ETV Bharat / bharat

ಉಬರ್ ಚಾಲಕನಿಂದ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ; ಪೊಲೀಸರಿಗೆ ದೂರು

author img

By

Published : Mar 3, 2023, 8:37 AM IST

ಪ್ರಯಾಣದ ಸಂದರ್ಭದಲ್ಲಿ ಉಬರ್ ಆಟೋ ಚಾಲಕ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಮಹಿಳಾ ಪತ್ರಕರ್ತೆಯೊಬ್ಬರು ದೆಹಲಿ ಪೊಲೀಸರು ಹಾಗು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

Sexual harassment
ಲೈಂಗಿಕ ಕಿರುಕುಳ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಉಬರ್ ಆಟೋ ಚಾಲಕನ ವಿರುದ್ಧ ಮಹಿಳಾ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ನಿವಾಸದಿಂದ ಸ್ನೇಹಿತನನ್ನು ಭೇಟಿ ಮಾಡಲು ಹೋಗುವ ಮಾರ್ಗಮಧ್ಯೆ ಚಾಲಕ ದುಷ್ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಹಿಳೆ ದೆಹಲಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಆಯೋಗವು ದೂರು ಸ್ವೀಕರಿಸಿ ನಗರ ಪೊಲೀಸ್ ಮತ್ತು ಕ್ಯಾಬ್ ಸಂಸ್ಥೆಗೆ ನೋಟಿಸ್ ನೀಡಿದೆ. ಉಬರ್ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತನಗಾದ ಕಿರುಕುಳವನ್ನು ಸಂತ್ರಸ್ತೆ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

  • दिल्ली में एक महिला पत्रकार से Uber Auto में हुई छेड़छाड़ की दुर्भाग्यपूर्ण घटना पर Uber India और दिल्ली पुलिस को नोटिस जारी किया है। महिलाओं की सुरक्षा के लिए Uber द्वारा क्या कदम उठाए जाते हैं उसकी भी जानकारी तलब की है। pic.twitter.com/LXOF8KJHZG

    — Swati Maliwal (@SwatiJaiHind) March 2, 2023 " class="align-text-top noRightClick twitterSection" data=" ">

दिल्ली में एक महिला पत्रकार से Uber Auto में हुई छेड़छाड़ की दुर्भाग्यपूर्ण घटना पर Uber India और दिल्ली पुलिस को नोटिस जारी किया है। महिलाओं की सुरक्षा के लिए Uber द्वारा क्या कदम उठाए जाते हैं उसकी भी जानकारी तलब की है। pic.twitter.com/LXOF8KJHZG

— Swati Maliwal (@SwatiJaiHind) March 2, 2023

"ಮಾರ್ಚ್​ 1ರಂದು ಸ್ನೇಹಿತನನ್ನು ಭೇಟಿ ಮಾಡಲು ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ತನ್ನ ನಿವಾಸದಿಂದ ಮಾಳವೀಯ ನಗರಕ್ಕೆ ಹೋಗಲು ಉಬರ್‌ನಲ್ಲಿ ಆಟೋ​ ಬುಕ್​ ಮಾಡಿದೆ. ಸ್ವಲ್ಪ ಸಮಯದ ನಂತರ ಚಾಲಕ ಆಟೋದ ಸೈಡ್ ಮಿರರ್‌ಗಳ ಮೂಲಕ ನಿಖರವಾಗಿ ನನ್ನ ಸ್ತನಗಳನ್ನು ನೋಡುತ್ತಿರುವುದನ್ನು ಗಮನಿಸಿದೆ. ಬಳಿಕ ನಾನು ಸೀಟಿನ ಬಲಕ್ಕೆ ತಿರುಗಿದೆ. ಅದರೂ ಚಾಲಕ ಕನ್ನಡಿಯ ಬಲಭಾಗದಲ್ಲಿ ನನ್ನನ್ನು ನೋಡಲು ಪ್ರಾರಂಭಿಸಿದ. ಇದರಿಂದ ನನಗೆ ತೀವ್ರ ಕಿರಿಕಿರಿ ಉಂಟಾಗಿ ಸೀಟಿನ ತೀರಾ ಎಡಕ್ಕೆ ತಿರುಗಿಕೊಂಡೆ. ಈ ವೇಳೆ ಯಾವುದೇ ಕನ್ನಡಿಯಲ್ಲೂ ನಾನು ಚಾಲಕನಿಗೆ ಕಾಣಿಸಲಿಲ್ಲ. ಇಷ್ಟಾದರೂ ಆತ ನನ್ನನ್ನು ಮತ್ತೆ ಮತ್ತೆ ನೋಡಲು ಶುರು ಮಾಡಿದ. ಇದಕ್ಕೂ ಮೊದಲು ನಾನು ಉಬರ್‌ನ ಸುರಕ್ಷತಾ ಕ್ರಮವನ್ನು ಬಳಸಲು ಪ್ರಯತ್ನಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ."

"ಮೊದಲ ಬಾರಿಗೆ ಉಬರ್​ ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿದಾಗ ಆಡಿಯೋ ಸ್ಪಷ್ಟವಾಗಿರಲಿಲ್ಲ. ನಾನು ನಂತರ ಸಂಖ್ಯೆಯನ್ನು ಮರು ಡಯಲ್ ಮಾಡಿದೆ. ಕಳಪೆ ನೆಟ್‌ವರ್ಕ್‌ನಿಂದ ಆಡಿಯೋ ಕೇಳಲಿಲ್ಲ. ಇದಾದ ಬಳಿಕ ನಾನು ಪೊಲೀಸರಿಗೆ ದೂರು ನೀಡುವುದಾಗಿ ಚಾಲಕನಿಗೆ ಎಚ್ಚರಿಕೆ ನೀಡಿದೆ. ಆದರೂ ಆತ ದುಷ್ಕೃತ್ಯ ಮುಂದುವರಿಸಿದ" ಎಂದು ಮಹಿಳೆ ವಿವರಿಸಿದ್ದಾರೆ.

ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ನೋಟಿಸ್‌ ನೀಡಿದ್ದು, ಮಾರ್ಚ್ 6 ರೊಳಗೆ ಕ್ರಮ ಕೈಗೊಂಡು ವರದಿ ಕೋರಿದೆ. ಉಬರ್‌ಗೆ ನೀಡಿದ ನೋಟಿಸ್‌ನಲ್ಲಿ, ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ತೆಗೆದುಕೊಂಡ ಕ್ರಮಗಳು ಮತ್ತು ಆರೋಪಿ ಆರೋಪಿ ಚಾಲಕ ವಿರುದ್ಧ ಜರುಗಿಸಿದ ಕ್ರಮದ ಬಗ್ಗೆ ವಿವರ ಕೇಳಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಯಾವುದೇ ಘರ್ಷಣೆ ನಡೆದಿಲ್ಲ ಎಂದ ತಮಿಳುನಾಡು ಡಿಜಿಪಿ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಉಬರ್ ಆಟೋ ಚಾಲಕನ ವಿರುದ್ಧ ಮಹಿಳಾ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ನಿವಾಸದಿಂದ ಸ್ನೇಹಿತನನ್ನು ಭೇಟಿ ಮಾಡಲು ಹೋಗುವ ಮಾರ್ಗಮಧ್ಯೆ ಚಾಲಕ ದುಷ್ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಹಿಳೆ ದೆಹಲಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಆಯೋಗವು ದೂರು ಸ್ವೀಕರಿಸಿ ನಗರ ಪೊಲೀಸ್ ಮತ್ತು ಕ್ಯಾಬ್ ಸಂಸ್ಥೆಗೆ ನೋಟಿಸ್ ನೀಡಿದೆ. ಉಬರ್ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತನಗಾದ ಕಿರುಕುಳವನ್ನು ಸಂತ್ರಸ್ತೆ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

  • दिल्ली में एक महिला पत्रकार से Uber Auto में हुई छेड़छाड़ की दुर्भाग्यपूर्ण घटना पर Uber India और दिल्ली पुलिस को नोटिस जारी किया है। महिलाओं की सुरक्षा के लिए Uber द्वारा क्या कदम उठाए जाते हैं उसकी भी जानकारी तलब की है। pic.twitter.com/LXOF8KJHZG

    — Swati Maliwal (@SwatiJaiHind) March 2, 2023 " class="align-text-top noRightClick twitterSection" data=" ">

"ಮಾರ್ಚ್​ 1ರಂದು ಸ್ನೇಹಿತನನ್ನು ಭೇಟಿ ಮಾಡಲು ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ತನ್ನ ನಿವಾಸದಿಂದ ಮಾಳವೀಯ ನಗರಕ್ಕೆ ಹೋಗಲು ಉಬರ್‌ನಲ್ಲಿ ಆಟೋ​ ಬುಕ್​ ಮಾಡಿದೆ. ಸ್ವಲ್ಪ ಸಮಯದ ನಂತರ ಚಾಲಕ ಆಟೋದ ಸೈಡ್ ಮಿರರ್‌ಗಳ ಮೂಲಕ ನಿಖರವಾಗಿ ನನ್ನ ಸ್ತನಗಳನ್ನು ನೋಡುತ್ತಿರುವುದನ್ನು ಗಮನಿಸಿದೆ. ಬಳಿಕ ನಾನು ಸೀಟಿನ ಬಲಕ್ಕೆ ತಿರುಗಿದೆ. ಅದರೂ ಚಾಲಕ ಕನ್ನಡಿಯ ಬಲಭಾಗದಲ್ಲಿ ನನ್ನನ್ನು ನೋಡಲು ಪ್ರಾರಂಭಿಸಿದ. ಇದರಿಂದ ನನಗೆ ತೀವ್ರ ಕಿರಿಕಿರಿ ಉಂಟಾಗಿ ಸೀಟಿನ ತೀರಾ ಎಡಕ್ಕೆ ತಿರುಗಿಕೊಂಡೆ. ಈ ವೇಳೆ ಯಾವುದೇ ಕನ್ನಡಿಯಲ್ಲೂ ನಾನು ಚಾಲಕನಿಗೆ ಕಾಣಿಸಲಿಲ್ಲ. ಇಷ್ಟಾದರೂ ಆತ ನನ್ನನ್ನು ಮತ್ತೆ ಮತ್ತೆ ನೋಡಲು ಶುರು ಮಾಡಿದ. ಇದಕ್ಕೂ ಮೊದಲು ನಾನು ಉಬರ್‌ನ ಸುರಕ್ಷತಾ ಕ್ರಮವನ್ನು ಬಳಸಲು ಪ್ರಯತ್ನಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ."

"ಮೊದಲ ಬಾರಿಗೆ ಉಬರ್​ ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿದಾಗ ಆಡಿಯೋ ಸ್ಪಷ್ಟವಾಗಿರಲಿಲ್ಲ. ನಾನು ನಂತರ ಸಂಖ್ಯೆಯನ್ನು ಮರು ಡಯಲ್ ಮಾಡಿದೆ. ಕಳಪೆ ನೆಟ್‌ವರ್ಕ್‌ನಿಂದ ಆಡಿಯೋ ಕೇಳಲಿಲ್ಲ. ಇದಾದ ಬಳಿಕ ನಾನು ಪೊಲೀಸರಿಗೆ ದೂರು ನೀಡುವುದಾಗಿ ಚಾಲಕನಿಗೆ ಎಚ್ಚರಿಕೆ ನೀಡಿದೆ. ಆದರೂ ಆತ ದುಷ್ಕೃತ್ಯ ಮುಂದುವರಿಸಿದ" ಎಂದು ಮಹಿಳೆ ವಿವರಿಸಿದ್ದಾರೆ.

ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ನೋಟಿಸ್‌ ನೀಡಿದ್ದು, ಮಾರ್ಚ್ 6 ರೊಳಗೆ ಕ್ರಮ ಕೈಗೊಂಡು ವರದಿ ಕೋರಿದೆ. ಉಬರ್‌ಗೆ ನೀಡಿದ ನೋಟಿಸ್‌ನಲ್ಲಿ, ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ತೆಗೆದುಕೊಂಡ ಕ್ರಮಗಳು ಮತ್ತು ಆರೋಪಿ ಆರೋಪಿ ಚಾಲಕ ವಿರುದ್ಧ ಜರುಗಿಸಿದ ಕ್ರಮದ ಬಗ್ಗೆ ವಿವರ ಕೇಳಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಯಾವುದೇ ಘರ್ಷಣೆ ನಡೆದಿಲ್ಲ ಎಂದ ತಮಿಳುನಾಡು ಡಿಜಿಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.