ETV Bharat / bharat

ಪೇಪರ್​ ಪ್ಲೇಟ್​ ತಯಾರಿಕಾ ಘಟಕದಲ್ಲಿ ಬೆಂಕಿ: ತಂದೆಯೊಂದಿಗೆ ಜನ್ಮದಿನದಂದೇ ಅಸುನೀಗಿದ ಪುತ್ರ! - ಪೇಪರ್ ಪ್ಲೇಟ್ ತಯಾರಿಕಾ ಘಟಕ

ಆಂಧ್ರ ಪ್ರದೇಶದಲ್ಲಿ ದುರಂತ ಘಟನೆಯೊಂದು ನಡೆದಿದೆ. ಪೇಪರ್ ಪ್ಲೇಟ್ ತಯಾರಿಕಾ ಘಟಕಕ್ಕೆ ಬೆಂಕಿ ತಗುಲಿ ತಂದೆ, ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

father and son died  Paper Plate Manufacturing Unit fire incident  fire incident at Andhra Pradesh  ಪೇಪರ್​ ಪ್ಲೇಟ್​ ತಯಾರಿಕ ಘಟಕದಲ್ಲಿ ಬೆಂಕಿ  ತಂದೆ ಮಗ ಸೇರಿ ಮೂವರು ಅಗ್ನಿ ಆಹುತಿ  ಪೇಪರ್ ಪ್ಲೇಟ್ ತಯಾರಿಕಾ ಘಟಕ  ಭಾರೀ ಅಗ್ನಿ ಅವಘಡ
ಪೇಪರ್​ ಪ್ಲೇಟ್​ ತಯಾರಿಕ ಘಟಕದಲ್ಲಿ ಬೆಂಕಿ
author img

By

Published : Sep 21, 2022, 8:07 AM IST

Updated : Sep 21, 2022, 10:24 AM IST

ಚಿತ್ತೂರು(ಆಂಧ್ರ ಪ್ರದೇಶ): ಇಲ್ಲಿನ ಜಿಲ್ಲಾ ಕೇಂದ್ರದಲ್ಲಿರುವ ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕಳೆದ ಮಧ್ಯರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ಮೃತರನ್ನು ಕಂಪನಿ ಮಾಲೀಕ ಭಾಸ್ಕರ್, ಅವರ ಮಗ ಡಿಲ್ಲಿ ಬಾಬು ಮತ್ತು ಬಾಲಾಜಿ ಎಂದು ಗುರುತಿಸಲಾಗಿದೆ.

ಪೇಪರ್​ ಪ್ಲೇಟ್​ ತಯಾರಿಕಾ ಘಟಕದಲ್ಲಿ ಬೆಂಕಿ

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅನಾಹುತ ನಡೆದಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂರು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಪೇಪರ್ ಪ್ಲೇಟ್ ತಯಾರಿಕಾ ಘಟಕ ನಡೆಸಲಾಗುತ್ತಿದೆ. ಕೆಳಗಿನ ಮಹಡಿಯಿಂದ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತ್ತು. ಈ ಸಂದರ್ಭದಲ್ಲಿ ಮೂವರು ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಡಿಲ್ಲಿ ಬಾಬು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಇವರು ತಮ್ಮ ಜನ್ಮದಿನದಂದೇ ಮೃತಪಟ್ಟಿದ್ದು ಸಂಬಂಧಿಕರಿಗೆ ತೀವ್ರ ಆಘಾತ ಉಂಟುಮಾಡಿದೆ.

ಇದನ್ನೂ ಓದಿ: ಪ್ರಯಾಣಿಕರಿದ್ದ ಬಸ್​ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ.. ಸಿಟಿ ಬಸ್ ಸುಟ್ಟು ಕರಕಲು

Last Updated : Sep 21, 2022, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.