮಹೇಶ್