ETV Bharat / bharat

ನೀರಿನಿಂದ ಶವ ಹೊರತೆಗೆಯೋ 'ಶವಾಲ ಶಿವ'ನಿಂದ ಆ್ಯಂಬುಲೆನ್ಸ್: ಸೋನು ಸೂದ್ ಚಾಲನೆ - ಸೋನು ಸೂದ್ ಲೇಟೆಸ್ಟ್ ನ್ಯೂಸ್

ಹೈದರಾಬಾದ್​ನ ಟ್ಯಾಂಕ್​ ಬಂಡ್​​ನಲ್ಲಿ ಬಿದ್ದು ಸಾವನ್ನಪ್ಪಿದ ಶವಗಳನ್ನು ಮೇಲಕ್ಕೆತ್ತಲು ಸಹಾಯ ಮಾಡುತ್ತಿದ್ದ 'ಶವಾಲ ಶಿವ'ನ ಆ್ಯಂಬುಲೆನ್ಸ್​ಗೆ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.

FILM Actor Sonu Sood
ಸೋನು ಸೂದ್
author img

By

Published : Jan 19, 2021, 3:34 PM IST

Updated : Jan 19, 2021, 4:25 PM IST

ಹೈದರಾಬಾದ್ : ತೆಲಂಗಾಣದ ರಾಜಧಾನಿ ಹೈದರಾಬಾದ್​ನ ಟ್ಯಾಂಕ್​ ಬಂಡ್ ಒಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಅಥವಾ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ವ್ಯಕ್ತಿಗಳ ಶವಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಆ್ಯಂಬುಲೆನ್ಸ್​ಗೆ ಬಹುಭಾಷಾ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.

ಸೋನು ಸೂದ್ ಅವರಿಂದ ಆ್ಯಂಬುಲೆನ್ಸ್ ಉದ್ಘಾಟನೆ

ಶವಾಲ (ಮೃತದೇಹಗಳ) ಶಿವ ಎಂಬಾತನ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ್ದು, ಆತ ಶವಗಳನ್ನು ಹೊರತೆಗೆದಾಗ ಜನರು ನೀಡುತ್ತಿದ್ದ ಹಣವನ್ನು ಖರ್ಚು ಮಾಡದೇ ಆ ಹಣದಿಂದ ಆ್ಯಂಬುಲೆನ್ಸ್ ಖರೀದಿಸಿದ್ದಾನೆ.

ಇದನ್ನೂ ಓದಿ: ಕಾಡಿನಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಮದ್ಯ ವಶಕ್ಕೆ!

ಈ ಆ್ಯಂಬುಲೆನ್ಸ್ ಸೇವೆಗೆ ನಟ ಸೋನು ಸೂದ್ ಚಾಲನೆ ನೀಡಿದ್ದು, 'ಶವಾಲ ಶಿವ'ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವಕರು ಶವಾಲ ಶಿವನನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಆ್ಯಂಬುಲೆನ್ಸ್​ಗೆ ಚಾಲನೆ ನೀಡುವ ವೇಳೆ ಶಾಸಕ ಮುಟಾ ಗೋಪಾಲ್ ಪೂಜೆ ನೆರವೇರಿಸಿದ್ದು, ಶವಾಲ ಶಿವನ ಕಾರ್ಯವನ್ನು ಶ್ಲಾಘಿಸಿದ್ದಾರೆ.

Last Updated : Jan 19, 2021, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.