ETV Bharat / bharat

ಉಕ್ರೇನ್​ನಿಂದ ಭಾರತಕ್ಕೆ ಬಂದಿಳಿದ 5ನೇ ವಿಮಾನ: ಮತ್ತೆ 249 ಭಾರತೀಯರ ರಕ್ಷಣೆ - ಉಕ್ರೇನ್​ನಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 'ಆಪರೇಷನ್​ ಗಂಗಾ'ದಡಿ ನಡೆಸಲಾಗುತ್ತಿರುವ ಈ ವಿಶೇಷ ಕಾರ್ಯಾಚರಣೆಯ 5ನೇ ವಿಮಾನ ಉಕ್ರೇನ್​ನಿಂದ 249 ಭಾರತೀಯರನ್ನು ಹೊತ್ತು ಇಂದು ಬೆಳಗ್ಗೆ ದೆಹಲಿಗೆ ಬಂದಿಳಿಯಿತು.

flight-carrying
ವಿಮಾನ
author img

By

Published : Feb 28, 2022, 8:56 AM IST

Updated : Feb 28, 2022, 9:36 AM IST

ನವದೆಹಲಿ: 'ಆಪರೇಷನ್​ ಗಂಗಾ'ದಡಿ ರೊಮೇನಿಯಾದ ಬುಕಾರೆಸ್ಟ್​ನಿಂದ ಭಾರತೀಯರನ್ನು ಏರ್​ಲಿಫ್ಟ್​ ಮಾಡಲಾಗುತ್ತಿದೆ. ಇಂದು 249 ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಉಕ್ರೇನ್​ನಿಂದ ಭಾರತಕ್ಕೆ ಬಂದಿಳಿದ 5ನೇ ವಿಮಾನ

ಉಕ್ರೇನ್​ನಿಂದ ರೊಮೇನಿಯಾ ಗಡಿಗೆ ಬಂದ ಬಳಿಕ ನಮ್ಮನ್ನು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಾಕಷ್ಟು ಸಹಾಯ ಮಾಡಿ, ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಸರ್ಕಾರ ಕರೆತರುವ ಭರವಸೆ ಇದೆ. ಇನ್ನೂ ಹಲವಾರು ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿದ್ದಾರೆ ಎಂದು ಭಾರತಕ್ಕೆ ಬಂದಿಳಿದ ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಈವರೆಗೂ ಭಾರತ ಸರ್ಕಾರ ಉಕ್ರೇನ್​ನಲ್ಲಿ ಸಿಲುಕಿದ್ದ 2,000 ಕ್ಕೂ ಅಧಿಕ ಭಾರತೀಯರನ್ನು 5 ವಿಮಾನಗಳಲ್ಲಿ ತಾಯ್ನಾಡಿಗೆ ಕರೆತಂದಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಮಗ, ಚಿಂತೆಯಲ್ಲೇ ಪ್ರಾಣಬಿಟ್ಟ ತಾಯಿ: ವಿಡಿಯೋ ಕರೆಯ​ಲ್ಲೇ ಅಂತಿಮ ದರ್ಶನ ಪಡೆದ ಪುತ್ರ

Last Updated : Feb 28, 2022, 9:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.