ETV Bharat / bharat

ಕೋವಿಡ್ ಕುರಿತು ಸುಳ್ಳು ಹೇಳಿಕೆ ನೀಡಿದ ನಿರ್ದೇಶಕಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

author img

By

Published : Jun 11, 2021, 9:12 AM IST

ಲಕ್ಷದ್ವೀಪದಲ್ಲಿ ಕೋವಿಡ್ ಹರಡಲು ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿದ್ದ ಚಿತ್ರ ನಿರ್ದೇಶಕಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

filmmaker-ayesha-sulthana
ನಿರ್ದೇಶಕಿ ಆಯೆಷಾ ಸುಲ್ತಾನಾ

ಕೊಚ್ಚಿ (ಕೇರಳ): ಕೋವಿಡ್ ಸೋಂಕು ವಿರುದ್ಧ ಸುಳ್ಳು ಸುದ್ದಿ ಹರಡಿದ ಗಂಭೀರ ಆರೋಪದಡಿ ಸಿನಿಮಾ ನಿರ್ದೇಶಕಿ ಆಯೆಷಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಟಿವಿ ಚರ್ಚೆಯೊಂದರಲ್ಲಿ ಕೋವಿಡ್​ ಕುರಿತು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಲಕ್ಷದ್ವೀಪದ ಬಿಜೆಪಿ ನಾಯಕ ನೀಡಿರುವ ದೂರಿನ ಅನ್ವಯ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಯೆಷಾ ವಿರುದ್ಧ ಲಕ್ಷದ್ವೀಪದ ಕವರಟ್ಟಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 124 ಎ (ದೇಶದ್ರೋಹ) 153 ಬಿ (ದ್ವೇಷ ಭಾಷಣ) ಅಡಿ ಪ್ರಕರಣ ದಾಖಲಾಗಿದೆ. ಮಲಯಾಳಂ ಟಿವಿ ಚರ್ಚೆಯೊಂದರಲ್ಲಿ ಲಕ್ಷದ್ವೀಪದಲ್ಲಿ ಕೊರೊನಾ ಹರಡಲು ಕೇಂದ್ರ ಸರ್ಕಾರ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಆಯೆಷಾ ಗಂಭೀರ ಆರೋಪ ಮಾಡಿದ್ದರು.

ಆಯೆಷಾ ಹೇಳಿಕೆ ನೀಡಿದ್ದ ಬೆನ್ನಲ್ಲೇ ಲಕ್ಷದ್ವೀಪದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ ಇದೇ ವೇಳೆ ಹಲವು ಸಂಘಟನೆಗಳು ಆಯೆಷಾ ಪರವಾಗಿ ಧ್ವನಿ ಎತ್ತಿದ್ದವು.

ಇದನ್ನೂ ಓದಿ: ಉಲ್ಟಾ ಹೊಡೆದ ಬಾಬಾ ರಾಮ್​ದೇವ್​: ಕೆಲವೇ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ತಾರಂತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.