ಸಿದ್ಧಾರ್ಥನಗರ(ಉತ್ತರ ಪ್ರದೇಶ): ಶಾಲೆಯ ಮುಖ್ಯೋಪಾಧ್ಯಾಯನೊಬ್ಬನಿಗೆ ಸಹಾಯಕ ಶಿಕ್ಷಕಿಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖುನಿಯಾವ್ ಬ್ಲಾಕ್ ಪ್ರದೇಶದ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಶಿಕ್ಷಕಿಯೊಬ್ಬಳು, ಮುಖೋಪಾಧ್ಯಾಯನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಣಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ಸಹಾಯಕ ಶಿಕ್ಷಕಿ ಕೆಲಸ ಮಾಡ್ತಿದ್ದು, ಈ ವೇಳೆ, ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಭಾಷಣೆ ನಡೆದಿದ್ದು, ಇದರಿಂದ ಮಹಿಳಾ ಶಿಕ್ಷಕಿ ಸಿಟ್ಟಿಗೆದ್ದಿದ್ದಾಳೆ. ಹೀಗಾಗಿ ಮುಖ್ಯೋಪಾಧ್ಯಾಯ ಮನೋಜ್ ಕುಮಾರ್ ಅವರನ್ನು ಥಳಿಸಿದ್ದಾರೆ. ಅದರ ವಿಡಿಯೋ ಸೆರೆ ಹಿಡಿದಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಈ ಘಟನೆ ಒಂದು ವಾರದ ಹಿಂದೆ ನಡೆದಿರುವುದು ಎನ್ನಲಾಗುತ್ತಿದೆ.
ಶಾಲೆಯಲ್ಲಿ ಇದೀಗ ತೇಜ್ಪಾಲ್ ಹಾಗೂ ಪೂನಂ ಅವರನ್ನ ನಿಯೋಜನೆ ಮಾಡಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಇವರಿಬ್ಬರನ್ನ ಅಮಾನತುಗೊಳಿಸಲಾಗಿದೆ.