ETV Bharat / bharat

ಕಾಮುಕ ತಂದೆಯಿಂದಲೇ ಐದು ವರ್ಷದ ಮಗಳ ಮೇಲೆ ರೇಪ್​ - ಅಪ್ರಾಪ್ತೆ ಮೇಲೆ ಜಾರ್ಖಂಡ್​ನಲ್ಲಿ ಅತ್ಯಾಚಾರ

ದೇಶದಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಪ್ರಕರಣ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಆಂಧ್ರಪ್ರದೇಶ ಹಾಗೂ ಜಾರ್ಖಂಡ್​ನಲ್ಲಿ ಇಂದು ಎರಡು ಘಟನೆ ನಡೆದಿರುವುದು ಬೆಳಕಿಗೆ ಬಂದಿವೆ.

father raped five year old child in Andra pradesh

author img

By

Published : Apr 25, 2022, 6:32 PM IST

Updated : Apr 27, 2022, 10:44 AM IST

ಪಲ್ನಾಡು(ಆಂಧ್ರಪ್ರದೇಶ): ಐದು ವರ್ಷದ ಮಗಳ ಮೇಲೆ ಕಾಮುಕ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಪಲ್ನಾಡುದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನೂರ್ ಭಾಷಾ ಆದಂ ಶಾಫಿ 2016ರಲ್ಲಿ ಹುಸೇನ್ ಬಿ ಜೊತೆ ಮದುವೆ ಮಾಡಿಕೊಂಡಿದ್ದರು. ಇವರಿಗೆ ಒಂದು ಗಂಡು ಮಗು ಹಾಗೂ ಐದು ವರ್ಷದ ಹೆಣ್ಣು ಮಗುವಿದೆ. ಆದಂ ಶಾಫಿ, ಚಿಲಕಲೂರಿಪೇಟೆಯ ಕಲಾಮಂದಿರ ಸೆಂಟರ್​​ನಲ್ಲಿ ದಿನಸಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.

ಪ್ರತಿ ದಿನ ಗಂಡು ಮಗು ತಾಯಿ ಜೊತೆ ಹಾಗೂ ಮಗಳು ತಂದೆಯ ಪಕ್ಕದಲ್ಲಿ ಮಲಗುತ್ತಿತ್ತು. ಒಂದು ದಿನ ಹೆಣ್ಣು ಮಗುವಿಗೆ ತಾಯಿ ಸ್ನಾನ ಮಾಡಿಸುತ್ತಿದ್ದ ವೇಳೆ ತನಗೆ ನೋವು ಆಗುತ್ತಿದೆ ಎಂದು ಹೇಳಿಕೊಂಡಿದ್ದು, ರಾತ್ರಿ ವೇಳೆ ತನ್ನನ್ನು ತಂದೆ ಪಕ್ಕದಲ್ಲಿ ಮಲಗಿಸಬೇಡ ಎಂದು ಹೇಳಿಕೊಂಡಿದೆ. ಈ ವೇಳೆ, ತಾಯಿ ಮಗುವಿಗೆ ಸಮಾಧಾನ ಮಾಡಿದ್ದಾಳೆ.

ಎಂದಿನಂತೆ ಎಲ್ಲರೂ ಭಾನುವಾರ ರಾತ್ರಿ ಊಟ ಮಾಡಿ ಮಗಲಿದ್ದಾರೆ. ಈ ವೇಳೆ ಗಂಡ ಹೊರಗೆ ಹೋಗಿ ಬರುವುದಾಗಿ ಹೇಳಿ ಮರಳಿ 11 ಗಂಟೆಗೆ ವಾಪಸ್​ ಆಗಿದ್ದಾನೆ. ಈ ವೇಳೆ ಗಂಡ ಏನು ಮಾಡುತ್ತಾನೆಂದು ನೋಡಲು ಹುಸೇನ್ ಬಿ​ ಮಲಗಿರುವ ರೀತಿ ನಟನೆ ಮಾಡಿದ್ದಾಳೆ. ಹೆಂಡ್ತಿ ಮಲಗಿದ್ದನ್ನ ಕಂಡಿರುವ ಗಂಡ ಸೆಲ್​ ಫೋನ್​​ನಲ್ಲಿ ನೀಲಿ ಚಿತ್ರ ನೋಡುತ್ತಾ, ಮಗಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ.

ಇದನ್ನೂ ಓದಿ: ಜಾಮೀನು ಸಿಕ್ಕ ಕೆಲ ನಿಮಿಷದಲ್ಲೇ ಮತ್ತೆ ಬಂಧನಕ್ಕೊಳಗಾದ ಶಾಸಕ ಜಿಗ್ನೇಶ್ ಮೇವಾನಿ

ಇದನ್ನ ಗಮನಿಸಿರುವ ಪತ್ನಿ ಹುಸೇನ್ ಬಿ, ತಕ್ಷಣವೇ ಪತಿಯನ್ನ ಹಿಡಿದು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ. ಮಹಿಳೆ ದೂರಿನನ್ವಯ ಇದೀಗ ಆರೋಪಿಯ ಬಂಧನ ಮಾಡಲಾಗಿದ್ದು, ಹೆಣ್ಣು ಮಗುವನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ಜಾರ್ಖಂಡ್​ನ ರಾಂಚಿಯಲ್ಲೂ ರೇಪ್​: ಇಲ್ಲಿನ ಚಾನ್ಹೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. 8ನೇ ತರಗತಿ ಓದುತ್ತಿರುವ ಬಾಲಕಿ ಮೇಲೆ ದುಷ್ಕೃತ್ಯವೆಸಗಲಾಗಿದೆ. ಫೋನ್ ಮಾಡಿ ಹುಡುಗಿಯನ್ನ ಸ್ಥಳಕ್ಕೆ ಕರೆಯಿಸಿಕೊಂಡ ಬಳಿಕ, ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಮಾಡಲಾಗಿದೆ.

Last Updated : Apr 27, 2022, 10:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.