ETV Bharat / bharat

ಕಳ್ಳಭಟ್ಟಿ ದುರಂತದಲ್ಲಿ ತಂದೆ ಕಳೆದುಕೊಂಡ ನಾಲ್ವರು ಮಕ್ಕಳು: ಶಿಕ್ಷಣದ ಹೊಣೆ ಹೊತ್ತ ಪೊಲೀಸರು

ಗುಜರಾತ್​ನ ಬೋಟಾಡ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತದಲ್ಲಿ ತಂದೆಯನ್ನು ಕಳೆದುಕೊಂಡು ನಾಲ್ವರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸರು ವಹಿಸಿಕೊಂಡಿದ್ದಾರೆ.

father-of-4-children-died-in-the-latha-scandal-now-police-will-take-responsibility-for-children
ಗುಜರಾತ್​ ಕಳ್ಳಭಟ್ಟಿ ದುರಂತದಲ್ಲಿ ತಂದೆ ಕಳೆದುಕೊಂಡ ನಾಲ್ವರು ಮಕ್ಕಳು: ಶಿಕ್ಷಣದ ಹೊಣೆ ಹೊತ್ತ ಪೊಲೀಸರು
author img

By

Published : Jul 29, 2022, 5:36 PM IST

ಬೋಟಾಡ್ (ಗುಜರಾತ್​): ಗುಜರಾತ್​ನಲ್ಲಿ ಕಳ್ಳಭಟ್ಟಿ ಸೇವಿಸಿ ಇದುವರೆಗೆ 57 ಜನರು ಬಲಿಯಾಗಿದ್ದಾರೆ. ಇದರ ಪರಿಣಾಮ ಮೃತರ ಕುಟುಂಬಗಳು ದಿಕ್ಕು ತೋಚದಂತಹ ಪರಿಸ್ಥಿತಿಗೆ ಸಿಲುಕಿವೆ. ಅಲ್ಲದೇ, ಪುಟ್ಟ ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇದರ ನಡುವೆ ಪೊಲೀಸರು ಮಾನವೀಯತೆ ಮರೆದಿದ್ದು, ನಾಲ್ವರು ಮಕ್ಕಳನ್ನು ದತ್ತು ಪಡೆದು ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಬೋಟಾಡ್ ಜಿಲ್ಲೆಯ ದೇವಗಣ ಗ್ರಾಮದ 40 ವರ್ಷದ ಕಾನಾ ಶೇಖ್ಲಿಯಾ ಎಂಬುವರು ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಈತನಿಗೆ ಒಬ್ಬ ಪುತ್ರಿ ಹಾಗೂ ಮೂವರು ಪುತ್ರರು ಸೇರಿ ನಾಲ್ವರು ಮಕ್ಕಳು ಇದ್ದಾರೆ. ಕಾನಾ ಶೇಖ್ಲಿಯಾ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಹೀಗಾಗಿ ಈಗ ತಂದೆಯನ್ನು ಕಳೆದುಕೊಂಡ ಈ ನಾಲ್ವರು ಮಕ್ಕಳು ನಿರ್ಗತಿಕರಾಗಿದ್ದಾರೆ. ಅಲ್ಲದೇ, ಮಕ್ಕಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತೆ ಆಗಿತ್ತು. ಈ ವಿಷಯ ಪೊಲೀಸರು ದತ್ತು ತೆಗೆದುಕೊಳ್ಳುವ ಮೂಲಕ ನೆರವಿಗೆ ಬಂದಿದ್ದಾರೆ.

father-of-4-children-died-in-the-latha-scandal-now-police-will-take-responsibility-for-children
ಗುಜರಾತ್​ ಕಳ್ಳಭಟ್ಟಿ ದುರಂತದಲ್ಲಿ ತಂದೆ ಕಳೆದುಕೊಂಡ ನಾಲ್ವರು ಮಕ್ಕಳು: ಶಿಕ್ಷಣದ ಹೊಣೆ ಹೊತ್ತ ಪೊಲೀಸರು

ಕಳ್ಳಭಟ್ಟಿ ಸೇವಿಸಿ ಮೃತಪಟ್ಟರ ಬಗ್ಗೆ ನಮಗೆ ಸಹಾನುಭೂತಿ ಇದೆ. ತಂದೆ ಕಾನಾ ಶೇಖ್ಲಿಯಾ ಈ ನಾಲ್ವರು ಮಕ್ಕಳು ಸದ್ಯ ತಮ್ಮ ಚಿಕ್ಕಪ್ಪ ಗತುರ್​ಭಾಯ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಇವರ ಸಂಪೂರ್ಣವಾದ ಶಿಕ್ಷಣ ವೆಚ್ಚವನ್ನೇ ಪೊಲೀಸರೇ ಭರಿಸಲು ನಿರ್ಧರಿಸಿದ್ದೇವೆ. ಕಾಲೇಜು ಶಿಕ್ಷಣ ಸೇರಿದಂತೆ ಎಲ್ಲ ವೆಚ್ಚವನ್ನು ಭರಿಸಲಾಗುವುದು ಎಂದು ಡಿಎಸ್​ಪಿ ಕರಂರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಕಳ್ಳಭಟ್ಟಿ ದುರಂತ: ಮೃತ ಸಂಖ್ಯೆ 57ಕ್ಕೆ ಏರಿಕೆ, ಇಬ್ಬರು ಎಸ್​ಪಿಗಳ ಎತ್ತಂಗಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.