ಸೋನಿಪತ್(ಹರಿಯಾಣ): ಉದಯೋನ್ಮುಖ ಮಹಿಳಾ ಬಾಕ್ಸರ್ ಮೃತದೇಹ(Body of female boxer) ಅನುಮಾನಾಸ್ಪದ(suspicious condition) ರೀತಿಯಲ್ಲಿ ಬಾತ್ರೂಂನಲ್ಲಿ ಸಿಕ್ಕಿದ್ದು, ಅನೇಕ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಮಹಿಳಾ ಬಾಕ್ಸರ್ ಭಾವನಾ ಹರಿಯಾಣದ ಸೋನಿಪತ್ನ ಖರ್ಖೋಡಾದ ಬಾಕ್ಸಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು.
ಕಳೆದ ಮೂರು ದಿನಗಳ ಹಿಂದೆ ಸೋನಿಪತ್ನಲ್ಲಿ ಕುಸ್ತಿಪಟು ನಿಶಾ ದಹಿಯಾ(Nisha Dahiya) ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ಕ್ರೀಡಾಪಟುವಿನ ಸಾವಿನ ಸುದ್ದಿ ಮುನ್ನೆಲೆಗೆ ಬಂದಿದೆ. ಮಹಿಳಾ ಬಾಕ್ಸರ್ ಮೃತದೇಹ ಸ್ನಾನದ ಗೃಹದಲ್ಲಿ ಪತ್ತೆಯಾಗಿದೆ. ಮೃತದೇಹ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ವರದಿಗೋಸ್ಕರ ಕಾಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: Manipur ambush: ಉಗ್ರರ ದಾಳಿ ಖಂಡಿಸಿದ ನಮೋ, ಅಪರಾಧಿಗಳನ್ನ ಬಿಡಲ್ಲ ಎಂದ ರಕ್ಷಣಾ ಸಚಿವ
ಮಹಿಳಾ ಬಾಕ್ಸರ್ ಭಾವನಾ ಖರ್ಖೋಡಾದಲ್ಲಿ ಇತರೆ ಕ್ರೀಡಾಪಟುಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ಸ್ನಾನ ಮಾಡಲು ಬಾತ್ ರೂಂಗೆ ಹೋಗಿದ್ದರು. ತುಂಬಾ ಸಮಯವಾದರೂ ಹೊರಗೆ ಬರದಿದ್ದಾಗ ಸಹ ಆಟಗಾರರು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಬಾತ್ ರೂಮ್ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ತಕ್ಷಣವೇ ಮನೆಯ ಮಾಲೀಕರಿಗೆ ಸುದ್ದಿ ಮುಟ್ಟಿಸಲಾಗಿದೆ. ಬಾತ್ ರೂಂ ಬಾಗಿಲು ಒಡೆದು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ.
ಭಾವನಾ ಮೂಲತಃ ಉತ್ತರ ಪ್ರದೇಶದವರು ಎನ್ನಲಾಗಿದ್ದು, ಸೋನಿಪತ್ನಲ್ಲಿ ಬಾಕ್ಸಿಂಗ್ ತರಬೇತಿ(Boxing Academy) ಪಡೆಯುತ್ತಿದ್ದರು.