ಚೆನ್ನೈ: ಮಸಾಲೆ ಪದಾರ್ಥ, ಮಾವು, ನಿಂಬೆ ಹುಳಿ ಸೇರಿದಂತೆ ವಿವಿಧ ರುಚಿಕರ ಖಾದ್ಯಗಳನ್ನು ದೇಶವಲ್ಲದೇ, ವಿದೇಶಗಳಿಗೂ ರಫ್ತು ಮಾಡುವ ಪ್ರಿಯಾ ಫುಡ್ಸ್ ಸಂಸ್ಥೆಗೆ 'ಸ್ಟಾರ್ ರಫ್ತು ಪ್ರಶಸ್ತಿ' ಲಭಿಸಿದೆ. ತಮಿಳುನಾಡಿನ ಚೆನ್ನೈನಲ್ಲಿ ಭಾರತೀಯ ರಫ್ತು ಸಂಸ್ಥೆ ಫೆಡರೇಶನ್ (ಎಫ್‌ಐಇಒ) ಆಯೋಜಿಸಿದ್ದ ದಕ್ಷಿಣ ವಲಯದ ರಫ್ತು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾ ಫುಡ್ಸ್‌ಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಗುಣಮಟ್ಟದ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ದೇಶಕ್ಕೆ ವಿದೇಶಿ ವಿನಿಮಯವನ್ನು ಹೆಚ್ಚಿನ ಪ್ರಮಾಣದಲ್ಲಿ ತರುವ ಪ್ರಯತ್ನಕ್ಕಾಗಿ ಪ್ರಿಯಾ ಫುಡ್ಸ್‌ಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಣ್ಣ ಕೈಗಾರಿಕೆ ಸಚಿವ ಟಿ.ಎಂ. ಅನ್ಬರಸನ್ ಮತ್ತು ಪ್ರಿಯಾ ಫುಡ್ಸ್‌ನ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಿಯಾ ಫುಡ್ಸ್‌ನ ಹಿರಿಯ ವ್ಯವಸ್ಥಾಪಕ ವೀರಮಾಚನೇನಿ ಕೃಷ್ಣ ಚಂದ್ ಅವರು ಸಿಎಂ ಸ್ಟಾಲಿನ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಿಯಾ ಫುಡ್ಸ್‌ಗೆ 2017-18ನೇ ಸಾಲಿನಲ್ಲಿ 'ದಕ್ಷಿಣ ಭಾರತ ಭಾಗದ ಟಾಪ್ ಒನ್ ಸ್ಟಾರ್ ಎಕ್ಸ್‌ಪೋರ್ಟ್ ಹೌಸ್' ವಿಭಾಗದಲ್ಲಿ ಅತ್ಯುತ್ತಮ ರಫ್ತುದಾರರ ಪ್ರಶಸ್ತಿಯನ್ನು ನೀಡಲಾಗಿತ್ತು.