ಕೊಲ್ಹಾಪುರ, ಮಹಾರಾಷ್ಟ್ರ: ಮಗಳ ಪ್ರೇಮ ಪ್ರಕರಣಕ್ಕೆ ವಿರೋಧ ವ್ಯಕ್ತಪಡಿಸಿದ ತಂದೆಯೋರ್ವ, ಆಕೆಯನ್ನು ನದಿಗೆ ತಳ್ಳಿ ಕೊಂದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಕೊಲ್ಹಾಪುರದ ಶಿರೋಲ್ ತಾಲೂಕಿನ ದತ್ತವಾಡ ನಿವಾಸಿಯಾದ ದಶರಥ್ ಕಾಟ್ಕರ್ ಎಂಬಾತ ತನ್ನ ಮಗಳು ಸಾಕ್ಷಿ (17) ಕಾಣೆಯಾಗಿದ್ದಾಳೆ ಎಂದು ಆಗಸ್ಟ್ 14ರಂದು ಕುರುಂದ್ವಾಡ್ ಪೊಲೀಸರಿಗೆ ದೂರು ನೀಡಿದ್ದನು. ಪೊಲೀಸರು ತನಿಖೆ ನಡೆಸಿದ ನಂತರ ತಂದೆಯೇ ಮಗಳನ್ನು ನದಿಗೆ ತಳ್ಳಿ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.
ನನ್ನ ಮಗಳನ್ನು ಅಪಹರಿಸಲಾಗಿದೆ ಎಂದು ದಶರಥ್ ಕಾಟ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸ್ ಕಾನ್ಸ್ಟೇಬಲ್ ಅನಿಲ್ ಚೌಹಾಣ್ ಎಂಬಾತ ಅನುಮಾನಗೊಂಡ ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ತಾನೇ ಮಗಳನ್ನು ದೂಧಗಂಗಾ ನದಿಯ ದನ್ವಾಡ್ ಸೇತುವೆಯಿಂದ ತಳ್ಳಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಾಕ್ಷಿಯ ಶವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ