ಮುಂಬೈ: ಸಿಬಿಐಸಿ ಅಡಿಯಲ್ಲಿ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಮುಂಬೈ ವಲಯ ಘಟಕದಿಂದ ನಾಲ್ವರನ್ನು ಬಂಧಿಸಲಾಗಿದೆ.
ರಾಣೆ ಮೆಗಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ, ಎಸಿಎಸ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಮಾಲೀಕ, ಕೇಶರಿಯಾ ಮೆಟಲ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮತ್ತು ಶೈಲಜಾ ಕಮರ್ಷಿಯಲ್ ಟ್ರೇಡ್ ಫ್ರೆಂಜಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಂಧಿತ ಆರೋಪಿಗಳು.
ಈ ಕಂಪನಿಗಳು ಫಿಕ್ಷನಲ್ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಅನ್ನು ಪಡೆದುಕೊಂಡಿವೆ ಮತ್ತು ಬಳಸಿಕೊಂಡಿವೆ ಎನ್ನಲಾಗ್ತಿದೆ. ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆ ಇಲ್ಲದೆ 408.67 ಕೋಟಿ ರೂಪಾಯಿ ಬಿಲ್ಗಳನ್ನು ನೀಡಿದ್ದಾರೆ ಮತ್ತು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಸಿಎಸ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಯಾವುದೇ ಸರಕು ಅಥವಾ ಸೇವೆಗಳ ಸರಬರಾಜು ಇಲ್ಲದೆ 85.38 ಕೋಟಿ ಫಿಕ್ಷನಲ್ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿದೆ. ಇದೇ ರೀತಿ ರಾಣೆ ಮೆಗಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಯಾವುದೇ ಸರಕು ಪಡೆಯದೆ 85.44 ಕೋಟಿ ರೂಪಾಯಿಯನ್ನು ಮತ್ತೊಂದು ಕಂಪನಿಗೆ ವರ್ಗಾಯಿಸಿದೆ ಎಂದು ಆರೋಪಿಸಲಾಗಿದೆ.
ಸೆಕ್ಷನ್ 132 (1) (ಬಿ) ಮತ್ತು ಸೆಕ್ಷನ್ 132 (1) (ಸಿ) ಅಡಿಯಲ್ಲಿ ಅಪರಾಧಗಳನ್ನು ಎಸಗಿದ್ದಕ್ಕಾಗಿ ಮೇಲಿನ ಎಲ್ಲಾ ಆರೋಪಿಗಳನ್ನು ಕೇಂದ್ರ ಸರಕು ಮತ್ತು ಸೇವಾ ಕಾಯ್ದೆ 2017 ರ ಸೆಕ್ಷನ್ 69 (1)ರ ಅಡಿಯಲ್ಲಿ ಬಂಧಿಸಲಾಗಿದೆ. ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನಾಲ್ವರು ಆರೋಪಿಗಳನ್ನು ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.