ನವದೆಹಲಿ: ಮ್ಯಾನ್ಮಾರ್ನಲ್ಲಿನ ಮಿಲಿಟರಿ ದಂಗೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ರೂಪಪಡೆದುಕೊಂಡಿದೆ. ಕೈಯಲ್ಲಿ ಚಾಕು, ಗನ್, ಹತ್ಯಾರಗಳು, ಖಡ್ಗ. ಮನೆ-ಮನೆಯಲ್ಲೂ ದ್ವೇಷದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಸೇನೆಯ ವಿರುದ್ಧ ಜನರ ಆಕ್ರೋಶ ತಣ್ಣಗಾಗುತ್ತಿಲ್ಲ. ಸೇನೆ ಜನರನ್ನು ಹತ್ಯೆ ಮಾಡುವುದನ್ನು ಬಿಡುತ್ತಿಲ್ಲ. ಮ್ಯಾನ್ಮಾರ್‌ನ ಚಿನ್‌ನ ಹಿಲ್ಸ್‌ನಲ್ಲಿರುವ ಸಂಸದೀಯ ಕ್ಷೇತ್ರವೊಂದರ ಸಂಸತ್ ಸದಸ್ಯ (ಸಂಸದ) ಮತ್ತು ಆತನ ಕುಟುಂಬವು ಮಿಲಿಟರಿಯ ಬಂದೂಕಿನ ಹದ್ದಿನ ಕಣ್ಣಿನಿಂದ ಪಾರಾಗಿ ಬಂದು ಭಾರತ ತಲುಪಿದೆ.
ಭದ್ರತೆ ಮತ್ತು ಸುರಕ್ಷತೆಯ ಸ್ಪಷ್ಟ ಕಾರಣಗಳಿಗಾಗಿ ಹೆಸರಿಸದ ಸಂಸದ, ತನ್ನ ಖಾಸಗಿ ವಾಹನದ ಮೂಲಕ ತನ್ನ ಕುಟುಂಬದೊಂದಿಗೆ ಗಡಿಯನ್ನು ದಾಟಿ ಮಿಜೋರಾಂನ ದಕ್ಷಿಣದ ಜಿಲ್ಲೆಯ ಸಿಯಾಹಾವನ್ನು ಪ್ರವೇಶಿಸಿದ್ದಾರೆ ಎಂದು ಮಿಜೋರಾಂನಿಂದ ದೂರವಾಣಿಯಲ್ಲಿ ಈಟಿವಿ ಭಾರತಗೆ ಉನ್ನತ ಮೂಲವೊಂದು ತಿಳಿಸಿದೆ.
ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ ನಂತರವೂ, ಸಂಸದನು ತನ್ನನ್ನು ಹಿಂಬಾಲಿಸಬಹುದೆಂಬ ಆತಂಕಕ್ಕೂ ಪಶ್ಚಾತ್ತಾಪ ಪಡಲಿಲ್ಲ. ತನ್ನ ವಾಹನವನ್ನು ಮಿಜೋರಾಂನ ತುಯಿಪಾಂಗ್ ಗ್ರಾಮಕ್ಕೆ ಓಡಿಸಿಕೊಂಡು ಬಂದಿದ್ದಾರೆ ಎಂದು ಹೇಳಿದೆ.
ಗಡಿಯಿಂದ ತುಪಾಂಗ್ ಮಿಜೋರಾಂ ಒಳಗೆ ಸುಮಾರು 30 ಕಿ.ಮೀ ದೂರದಲ್ಲಿದೆ. ತುಯಿಪಾಂಗ್‌ನಲ್ಲಿ ಸಂಸದ ಮತ್ತು ಆತನ ಕುಟುಂಬಕ್ಕೆ ಸಿವಿಲ್ ಎಸ್‌ಡಿಒ ಸರ್ಕ್ಯೂಟ್ ಹೌಸ್‌ನಲ್ಲಿ ಆಶ್ರಯ ನೀಡಲಾಗಿದೆ.
ಸಂಸದರು ತಮ್ಮ ವಾಹನವನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸಲು ಪ್ರಯತ್ನಿಸಿದರು. ಆದರೆ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ಗಾರ್ಡ್‌ಗಳು ಅದಕ್ಕೆ ಅನುಮತಿ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಸದರು ಇಂದು ಐಜಾಲ್ ತಲುಪಿದ್ದಾರೆಂದು ತಿಳಿದು ಬಂದಿದೆ. ಅಲ್ಲಿ ಅವರು ಮತ್ತು ಅವರ ಕುಟುಂಬವನ್ನು ರಾಜ್ಯ ಸರ್ಕಾರ ಸ್ಥಾಪಿಸಿದ ಶಿಬಿರಗಳಲ್ಲಿ ಇರಿಸಲಾಗುತ್ತದೆ. ಇವರ ಪ್ರವೇಶದೊಂದಿಗೆ, ಮ್ಯಾನ್ಮಾರ್‌ನ ಒಟ್ಟು 17 ಸಂಸದರು ಈಗ ಮಿಜೋರಾಂನಲ್ಲಿದ್ದಾರೆ. ಸಂಸದರು ಪೂರ್ವ ಪ್ರಾಂತ್ಯದ ಸೋಮ ರಾಜ್ಯ, ಮಾಂಡಲೆ ಮತ್ತು ಅರಾಕನ್ ಮೂಲದವರು.