ಚೆನ್ನೈ (ತಮಿಳುನಾಡು): ರೈಲಿನ ಲೇಡಿಸ್ ಕೋಚ್ನಲ್ಲಿ ಹತ್ತಿದ ವ್ಯಕ್ತಿಯೋರ್ವನಿಗೆ ಇಳಿಯುವಂತೆ ಹೇಳಿದ ರೈಲ್ವೆ ಭದ್ರತಾ ಪಡೆಯ ಮಹಿಳಾ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದ ಘಟನೆ ಚೆನ್ನೈನ ಬೀಚ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಣ್ಣ ಚಾಕುವಿನಿಂದ ಮಹಿಳಾ ಪೇದೆಯ ಎದೆ ಮತ್ತು ಕುತ್ತಿಗೆಗೆ ಇರಿದು ಆರೋಪಿ ಪರಾರಿಯಾಗಿದ್ದಾನೆ.
ಆರ್ಪಿಎಫ್ ಕಾನ್ಸ್ಟೇಬಲ್ ಆಸಿರ್ವಾ ಎಂಬುವವರೇ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ರೈಲಿನ ಮಹಿಳಾ ಕಂಪಾರ್ಟ್ಮೆಂಟ್ಗೆ ಪುರುಷನೋರ್ವ ಹತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಈ ಕಂಪಾರ್ಟ್ಮೆಂಟ್ನಿಂದ ಹೊರಹೋಗುವಂತೆ ಆಸಿರ್ವಾ ಸೂಚಿಸಿದ್ದರು. ಆದರೆ, ಈ ವೇಳೆ 40 ವರ್ಷ ವಯಸ್ಸಿನ ವ್ಯಕ್ತಿ ಪೇದೆ ಹಲ್ಲೆಯೇ ಚಾಕುವಿನಿಂದ ನಡೆಸಿದ್ದಾನೆ.
ಇದರಿಂದ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದಲೇ ಪೇದೆ ಆಸಿರ್ವಾ ರೈಲಿನಿಂದ ಜಿಗಿದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಎಗ್ಮೋರ್ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳು ಆಸಿರ್ವಾರನ್ನು ಪೆರಂಬುರ್ ರೈಲ್ವೆ ಆಸ್ಪತ್ರೆಗೆ ಸೇರಿದ್ದಾರೆ.
ಈ ಘಟನೆ ಸಂಬಂಧ ಕೊಲೆ ಯತ್ನ, ಸರ್ಕಾರಿ ನೌಕರಿಗೆ ಅಡ್ಡಿ ಸೇರಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ವಹಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ಪೊಲೀಸ್ ಠಾಣೆ ಪಕ್ಕದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ